Friday, May 17, 2024

ಅಶ್ವಿನ್ ದಾಳಿಗೆ ಆಂಗ್ಲರು ಧೂಳಿಪಟ.. 145 ರನ್​ಗಳಿಗೆ ಇಂಗ್ಲೆಂಡ್ ಆಲೌಟ್

ಬೆಂಗಳೂರು : ಭಾರತದ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಹಾಗೂ ಕುಲದೀಪ್ ಯಾದವ್ ಸ್ಪಿನ್ ಮೋಡಿಗೆ ಆಂಗ್ಲರು ಧೂಳಿಪಟವಾದರು.

ರಾಂಚಿಯಲ್ಲಿ ನಡೆಯುತ್ತಿರುವ ಭಾರತ ಹಾಗೂ ಇಂಗ್ಲೆಂಡ್​ ನಡುವಿನ ನಾಲ್ಕನೇ ಟೆಸ್ಟ್​ ಪಂದ್ಯದ ಎರಡನೇ ಇನ್ನಿಂಗ್ಸ್​ನಲ್ಲಿ ಇಂಗ್ಲೆಂಡ್​ ಆಲೌಟ್​ ಆಗಿದೆ.

ಭಾರತವನ್ನು ಮೊದಲ ಇನ್ನಿಂಗ್ಸ್​ನಲ್ಲಿ 307 ರನ್​ಗಳಿಗೆ ಆಲೌಟ್​ ಮಾಡಿ ಆಂಗ್ಲ ಪಡೆ ಬ್ಯಾಟಿಂಗ್ ಆರಂಭಿಸಿತು. 53.5 ಓವರ್​ಗಳಲ್ಲಿ ಕೇವಲ 145 ರನ್​​ ಗಳಿಸಿ ತನ್ನೆಲ್ಲ ವಿಕೆಟ್ ಕಳೆದುಕೊಂಡಿತು.. ಈ ಮೂಲಕ ಭಾರತದ ಗೆಲುವಿಗೆ 192 ರನ್​ಗಳ ಟಾರ್ಗೆಟ್ ನೀಡಿತು.

ಇಂಗ್ಲೆಂಡ್​ ಪರ ಝಾಕ್ ಕ್ರಾಲಿ ಅರ್ಧಶತಕ (60) ಹಾಗೂ ಜಾನಿ ಬೈರ್ಸ್ಟೋವ್ 30 ರನ್​ ಗಳಿಸಿದ್ದು ಬಿಟ್ಟರೆ ಉಳಿದ ಯಾವ ಬ್ಯಾಟರ್​ಗಳು ಸಹ ಭಾರತದ ಬೌಲಿಂಗ್​ ದಾಳಿಗೆ ಎದೆಯೊಡ್ಡಿ ಹೋರಾಟ ನಡೆಸಲಿಲ್ಲ. ಇಂಗ್ಲೆಂಡ್​ನ ಮೂವರು ಬ್ಯಾಟರ್​ಗಳು ಶೂನ್ಯಕ್ಕೆ ನಿರ್ಗಮಿಸಿದರು.

ರವಿಚಂದ್ರನ್ ಅಶ್ವಿನ್​ 5 ವಿಕೆಟ್

ಭಾರತದ ಪರ ರವಿಚಂದ್ರನ್ ಅಶ್ವಿನ್​ 5 ವಿಕೆಟ್ ಪಡೆದು ಮಿಂಚಿದರು. ಕುಲದೀಪ್​ ಯಾದವ್ 4 ಹಾಗೂ ರವೀಂದ್ರ ಜಡೇಜಾ 1 ವಿಕೆಟ್ ಪಡೆದು ಆಂಗ್ಲರಿಗೆ ಮುಳುವಾದರು.

RELATED ARTICLES

Related Articles

TRENDING ARTICLES