Thursday, April 25, 2024

ಗುಜರಾತ್​ಗೆ ಸಂಕಷ್ಟ.. IPLನಿಂದ ಶಮಿ ಔಟ್, ರಶೀದ್ ಖಾನ್ ಆಡುವುದು ಡೌಟ್

ಬೆಂಗಳೂರು : ಚೊಚ್ಚಲ ಆವೃತ್ತಿಯಲ್ಲೇ ಐಪಿಎಲ್​ ಚಾಂಪಿಯನ್ಸ್​ ಕಿರೀಟ ಮುಡಿಗೇರಿಸಿಕೊಂಡಿದ್ದ ಗುಜರಾತ್ ಟೈಟಾನ್ಸ್​ ಸದ್ಯ ಸಂಕಷ್ಟದ ಕಾಲ ಎದುರಿಸುತ್ತಿದೆ.

ಈ ಹಿಂದೆ ತಂಡದ ನಾಯಕರಾಗಿದ್ದ ಹಾರ್ದಿಕ್ ಪಾಂಡ್ಯ ತಂಡವನ್ನು ತೊರೆದಿದ್ದಾರೆ. ಇದೀಗ ಪ್ರಮುಖ ವೇಗಿ ಮೊಹಮ್ಮದ್ ಶಮಿ ಸಂಪೂರ್ಣವಾಗಿ ಐಪಿಎಲ್​-2024 ಟೂರ್ನಿಯಿಂದ ಹೊರಬಿದ್ದಿದ್ದಾರೆ.

ಮತ್ತೊಂದೆಡೆ, ಗುಜರಾತ್ ಸ್ಟಾರ್ ಸ್ಪಿನ್ನರ್ ರಶೀದ್ ಖಾನ್ ಬೆನ್ನುಮೂಳೆಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಸದ್ಯ ರಶೀದ್ ಚೇತರಿಸಿಕೊಳ್ಳುತ್ತಿದ್ದಾರೆ. ಅವರು ಐಪಿಎಲ್​ ಆಡುವುದು ಅನುಮಾನವಾಗಿದೆ.

ಶಮಿಗೆ ಲಂಡನ್​ನಲ್ಲಿ ಶಸ್ತ್ರಚಿಕಿತ್ಸೆ

ಕಳೆದೆರಡು ಆವೃತ್ತಿಗಳಿಂದ ಗುಜರಾತ್ ಟೈಟಾನ್ಸ್ ಪರ ಕಣಕ್ಕಿಳಿಯುತ್ತಿರುವ ಮೊಹಮ್ಮದ್ ಶಮಿ, ತಂಡದ ಬೌಲಿಂಗ್ ವಿಭಾಗವನ್ನು ಮುನ್ನಡೆಸುತ್ತಿದ್ದರು. ಇದೀಗ, ಮೊಹಮ್ಮದ್ ಶಮಿ ಎಡ ಪಾದದ ಗಾಯದಿಂದಾಗಿ ಬಳಲುತ್ತಿದ್ದಾರೆ. ಶಸ್ತ್ರಚಿಕಿತ್ಸೆಗಾಗಿ ಬ್ರಿಟನ್​ಗೆ ತೆರಳಲಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ವಿಶ್ವಕಪ್ ವೇಳೆ ಶಮಿ ಗಾಯ

ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಮೊಹಮ್ಮದ್ ಶಮಿ ಗಾಯಕ್ಕೆ ತುತ್ತಾಗಿದ್ದರು. ಅಂದಿನಿಂದ ಶಮಿ ವಿಶ್ರಾಂತಿಯಲ್ಲಿದ್ದರು. ಇನ್ನೂ ಮಾರ್ಚ್ 22ರಿಂದ ಐಪಿಎಲ್​ ಟೂರ್ನಿ ಆರಂಭವಾಗಲಿದ್ದು, ಮೊಹಮ್ಮದ್ ಶಮಿ ಅಲಭ್ಯತೆ ಗುಜರಾತ್ ಟೈಟಾನ್ಸ್​ ತಂಡಕ್ಕೆ ದೊಡ್ಡ ಹೊಡೆತ ನೀಡಿದೆ.

ಗುಜರಾತ್​ನ ಮೊದಲ 5 ಪಂದ್ಯಗಳು

  • ಗುಜರಾತ್ vs ಮುಂಬೈ
  • ಗುಜರಾತ್ vs ಚೆನ್ನೈ
  • ಗುಜರಾತ್ vs ಹೈದರಾಬಾದ್
  • ಗುಜರಾತ್ v ಪಂಜಾಬ್
  • ಗುಜರಾತ್ vs ಲಕ್ನೋ

RELATED ARTICLES

Related Articles

TRENDING ARTICLES