Saturday, January 18, 2025

90% ಸಾಲ ಮಾಡಿದ್ದು ಕಾಂಗ್ರೆಸ್ : ಆರ್. ಅಶೋಕ್

ಬೆಂಗಳೂರು : 90% ಸಾಲ ಮಾಡಿದವರು ಕಾಂಗ್ರೆಸ್​​ನವರು. ಒಂದೇ‌ ವರ್ಷದಲ್ಲಿ 1 ಲಕ್ಷ ಕೋಟಿ ಸಾಲ ಮಾಡಿದ್ದಾರೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಆರೋಪಿಸಿದರು.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಸವರಾಜ ಬೊಮ್ಮಾಯಿ‌ ಅವರ ಅವಧಿಯಲ್ಲಿ ಸರ್​​ಪ್ಲಸ್​​​​​​​ ಬಜೆಟ್ ಮಂಡಿಸಲಾಗಿತ್ತು.‌‌ ಸಿದ್ದರಾಮಯ್ಯರ‌ ಬಜೆಟ್ ಓಪ್ಲಸ್‌ ಬಜೆಟ್ ಎಂದು ಕುಟುಕಿದರು.

ರಾಜ್ಯಪಾಲರ ಭಾಷಣದಲ್ಲಿ ದೂರದೃಷ್ಟಿ ಅಂತ ಹೇಳಬೇಕಿತ್ತು. ಆದರೆ, ಅವರು ಹೇಳಿಲ್ಲ. ಅಭಿವೃದ್ಧಿ ಬಗ್ಗೆ ಮಾತೇ‌ ಇಲ್ಲ.‌ ಬರೀ ಸಂತೆ‌ ಭಾಷಣ. ಇವರ ಉತ್ತರ ಕೂಡ ಸಂಪೂರ್ಣ ಸುಳ್ಳು. ಹೀಗಾಗಿ, ನಾವು ವಾಕ್ ಔಟ್ ಮಾಡಿದ್ದೇವೆ ಎಂದು ಹೇಳಿದರು.

ರೈತರಿಗೆ‌ ಎಷ್ಟು ಸಬ್ಸಿಡಿ ಕಡಿಮೆ ಮಾಡಿದ್ದೀರಿ?

ಕಾಂಗ್ರೆಸ್​ನವರ ಬಳಿ‌ ನಾವು‌ ಕೇಳುವ ಪ್ರಶ್ನೆಗಳಿಗೆ ಉತ್ತರ‌ವೇ ಇಲ್ಲ. ವಿದ್ಯಾನಿಧಿ,‌ ಕಿಸಾನ್ ಸಮ್ಮಾನ್ ಯಾಕೆ ರದ್ದು‌ ಮಾಡಿದ್ರಿ? ಇದಕ್ಕೆ ಅವರ ಬಳಿ ಉತ್ತರವಿಲ್ಲ. ಕಳೆದ‌ ಬಾರಿ ನೀರಾವರಿ ಇಲಾಖೆಯಿಂದ 15% ಕಡಿಮೆ ಮಾಡಿದ್ದಾರೆ. ರೈತರಿಗೆ‌ ಎಷ್ಟು ಸಬ್ಸಿಡಿ ಕಡಿಮೆ ಮಾಡಿದ್ದೀರಿ? ಇದಕ್ಕೂ ಉತ್ತರ ಇಲ್ಲ. ಇದು ಸಿದ್ದರಾಮಯ್ಯರ ಎಕನಾಮಿಕ್ ಬಜೆಟ್ ಎಂದು ಟೀಕಿಸಿದರು.

ಸಿದ್ದರಾಮಯ್ಯ ಎಂದರೆ ಸುಳ್ಳು, ಸುಳ್ಳು ಎಂದರೆ ಸಿದ್ದರಾಮಯ್ಯ. ಸಿದ್ದರಾಮಯ್ಯ ಅವರು ರಾಜ್ಯಪಾಲರ ಭಾಷಣಕ್ಕೆ ಉತ್ತರ‌ ನೀಡಿದ್ದಾರೆ, ನಮಗೆ ಅಲ್ಲ ಎಂದು ಆರ್. ಅಶೋಕ್‌ ಛೇಡಿಸಿದರು.

RELATED ARTICLES

Related Articles

TRENDING ARTICLES