Thursday, April 25, 2024

Murder Case: ಕುಡುಕ ಅಳಿಯನನ್ನು ಕೊಡಲಿಯಿಂದ ಕೊಚ್ಚಿ ಕೊಲೆಗೈದ ಮಾವ

ಚಾಮರಾಜನಗರ: ಮಾವನೊಬ್ಬ ಅಳಿಯನನ್ನೇ ಕೊಚ್ಚಿ ಕೊಲೆಗೈದಿರುವ ಘಟನೆ ಚಾಮರಾಜನಗರದ‌ ಜನ್ನೂರು ಗ್ರಾಮದಲ್ಲಿ ನಡೆದಿದೆ. ಉಮೇಶ್ (28) ಹತ್ಯೆಯಾದವನು. ಮಾವ ನಂಜುಂಡಯ್ಯ ಆರೋಪಿ ಆಗಿದ್ದಾರೆ.

ಹುಬ್ಬಳ್ಳಿ ಮೂಲದ ಉಮೇಶ್ (28) ನಿತ್ಯ ಕುಡಿದು ಬಂದು ನಂಜುಂಡಯ್ಯರ ಮಗಳಿಗೆ ತೊಂದರೆ ಕೊಡುತ್ತಿದ್ದ. ಲಾರಿ ಚಾಲಕನಾಗಿ ಕೆಲಸ ಮಾಡುತ್ತಿದ್ದ ಉಮೇಶ್ ಕುಡಿತವನ್ನೇ ಚಟವನ್ನಾಗಿಸಿಕೊಂಡಿದ್ದ. ದುಡಿದ ದುಡ್ಡನ್ನೆಲ್ಲ ಕುಡಿತಕ್ಕೆ ಹಾಕುತ್ತಿದ್ದ. ಮಾತ್ರವಲ್ಲ ಕುಡಿದು ಬಂದು ಪತ್ನಿಗೆ ಹೊಡೆದು ಬಡಿದು ಮಾಡುತ್ತಿದ್ದ.

ಹೀಗೆ ನಿನ್ನೆ ಗುರುವಾರ ರಾತ್ರಿಯೂ ಕುಡಿದು ಬಂದು ಗಲಾಟೆ ಮಾಡಿದ್ದ. ಇದರಿಂದ ರೋಸಿ ಹೋಗಿ ಅಳಿಯನನ್ನು ಕೊಡಲಿಯಿಂದ ಕೊಚ್ಚಿ ನಂಜುಂಡಯ್ಯ ಕೊಲೆ ಮಾಡಿದ್ದಾರೆ. ಉಮೇಶ್‌ ಮುಖಕ್ಕೆ ಕೊಡಲಿಯಿಂದ ಹೊಡೆದು ಛಿದ್ರ ಮಾಡಲಾಗಿದ್ದು, ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಕುದೇರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಕುದೇರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮಾವ ನಂಜುಂಡಯ್ಯನನ್ನು ಬಂಧಿಸಿ ವಿಚಾರಣೆಯನ್ನು ನಡೆಸುತ್ತಿದ್ದಾರೆ.

RELATED ARTICLES

Related Articles

TRENDING ARTICLES