ಬೀದರ್ : ಆತ ಸಹಾಯಕ ರೈತ. ಎರಡು ಎಕರೆ ಕಬ್ಬು ಕಳೆದುಕೊಂಡು ಸಂಕಷ್ಟಕ್ಕೆ ಈಡಾಗಿದ್ದ. ಈ ರೈತನಿಂದ ASI ಲಂಚ ಪಡೆದಿದ್ದಾರೆ. ಈ ಕುರಿತು ಪವರ್ ಟಿವಿ ಸುದ್ದಿ ಪ್ರಸಾರ ಮಾಡಿದ್ದೇ ತಡ ಪೊಲೀಸ್ ಅಧಿಕಾರಿಗೆ ತಕ್ಕ ಶಾಸ್ತಿಯಾಗಿದೆ.
ಬೀದರ್ ಜಿಲ್ಲೆ ಹುಲಸೂರು ತಾಲೂಕಿನ ಬೇಲೂರು ಗ್ರಾಮದಲ್ಲಿ ಎರಡು ಎಕರೆ ಕಬ್ಬು ಸುಟ್ಟು ನಾಶವಾಗಿತ್ತು. ಜಮೀನಿನಲ್ಲಿದ್ದ ಟ್ರಾನ್ಸ್‌ಪಾರ್ಮರ್ ಅವಾಂತರದಿಂದಾಗಿ ಕಬ್ಬು ಸುಟ್ಟು ಕರಕಲಾಗಿತ್ತು. ಟ್ರಾನ್ಸ್‌ಫಾರ್ಮರ್ ಸ್ಥಳಾಂತರ ಮಾಡುವಂತೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು. ಅಂತಹ ರೈತನಿಂದಲೇ ಪೊಲೀಸ್ ಅಧಿಕಾರಿಯೊಬ್ಬ ಹಣ ವಸೂಲಿ ಮಾಡಿ ಸಸ್ಪೆಂಡ್ ಆಗಿದ್ದಾರೆ.
ಈ ಸಂಬಂಧ ಹುಲಸೂರು ಠಾಣೆಯ ಎಎಸ್ಐ ಶೌರಾಜ್ ಪಂಚನಾಮೆಗೆಂದು ರೈತನ ಜಮೀನಿಗೆ ತೆರಳಿದ್ದ. ಬಳಿಕ ಸ್ಥಳಕ್ಕೆ ಬಂದಿರುವ ಖರ್ಚು ನೀಡುವಂತೆ ರೈತನಲ್ಲಿ 1 ಸಾವಿರಕ್ಕೆ ಬೇಡಿಕೆ ಇಟ್ಟಿದ್ದ. ಬಳಿಕ ರೈತ ತನ್ನಲ್ಲಿದ್ದ 400 ರೂ.ಗಳನ್ನ ಫೋನ್ ಪೇ ಮೂಲಕ ಹಾಕ್ತೇನೆ ಎಂದಾಗ ಬೇರೆಯವರ ನಂಬರ್‌ಗೆ ಹಣ ಹಾಕಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಹಣ ಬಂದಿರೋದನ್ನ ಕನ್ಫರ್ಮ್ ಮಾಡಿಕೊಂಡು ASI ಎಎಸ್ಐ ಶೌರಾಜ್ ಸ್ಥಳದಿಂದ ತೆರಳಿದ್ದರು.
ಪವರ್ ಟಿವಿ ವರದಿ ಬೆನ್ನಲ್ಲೇ ಅಮಾನತು
ಪೊಲೀಸ್ ಲಂಚಾವತರಾದ ಕುರಿತು ಪವರ್ ಟಿವಿ ಸುದ್ದಿ ಬಿತ್ತರಿಸಿದ ಬಳಿಕ ಬೀದರ್ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಲಂಗೋಟಿ ASI ಶೌರಾಜ್ ಅವರನ್ನು ಅಮಾನತು ಮಾಡಿ ಆದೇಶಿದ್ದಾರೆ.
ಒಟ್ನಲ್ಲಿ, ಚಿಲ್ಲರೆ ಕಾಸಿಗೆ ಪೊಲೀಸ್ ಅಧಿಕಾರಿ ರೈತನ ಬಳಿ ಕೈ ಚಾಚಿದ್ದು, ಈ ಕುರಿತು ಪವರ್ ಟಿವಿ ಸುದ್ದಿ ಪ್ರಸಾರ ಮಾಡ್ತಿದ್ದಂತೆ ASI ಸಸ್ಪೆಂಡ್ ಮಾಡಿ ಆದೇಶ ಹೊರಡಿಸಲಾಗಿದೆ. ಇದು ಅಸಹಾಯಕರ ಬಳಿಕ ಕೈ ಚಾಚುವ ಅಧಿಕಾರಿಗಳಿಗೆ ತಕ್ಕ ಪಾಠ ಕಲಿಸಿದಂತಾಗಿದೆ.