Thursday, December 5, 2024

ತುಮಕೂರು ಟಿಕೆಟ್ ನನಗೇ ಸಿಗುತ್ತೆ : ಮಾಧುಸ್ವಾಮಿ

ತುಮಕೂರು : ತುಮಕೂರು ಲೋಕಸಭಾ ಟಿಕೆಟ್ ನನಗೆ ಸಿಗುತ್ತದೆ ಎನ್ನುವ ವಿಶ್ವಾಸ ಇದೆ ಎಂದು ಮಾಜಿ ಸಚಿವ ಜೆ.ಸಿ. ಮಾಧುಸ್ವಾಮಿ ಹೇಳಿದರು.

ತುಮಕೂರಿನಲ್ಲಿ‌ ಬಿಜೆಪಿ ಕಚೇರಿ ಉದ್ಘಾಟನೆ ಬಳಿಕ ಮಾತನಾಡಿದ ಅವರು, ನಾನು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರನ್ನ ಭೇಟಿ ಮಾಡಿದ್ದೇನೆ, ಮಾತನಾಡಿದ್ದೇನೆ ಎಂದು ತಿಳಿಸಿದರು.

ಚುನಾವಣೆ ಸಮೀಪಿಸುತ್ತಿದ್ದಂತೆ ನಮ್ಮ ಅಸ್ತಿತ್ವಕ್ಕಾಗಿ ನಾವು ಒಗ್ಗಟ್ಟು ಆಗಲೇಬೇಕು, ಆಗೇ ಆಗ್ತೀವಿ. ಗುಡುಗು ಮಿಂಚು ಮೋಡ ಆದ ನಂತರ ತಾನೆ ವಾತಾವರಣ ತಿಳಿಯಾಗೋದು. ನಮ್ಮಲ್ಲೂ ವಾತಾವರಣ ತಿಳಿಯಾಗುತ್ತೆ. ನಾಲ್ಕು ಜನ ಒಟ್ಟಾಗಿದ್ರೆ ಒಬ್ಬ ಪಿತೂರಿಗಾರ ಇದ್ದೇ ಇರ್ತಾನೆ. ಅದು ನಮ್ಮ‌ ಸಂಸ್ಕೃತಿ ಅನ್ನೋ ರೀತಿ ನಾನು ವೇದಿಕೆಯಲ್ಲಿ ಮಾತನಾಡಿದ್ದೇನೆ. ಅದಕ್ಕೆ ಬೇರೆ ಅರ್ಥ ಕಲ್ಪಿಸೋದು ಬೇಡ ಎಂದು ಹೇಳಿದರು.

ಯಾರ ವಿರುದ್ಧ ಎತ್ತಿಕಟ್ಟಲ್ಲಿಕ್ಕೆ ಮಾಡ್ತಿದ್ದಾರೋ?

ಸಮಾಜ ಕಲ್ಯಾಣ ಇಲಾಖೆ ಸಚಿವರು ಇತ್ತೀಚೆಗೆ ತೆಗೆದುಕೊಳ್ಳುತ್ತಿರುವ ತೀರ್ಮಾನಗಳಿಗೆ ನನ್ನ ವೈಯಕ್ತಿಕ ವಿರೋಧ ಇದೆ. ಸಂವಿಧಾನ ಜಾಗೃತಿ ಜಾಥಾ ಯಾಕೆ ಮಾಡ್ತಿದ್ದಾರೆ ಅಂತ ಗೊತ್ತಿಲ್ಲ. ಇದನ್ನ ಯಾರ ವಿರುದ್ಧ ಎತ್ತಿಕಟ್ಟಲ್ಲಿಕ್ಕೆ ಮಾಡ್ತಿದ್ದಾರೋ ಗೊತ್ತಿಲ್ಲ. ಸ್ವತಂತ್ರ ಬಂದು 70 ವರ್ಷ ಆಯ್ತು, ಈಗ ಜಾಗೃತಿ ಮಾಡ್ತಿದ್ದಾರೆ‌. ಯಾರಾದರೂ ಸಂವಿಧಾನ ವಿರುದ್ಧ ಇದ್ರೆ ಜಾಗೃತಿ ಮೂಡಿಸಬೇಕಿತ್ತು ಎಂದು ಮಾಧುಸ್ವಾಮಿ ಕುಟುಕಿದರು.

RELATED ARTICLES

Related Articles

TRENDING ARTICLES