Friday, May 10, 2024

ಟಿಪ್ಪು ಸುಲ್ತಾನ್​ನ ಮೊದಲ ಹೆಸರು ತಿಪ್ಪೇಸ್ವಾಮಿ ಎಂದ ಕಾಂಗ್ರೆಸ್​ ನಾಯಕ

ಬೆಂಗಳೂರು: ಟಿಪ್ಪು ಸುಲ್ತಾನ್ ನಾಯಕನಹಟ್ಟಿಯ ತಿಪ್ಪೇಸ್ವಾಮಿ ವರಪ್ರಸಾದಿಂದ ಹುಟ್ಟಿರುವುದಕ್ಕೆ ಅವರಿಗೆ ತಿಪ್ಪೇಸ್ವಾಮಿ ಅಂತಾ ಹೆಸರಿಟ್ಟಿದ್ಧಾರೆ ಎಂದು ಕಾಂಗ್ರೆಸ್ ನಾಯಕ ಜಿ.ಸಿ ಚಂದ್ರಶೇಖರ್ ತಮ್ಮ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ಧಾರೆ. 

ಈ ಕುರಿತು ಟ್ವೀಟ್ ಮಾಡಿದ ಕಾಂಗ್ರೆಸ್ ನಾಯಕ ಜೆ.ಸಿ ಚಂದ್ರಶೇಖರ್ ‘ತುಂಬಾ ಜನಕ್ಕೆ ಗೊತ್ತಿರಲಿಕ್ಕಿಲ್ಲ ಟಿಪ್ಪು ಸುಲ್ತಾನ್ ನ ಮೂಲ ಹೆಸರು ತಿಪ್ಪೇಸ್ವಾಮಿ ಎಂದು. ತಿಪ್ಪೇಸ್ವಾಮಿಯ ವರಪ್ರಸಾದವಾಗಿ ಟಿಪ್ಪುಸುಲ್ತಾನ್ ಜನಿಸಿದರು. ಹೀಗಾಗಿ, ಅವರಿಗೆ ಮೊದಲು ತಿಪ್ಪೇಸ್ವಾಮಿ ಅಂತಾ ಹೆಸರಿಟ್ಟಿದ್ದರು. ನಂತರ ಟಿಪ್ಪುವಾಗಿದೆ. ಆ ಭಾಗದ ಜನರೇ ಇದನ್ನು ಈಗಲೂ ಹೇಳುತ್ತಾರೆ’ ಎಂದು ಬರೆದುಕೊಂಡಿದ್ದಾರೆ.

ಟಿಪ್ಪು ಸುಲ್ತಾನ್​ ಬಗ್ಗೆ ರಾಜಕೀಯ ಪಕ್ಷಗಳಲ್ಲಿ ಭಾರೀ ವಿವಾದಗಳೇ ಆದವು. ಅದಲ್ಲದೇ ಟಿಪ್ಪುವಿನ ಪರ-ವಿರೋಧಕ್ಕಾಗಿ ಪ್ರತಿಭಟನೆಗಳು ಸಹ ನಡೆದಿದೆ. ಕೊನೆಗೆ ಟಿಪ್ಪು ಜಯಂತಿ ಆಚರಣೆ ವಿಚಾರಕ್ಕೆ ರಾಜ್ಯದಲ್ಲಿ ಗಲಭೆ, ದೊಂಬಿಗಳು ನಡೆದಿದೆ. ಆದರೆ ಟಿಪ್ಪು ಸುಲ್ತಾನ್ ಯಾರು,ಅವನ ಮೂಲ ಹೆಸರು ಏನು ಎಂಬುದಕ್ಕೆ ನಿಖರ ಕಾರಣ ಗೊತ್ತಿಲ್ಲ.ಸದ್ಯ ಎಲ್ಲೂ ನಿಖರವಾಗಿ ದಾಖಲೆಗಳಲ್ಲಿ ಇಲ್ಲ. ಇದೀಗ ಟಿಪ್ಪು ಸುಲ್ತಾನ್​ನ ಮೂಲ ಹೆಸರಿನ ಬಗ್ಗೆ ಕಾಂಗ್ರೆಸ್ ಟ್ವೀಟ್ ಮಾಡಿದ್ದು, ರಾಜ್ಯದಲ್ಲಿ ವಿವಾದ ಸೃಷ್ಟಿಯಾಗುತ್ತಾ? ಎಂಬುವುದನ್ನು ಕಾದುನೋಡಬೇಕಿದೆ.

RELATED ARTICLES

Related Articles

TRENDING ARTICLES