Wednesday, January 22, 2025

ವಿರಾಟ್​ ಕೋಹ್ಲಿ- ಅನುಷ್ಕಾ ದಂಪತಿಗೆ ಗಂಡು ಮಗು! ಮಗನಿಗೆ ಅಕಾಯ್​ ಹೆಸರಿಡಲು ತೀರ್ಮಾನ

ಬೆಂಗಳೂರು: ಟೀಂ ಇಂಡಿಯಾ ಆಟಗಾರ ವಿರಾಟ್ ಕೊಹ್ಲಿ ಹಾಗೂ ನಟಿ ಅನುಷ್ಕಾ ಶರ್ಮಾ ದಂಪತಿಗೆ ಗಂಡು ಮಗು ಜನಿಸಿದೆ. ಈ ಮಗುವಿಗೆ ‘ಅಕಾಯ್’ ಎಂದು ನಾಮಕರಣ ಮಾಡಲಾಗಿದೆ.

ಇದನ್ನೂ ಓದಿ: ನಾನೂ ಶೂದ್ರ-ನೀವೂ ಶೂದ್ರರು-ರವಿಕುಮಾರ್ ಕೂಡ ಶೂದ್ರರು: ಯಾಕ್ರೀ ಇದೆಲ್ಲಾ: ಸಿಎಂ

ಈ ಕುರಿತು ಸ್ವತಃ ವಿರಾಟ್ ಕೊಹ್ಲಿ ಅವರೇ ಸಾಮಾಜಿಕ ಮಾಧ್ಯಮಗಳ ಮೂಲಕ ಬಹಿರಂಗಪಡಿಸಿದ್ದಾರೆ. ಈ ಪೋಸ್ಟ್​ ನಲ್ಲಿ ‘ನಮ್ಮ ಹೃದಯ ಅತೀವ ಸಂತೋಷ ಹಾಗೂ ಪ್ರೀತಿಯಿಂದ ತುಂಬಿದೆ. ಫೆಬ್ರುವರಿ 15ರಂದು ನಾವು ವಮಿಕಾ ಅವರ ತಮ್ಮ ‘ಅಕಾಯ್’ರನ್ನು (Akaay) ಈ ಜಗತ್ತಿಗೆ ಸ್ವಾಗತಿಸಿದ್ದೇವೆ ಎಂದು ತಿಳಿಸಲು ತುಂಬಾನೇ ಸಂತೋಷವಾಗುತ್ತಿದೆ. ನಮ್ಮ ಜೀವನದ ಈ ಸುಂದರ ಸಮಯದಲ್ಲಿ ನಿಮ್ಮೆಲ್ಲರ ಆಶೀರ್ವಾದ ಹಾಗೂ ಶುಭ ಹಾರೈಕೆಗಳನ್ನು ಬಯಸುತ್ತೇವೆ. ಅದೇ ವೇಳೆ ನಮ್ಮ ಗೋಪ್ಯತೆಯನ್ನು ಗೌರವಿಸಲು ವಿನಂತಿಸುತ್ತೇವೆ’ ಎಂದು ವಿರಾಟ್ ಕೊಹ್ಲಿ ಬರೆದುಕೊಂಡಿದ್ದಾರೆ.

ಈ ವಿಷಯ ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೆಂಡ್ ಆಗಿದೆ. ಕೊಹ್ಲಿ ಪೋಸ್ಟ್ ಹಾಕಿದ ಒಂದೇ ಗಂಟೆಯಲ್ಲಿ 50 ಲಕ್ಷಕ್ಕೂ ಹೆಚ್ಚು ಲೈಕ್‌ಗಳು ಬಂದಿವೆ. ಹಾಗೇ ಇಂಟರ್‌ನೆಟ್‌ನಲ್ಲಿ ‘ಅಕಾಯ್’ ಪದದ ಅರ್ಥವನ್ನು ಲಕ್ಷಾಂತರ ಜನರು ಹುಡುಕುತ್ತಿದ್ದಾರೆ ಇದು ಕೂಡ ಗೂಗಲ್‌ನಲ್ಲಿ ಟ್ರೆಂಡ್ ಆಗಿದೆ.

<blockquote class=”twitter-tweet”><p lang=”qme” dir=”ltr”>❤️ <a href=”https://t.co/BgpfycayI4″>pic.twitter.com/BgpfycayI4</a></p>&mdash; Virat Kohli (@imVkohli) <a href=”https://twitter.com/imVkohli/status/1759962813626491369?ref_src=twsrc%5Etfw”>February 20, 2024</a></blockquote> <script async src=”https://platform.twitter.com/widgets.js” charset=”utf-8″></script>

RELATED ARTICLES

Related Articles

TRENDING ARTICLES