Tuesday, January 28, 2025

ನಿತಿನ್ ಗಡ್ಕರಿ ನಮ್ಮೆಲ್ಲರ ಅಚ್ಚುಮೆಚ್ಚಿನ ವ್ಯಕ್ತಿ : ಸತೀಶ್ ಜಾರಕಿಹೋಳಿ

ಶಿವಮೊಗ್ಗ : ಕೇಂದ್ರ ಸಚಿವ ನಿತಿನ್ ಗಡ್ಕರಿ ನಮ್ಮೆಲ್ಲರ ಅಚ್ಚುಮೆಚ್ಚಿನ ವ್ಯಕ್ತಿ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ‌ ಹಾಡಿ ಹೊಗಳಿದರು.

ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿತಿನ್ ಗಡ್ಕರಿ ಅವರು ಯಾವುದೇ ಒಂದು ಪಕ್ಷದ ಪರ ಕೆಲಸ ಮಾಡುವ ವ್ಯಕ್ತಿ ಅಲ್ಲ ಎಂದು ಹೇಳಿದರು.

ಶಿವಮೊಗ್ಗ ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಮೂಲಕ 6,200 ಕೋಟಿ ವೆಚ್ಚದಲ್ಲಿ 300 ಕಿ.ಮೀ. ಹೈವೇ ಅಭಿವೃದ್ಧಿ ಕಾಮಗಾರಿ ಮತ್ತು ಶಂಕು ಸ್ಥಾಪನೆ ನೆರವೇರಿಸಲಾಗಿದೆ. ರಾಜ್ಯಕ್ಕೆ ಇವತ್ತು ವಿಶೇಷ ದಿನವಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿ 6,200 ಕೋಟಿ ರೂ. ಕಾಮಗಾರಿ ನಡೆದಿದೆ. ಸುವರ್ಣಾಕ್ಷರ ದಲ್ಲಿ ಬರೆದು ಇಡುವ ದಿನ ಎಂದು ತಿಳಿಸಿದರು.

ಎಲ್ಲಾ ಯೋಜನೆಗೆ ಪರಿಹಾರ ಸಿಕ್ಕಿದೆ

ರಸ್ತೆ ಅಭಿವೃದ್ಧಿಯಿಂದ ಎಲ್ಲಾ ಅಭಿವೃದ್ಧಿ ಸಾಧ್ಯ. ಕೇವಲ ದೇಶದ ಅಭಿವೃದ್ಧಿಯ ಪರ ನಿತಿನ್ ಗಡ್ಕರಿ ಕೆಲಸ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಗಡ್ಕರಿ ನಮ್ಮೆಲ್ಲರ ಅಚ್ಚುಮೆಚ್ಚಿನ ವ್ಯಕ್ತಿಯಾಗಿದ್ದಾರೆ. 12 ವರ್ಷದಿಂದ ನೆನೆಗುದಿಗೆ ಬಿದ್ದ ಯೋಜನೆ. ಈ ಎಲ್ಲಾ ಯೋಜನೆಗೆ ಪರಿಹಾರ ಸಿಕ್ಕಿದೆ. ರಾಜ್ಯ ಸರ್ಕಾರ ಕೇಂದ್ರದ ಜೊತೆ ಎಲ್ಲ ಅಭಿವೃದ್ದಿ ಯೋಜನೆಗೆ ಸಹಕಾರ ನೀಡಲಿದೆ. ಲೋಕೋಪಯೋಗಿ ಇಲಾಖೆ ರಾಜ್ಯದ ಸಮಗ್ರ ಅಭಿವೃದ್ದಿ ಮಾಡಲಿದೆ ಎಂದು ಕೇಂದ್ರ ಸರ್ಕಾರದ ಅಭಿವೃದ್ಧಿ ಯೋಜನೆಯನ್ನು ಸಚಿವ ಸತೀಶ್ ಜಾರಕಿಹೊಳಿ ಕೊಂಡಾಡಿದರು.

RELATED ARTICLES

Related Articles

TRENDING ARTICLES