Thursday, April 25, 2024

ಇನ್ನೂ 25 ವರ್ಷ ಕಾಂಗ್ರೆಸ್ ಸರ್ಕಾರ ಇರುತ್ತೆ : ಕೆ.ಎನ್. ರಾಜಣ್ಣ

ಹಾಸನ : ನಾವು ಇನ್ನೂ 25 ವರ್ಷ ಇರ್ತೀವಿ ಎನ್ನುವ ವಿಶ್ವಾಸ ನಮಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್. ರಾಜಣ್ಣ ವಿಶ್ವಾಸ ವ್ಯಕ್ತಪಡಿಸಿದರು.

ಸಿದ್ದರಾಮಯ್ಯ ಬಿಟ್ಟರೆ ಬೇರೆ ಯಾರೂ ಸಿಎಂ ಆಗಲ್ಲ ಎಂಬ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ರಾಜಕಾರಣದಲ್ಲಿ ಕಾಂಗ್ರೆಸ್ 25 ವರ್ಷ ಇರುತ್ತೆ ಅಂತ ಅವರು ಹೇಳಲು ಆಗುತ್ತಾ? ನಾವು ನಿರೀಕ್ಷೆ ಮಾಡಲು ಆಗುತ್ತಾ? ಅವರು ಹೇಳುವಾಗಿಲ್ಲ, ನಾವು ನಿರೀಕ್ಷೆ ಮಾಡುವ ಆಗಿಲ್ಲ ಎಂದು ಹೇಳಿದರು.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸ್ಪರ್ಧೆ ವಿಚಾರವಾಗಿ ಮಾತನಾಡಿ, ಮಲ್ಲಿಕಾರ್ಜುನ ಖರ್ಗೆ ಅವರು ಸ್ಪರ್ಧೆ ಮಾಡಬೇಕು ಎಂದು ಅವರ ಮನಸ್ಸಿನಲ್ಲಿ ಬಂದರೆ ಇಡೀ ದೇಶದಲ್ಲಿ ಯಾವ ಕ್ಷೇತ್ರದಲ್ಲಿ ಬೇಕಾದರೂ ಸ್ಪರ್ಧೆ ಮಾಡಬಹುದು. ಖರ್ಗೆ ಅವರೇ ಬಿ ಫಾರಂ ಕೊಡೋರು. ಸ್ಪರ್ಧೆ ಮಾಡೋದು ಅವರಿಗೆ ಬಿಟ್ಟಂತಹ ವಿಚಾರ. ಅವರು ಎಲ್ಲಿ ಬೇಕಾದರೂ ಸ್ಪರ್ಧೆ ಮಾಡಲಿ, ನಮ್ಮ ಸ್ವಾಗತ ಇದೆ ಎಂದು ತಿಳಿಸಿದರು.

ಕಡೆಯಿಂದ ನಮ್ಮ ಕಡೆ ಮತ ಬರ್ತಾವೆ

ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡ ಮತದಾನ ವಿಚಾರ ಕುರಿತು ಮಾತನಾಡಿ, ಅಡ್ಡ ಮತದಾನ ನಮ್ಮ ಕಡೆಯಿಂದ ಆ ಕಡೆ ಹೋಗಲ್ಲ. ಆ ಕಡೆಯಿಂದ ನಮ್ಮ ಕಡೆ ಬರ್ತಾವೆ. ಅಡ್ಡ ಮತದಾನ ಯಾವತ್ತೂ ಅಧಿಕಾರ ಇರುವ ಕಡೆಯಿಂದ ಅಧಿಕಾರ ಇಲ್ಲದ ಕಡೆ ಹೋಗಲ್ಲ. ಅಧಿಕಾರ ಇಲ್ಲದ ಕಡೆಯಿಂದ ಅಧಿಕಾರ ಇರುವ ಕಡೆಗೆ ಬರ್ತವೆ. ಯಾವುದೇ ಕಾರಣಕ್ಕೂ ನಮಗೆ ಆತಂಕ ಇಲ್ಲ, ಇನ್ನೂ ಹೆಚ್ಚು ಮತ ಬರ್ತವೆ ಎಂದು ಕೆ.ಎನ್. ರಾಜಣ್ಣ ವಿಶ್ವಾಸ ವ್ಯಕ್ತಪಡಿಸಿದರು.

RELATED ARTICLES

Related Articles

TRENDING ARTICLES