Wednesday, January 22, 2025

ಇನ್ಮುಂದೆ ದರ್ಶನ್ ಜೊತೆ ಸಿನಿಮಾ ಮಾಡಲ್ಲ: ನಿರ್ಮಾಪಕ ಉಮಾಪತಿ

ನಿರ್ಮಾಪಕ ಉಮಾಪತಿ ಗೌಡಗೆ ನೇರವಾಗಿ ಟಾಂಗ್​ ಕೊಟ್ಟ ದರ್ಶನ್ ಅವರು, ಅಯ್ಯೋ ತಗಡೇ ನಾನು ಕಥೆ ಕೊಟ್ಟೆ, ಟೈಟಲ್​ ಕೊಟ್ಟೆ ಅಂತ ಯಾಕೆ ಹೇಳ್ತಿಯಾ? ನಿನಗೆ ಟೈಟಲ್​ ಕೊಟ್ಟಿದ್ದೇ ನಾನು ಅಂತ ಸ್ಪಷ್ಟನೆ ಕೊಟ್ಟಿದ್ದೂ ಬಂದು ಬಂದು ಯಾಕೆ ಗುಮ್ಮಿಸ್ಕೋತಿಯಾ ಎಂದು ಉಮಾಪತಿ ವಿರುದ್ಧ ಆಕ್ರೋಶದ ಮಾತುಗಳನಾಡಿದ್ದಾರೆ.

ದರ್ಶನ್ ಮಾತುಗಳಿಗೆ ನಿರ್ಮಾಪಕ ಉಮಾಪತಿ ಗೌಡ ಪವರ್​ ಟಿವಿಯೊಂದಿಗೆ ಪ್ರತಿಕ್ರಿಯಿಸಿ, ಇರಲಿ ದೊಡ್ಡವರು ಮಾತನಾಡಿದ್ದಾರೆ. ಏನು ತೊಂದರೆ ಇಲ್ಲ. ಗುಮ್ಮಿಸಿಕೊಳ್ಳೋದು ಅದೆಲ್ಲಾ ಭಗವಂತ ಮಾಡಬೇಕು. ಭಗವಂತ ಗುಮ್ಮಬೇಕು ಎಲ್ಲಾ ಗುಮ್ಮಿಸಿಕೊಳ್ಳಬೇಕು. ತೊಂದರೆ ಇಲ್ಲ. ಅವರಿಗೆ ದೇವರು ಚೆನ್ನಾಗಿ ಇಟ್ಟಿರಲಿ ಎಂದಿದ್ದಾರೆ.

ಇದನ್ನೂ ಓದಿ: BJP ರಾಜ್ಯದಲ್ಲಿ ಇವತ್ತಿನವರೆಗೂ ಸ್ವಂತ ಬಲದಿಂದ ಅಧಿಕಾರಿಕ್ಕೆ ಬಂದೇ ಇಲ್ಲ: ಸಿಎಂ

ಕಾಟೇರ ಸಿನಿಮಾದ ಟೈಟಲ್ ವಿವಾದಕ್ಕೆ ಉಮಾಪತಿ ಗೌಡ ಅವರು ಸ್ಪಷ್ಟನೆ ನೀಡಿದ್ದಾರೆ. ಫಿಲ್ಮ್ ಚೇಂಬರ್‌ಗೆ ಹೋಗಿ ನೋಡಿದ್ರೆ ನಿಮಗೆ ಸತ್ಯ ಏನು ಅನ್ನೋದು ಗೊತ್ತಾಗುತ್ತೆ. ಯಾರ ಹೆಸರಲ್ಲಿ ಟೈಟಲ್ ರಿಜಿಸ್ಟರ್ ಆಯ್ತು ಅಂತ ಗೊತ್ತಾಗುತ್ತೆ. ಈಗ ಅಕ್ಕ-ಪಕ್ಕ ಇರೋರೆಲ್ಲಾ ಅವರ ಪರವಾಗಿ ಮಾತನಾಡ್ತಿದ್ದಾರೆ ಸಂತೋಷ. ಚೆನ್ನಾಗಿರಲಿ ತೊಂದರೆ ಇಲ್ಲ. ನಾನು ಅವರ ಬಗ್ಗೆ ಮಾತಾಡುವಷ್ಟು ದೊಡ್ಡ ವ್ಯಕ್ತಿ ಅಲ್ಲ. ದೊಡ್ಡ ವ್ಯಕ್ತಿಯಾಗಿ ಬೆಳೆದ ಮೇಲೆ ಮಾತಾಡೋಣ ಎಂದಿದ್ದಾರೆ.

ಇನ್ನು ಈ ಘಟನೆ ಬೆನ್ನಲ್ಲೇ ಮುಂಝದೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆಗೆ ಸಿನಿಮಾ ಮಾಡುವ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಇಷ್ಟೆಲ್ಲಾ ಆದಮೇಲೆ ಇನ್ನು ಮುಂದೆ ದರ್ಶನ್​ ಜೊತೆಗೆ ಯಾವುದೇ ಸಿನಿಮಾಗಳನ್ನು ಮಾಡುವುದಿಲ್ಲ ಎಂದು ಅವರು ಪ್ರಿತಿಕ್ರಿಯೆ ನೀಡಿದ

ಇನ್ನು, ಹೌದು ನಾವು ತಗಡುಗಳು. ಅವರ ಮಟ್ಟಕ್ಕೆ ಹೋಗಿ ಉತ್ತರ ಕೊಡುವಷ್ಟು ದೊಡ್ಡ ವ್ಯಕ್ತಿಗಳಲ್ಲ. ತಗಡಾಗೇ ಇರ್ತೀವಿ. ಆಮೇಲೆ ಗುಮ್ಮಿಸಿಕೊಳ್ಳೋರು ನಾವೆಲ್ಲಾ ಹೀಗೆ ಇರ್ತೀವಿ. ಎಲ್ಲಾ ಭಗವಂತ ನೋಡ್ತಾ ಇರ್ತಾನೆ. ನಾನು ಯಾರಿಗೂ ಇಲ್ಲಿ ಉತ್ತರ ಕೊಡಲೇ ಬೇಕು ಅಂತ ಕಂಡೀಷನ್ ಹಾಕೋಕೆ ಆಗಲ್ಲ. ನಾವು ತಗಡುಗಳಾಗಿದ್ದೀವಿ. ಅವರ ಮಟ್ಟಕ್ಕೆ ನಾವು ಮಾತನಾಡೋಕೆ ಆಗಲ್ಲ. ಕ್ಲಾರಿಫೈ ಮಾಡೋ ಜಾಗದಲ್ಲಿ ನಾನು ಮಾಡುತ್ತೇನೆ ಎಂದು ಉಮಾಪತಿ ಗೌಡ ಹೇಳಿದ್ದಾರೆ.

RELATED ARTICLES

Related Articles

TRENDING ARTICLES