Wednesday, January 22, 2025

Love Sex Dhoka: ಎಷ್ಟೇ ಮೋಸ ಮಾಡಿದ್ರೂ ಅವಳೇ ಬೇಕು ಎಂದ ಪಾಗಲ್‌ ಪ್ರೇಮಿ!

ರಾಯಚೂರು: ಎಷ್ಟೇ ಮೋಸ ಮಾಡಿದ್ರೂ ಅವಳೇ ಬೇಕು ಎಂದ ಪಾಗಲ್‌ ಪ್ರೇಮಿಯೊಬ್ಬ ಪೊಲೀಸ್‌ ಠಾಣೆ ಮೆಟ್ಟಿಲು ಏರಿರುವ ಘಟನೆ ನಡೆದಿದೆ.

ಹೌದು,ರಾಯಚೂರಿನಲ್ಲೊಂದು ರಿವರ್ಸ್ ಲವ್- ಸೆಕ್ಸ್ ಧೋಖಾ  ಕಹಾನಿ ನಡೆದಿದೆ. ಮದುವೆಯಾಗುತ್ತೇನೆ ಎಂದು ನಂಬಿಸಿದ ಯುವತಿಯೇ ಕೈಕೊಟ್ಟು ಬೇರೊಬ್ಬನನ್ನು ಪ್ರೀತಿಸಿದ, ಹಳೆಯ ಪ್ರೇಮಿ ಅವಳೇ ಬೇಕೆಂದು ಬೆನ್ನು ಬಿದ್ದರುವ ಘಟನೆ ಮಾರ್ಕೆಟ್ ಯಾರ್ಡ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ವಿಕಾಸ್ ಕುಮಾರ್ ಎಂಬಾತ, ತನ್ನ ಜೊತೆಗೇ ಲ್ಯಾಬ್‌ ಟೆಕ್ನಿಷಿಯನ್‌ ಆಗಿ ಕೆಲಸ ಮಾಡುತ್ತಿದ್ದ ಖುಷಿ ಎಂಬಾಕೆ ಮೋಸ ಮಾಡಿದ್ದಾಳೆ ಎಂದು ಆರೋಪ ಮಾಡಿದ್ದೇನೆ.

ಆಸ್ಟತ್ರೆಯಲ್ಲೇ ಅರಳಿದ ಪ್ರೀತಿ

ಮಡಿಕೇರಿಯ ಸೋಮವಾರಪೇಟೆ ಮೂಲದ ಯುವತಿ ಖುಷಿ ಲ್ಯಾಬ್ ಟೆಕ್ನಿಷಿಯನ್ಸ್ ಟ್ರೈನಿಂಗಿಗೆ ರಾಯಚೂರಿಗೆ ಬಂದಿದ್ದಳು. 2021ರಲ್ಲಿ ವಿಕಾಸ್ ಕುಮಾರ್ ಮತ್ತು ಖುಷಿ ಇಬ್ಬರ ‌ಪರಿಚಯವಾಗಿತ್ತು. ಒಂದೇ ಖಾಸಗಿ ಆಸ್ಪತ್ರೆಯಲ್ಲಿ ಇಬ್ಬರೂ ಲ್ಯಾಬ್ ಟೆಕ್ನಿಷಿಯನ್ಸ್ ಆಗಿದ್ದರು. ಆಸ್ಟತ್ರೆಯಲ್ಲೇ ಇಬ್ಬರ ಮಧ್ಯೆ ಪ್ರೀತಿ-ಪ್ರೇಮ ಅರಳಿತ್ತು. 3 ವರ್ಷಗಳಿಂದ ಒಬ್ಬರನ್ನೊಬ್ಬರು ಪ್ರೀತಿ ಮಾಡುತ್ತಿದ್ದರು. ಇತ್ತೀಚೆಗೆ ಮದುವೆಗೆ ಸಹ ಈ ಜೋಡಿ ತಯಾರಿಯಾಗಿತ್ತು.

ಯಾವಾಗ ಹೆಚ್ಚಿನ ಅಭ್ಯಾಸಕ್ಕಾಗಿ ಖುಷಿಯನ್ನು ಬೇರೆ ಆಸ್ಪತ್ರೆಗೆ ವಿಕಾಸ್‌ ಕಳುಹಿಸಿದನೋ, ಆತ ಸಮಸ್ಯೆ ಶುರುವಾಯಿತು. ಆ ಆಸ್ಪತ್ರೆಯಲ್ಲಿ ಬೇರೊಬ್ಬ ಯುವಕನ ಜೊತೆ ಖುಷಿಗೆ ಲವ್‌ ಉಂಟಾಯಿತು. ಈ ವಿಚಾರ ತಿಳಿದು ಎದೆಯೊಡೆದ ವಿಕಾಸ್ ನಿದ್ರೆ ಮಾತ್ರೆ ತೆಗೆದುಕೊಂಡು 3 ಬಾರಿ ಆತ್ಮಹತ್ಯೆಗೆ ಪ್ರಯತ್ನಿಸಿದ.

ಕೈಕೊಟ್ಟವಳನ್ನು ಮರಳಿ ಕೊಡಿಸಿ ಎಂದು ‌ಪೊಲೀಸರ ಮೊರೆ‌

ಸದ್ಯ, ಕೈಕೊಟ್ಟವಳನ್ನು ಮರಳಿ ಕೊಡಿಸಿ ಎಂದು ‌ಪೊಲೀಸರ ಮೊರೆ‌ ಹೋಗಿದ್ದಾನೆ. ಅವಳ ಜೊತೆ ಮದುವೆ ಮಾಡಿಸಿ. ಆಕೆ ಪುನಃ ಬಂದರೆ ಮೋಸ ಮರೆತು ಸಂಸಾರ ಮಾಡುತ್ತೇನೆ ಎಂದಿದ್ದಾನೆ.

“ಸ್ವತಃ ಆಕೆ ಬಂದು ನನಗೆ ಫಸ್ಟ್ ಪ್ರಪೋಸ್ ಮಾಡಿದ್ದಳು. ಜಾತಿ ವಿಚಾರದಲ್ಲಿ ಸಮಸ್ಯೆ ಆಗ್ತದೆ ಅಂದ್ರೂ ಕೇಳಲಿಲ್ಲ. ಈಗ ನೋಡಿದರೆ ಇನ್ನೊಬ್ಬನ ಜೊತೆ ಓಡಿ ಹೋಗಿದ್ದಾಳೆ. ಬೆಂಗಳೂರಲ್ಲೂ ಇದೇ ತರ ಒಬ್ಬ ಹುಡುಗನಿಗೆ ಮೋಸ ಮಾಡಿದ್ದಾಳಂತೆ. ಡಿಸೆಂಬರ್ 26ರ ವರೆಗೂ ನಮ್ಮ ‌ಮಧ್ಯೆ ಎಲ್ಲವೂ ಸರಿಯಿತ್ತು. ನಾನೇ ಹೆಚ್ಚಿನ ಅಭ್ಯಾಸಕ್ಕಾಗಿ ಬೇರೆ ಆಸ್ಪತ್ರೆಗೆ ಕಳುಹಿಸಿದ್ದೆ. ಆ ಆಸ್ಪತ್ರೆಯಲ್ಲಿ ಬೇರೊಬ್ಬ ಹುಡುಗನ ಲವ್ ಮಾಡಿದ್ದಾಳೆ.”

“ನಾನು ಕೇಳಿದ್ರೆ ಬರೀ‌ ಫ್ರೆಂಡ್ಸ್ ಅಂತ ಹೇಳ್ತಿದ್ದಳು ಅಷ್ಟೇ. ಮೊನ್ನೆ ಪಾರ್ಕ್‌ನಲ್ಲಿ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಅದನ್ನು ನೋಡಿ ನನ್ನ ಎದೆ ಒಡೆದಂತಾಯ್ತು. ರಾತ್ರಿ ಬಂದು ಇಂತಹ ಹುಡುಗನ ಪ್ರೀತಿ ಮಾಡ್ತಿದ್ದೀನಿ ಅಂದಳು. ಆಕೆಯ ಸಲುವಾಗಿ ನನ್ನ ಕೆಲಸ ಬೇರೆ ಹೋಯ್ತು. ಸುತ್ತಾಟಕ್ಕಾಗಿಯೇ 4-5 ಲಕ್ಷ ರೂಪಾಯಿ ಖರ್ಚು ಮಾಡಿಕೊಂಡೆ. ಆಕೆ ರಿಟರ್ನ್ ಬಂದ್ರೂ ಆಕೆಯ ಜೊತೆ ನಾನು ಚೆನ್ನಾಗಿ ಇರ್ತಿನಿ. ಅವಳು ಈಗ ಬಂದ್ರೂ ಮದುವೆಯಾಗಲು ರೆಡಿ ಇದ್ದೀನಿ. ನನ್ನ ಮೇಲೆ ನಂಬಿಕೆ ಬರ್ತಿಲ್ಲ ಅಂತಿದ್ದಾಳೆ. ಆಕೆಯ ಟ್ಯಾಟೋ ಬೇರೆ ಹಾಕಿಸಿದೆ. ನನಗೆ ಆಕೆಯ ಕಡೆಯಿಂದ ‌ಜೀವ ಬೆದರಿಕೆಯಿದೆ” ಎಂದು ಹೇಳಿದ್ದಾರೆ.

RELATED ARTICLES

Related Articles

TRENDING ARTICLES