Wednesday, January 22, 2025

ಬಿಟ್ ಕಾಯಿನ್ ಹಗರಣ : ಸಿಐಡಿ ಕಚೇರಿಯಲ್ಲಿ ಸಂದೀಪ್ ಪಾಟೀಲ್ ವಿಚಾರಣೆ

ಬೆಂಗಳೂರು : ಬಹುಕೋಟಿ ಬಿಟ್ ಕಾಯಿನ್ ಹಗರಣ ಸಂಬಂಧ IPS ಸಂದೀಪ್ ಪಾಟೀಲ್ ವಿಚಾರಣೆಗೆ ಹಾಜರಾಗಿದ್ದಾರೆ. ಬೆಂಗಳೂರಿನ ಸಿಐಡಿ ಕಚೇರಿಗೆ ಹಿರಿಯ ಐಪಿಎಸ್ ಅಧಿಕಾರಿ ಸಂದೀಪ್ ಪಾಟೀಲ್‌ ಹಾಜರಾಗಿದ್ದಾರೆ.

ಬಿಟ್‌ ಕಾಯಿನ್ ಪ್ರಕರಣದ ಪ್ರಮುಖ ಆರೋಪಿ ಶ್ರೀಕಿ ಅಲಿಯಾಸ್ ಶ್ರೀಕೃಷ್ಣ. ಈತನನ್ನು ಸಿಸಿಬಿ ಅಧಿಕಾರಿಗಳು  ಪದೇ ಪದೆ ವಿಚಾರಣೆ ನಡೆಸಿದ್ದಾರೆ.

ಎಸ್‌ಐಟಿ ಸಹ ತನಿಖೆಯ ಜವಾಬ್ದಾರಿ ವಹಿಸಿದ ಮೇಲೆ ಶ್ರೀಕಿಯ ವಿಚಾರಣೆಯನ್ನು ಮಾಡಿತ್ತು. ಇದೀಗ ಬಿಟ್‌ಕಾಯಿನ್ ಹಗರಣ ತನಿಖೆಗೆ ಹಾಜರಾಗುವಂತೆ ಹಿರಿಯ ಐಪಿಎಸ್ ಅಧಿಕಾರಿ ಸಂದೀಪ್ ಪಾಟೀಲ್‌ಗೆ ಎಸ್‌ಐಟಿ ನೋಟಿಸ್ ನೀಡಿತ್ತು. ಈ ಹಿನ್ನಲೆ  ಸಂದೀಪ್ ಪಾಟೀಲ್ ವಿಚಾರಣೆಗೆ ಹಾಜರಾಗಿದ್ದಾರೆ.

35 ಲಕ್ಷ ಮೌಲ್ಯದ 40 ಬೈಕ್ ವಶ

ಬೆಂಗಳೂರಿನ ಮಾರತ್ತಹಳ್ಳಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ದ್ವಿಚಕ್ರ ವಾಹನ ಕಳ್ಳತನ ಮಾಡ್ತಿದ್ದ ಆರೋಪಿಯನ್ನ ಪೊಲೀಸರು ಬಂಧಿಸಿದ್ದಾರೆ. ಆನಂದ್ ಎಂಬಾತ ಬಂಧಿತ ಆರೋಪಿಯಾಗಿದ್ದು, ಬಂಧಿತನಿಂದ 35 ಲಕ್ಷ ಮೌಲ್ಯದ 40 ದ್ವಿಚಕ್ರ ವಾಹನ ವಶಕ್ಕೆ ಪಡೆಯಲಾಗಿದೆ. ಸದ್ಯ ಬಂಧಿತ ಆರೋಪಿಯನ್ನ ವಿಚಾರಣೆಗೆ ಒಳಪಡಿಸಿದ್ದು, ತನಿಖೆಯನ್ನ ಮುಂದುವರಿಸಿದ್ದಾರೆ.

RELATED ARTICLES

Related Articles

TRENDING ARTICLES