Wednesday, January 22, 2025

ಚಿತ್ರರಂಗಕ್ಕೆ ಮತ್ತೆ ರೀ ಎಂಟ್ರಿ ಕೊಟ್ಟ ಹುಚ್ಚ ವೆಂಕಟ್​!

ಬೆಂಗಳೂರು : ಹಲವು ವರ್ಷಗಳ ನಂತರ ಮತ್ತೆ ಚಿತ್ರದಲ್ಲಿ ನಟಿಸುವ ಮೂಲಕ ಹುಚ್ಚ ವೆಂಕಟ್ ಸಿನಿಮಾ ರಂಗಕ್ಕೆ ವಾಪಾಸ್​ ಆಗಿದ್ದಾರೆ. ತಮ್ಮ ವಿಚಿತ್ರ ಮ್ಯಾನರಿಸಮ್, ಭಾಷೆ, ಲುಕ್‌ನಿಂದಲೇ ಸುದ್ದಿಯಾದವರು ನಟ ಹುಚ್ಚ ವೆಂಕಟ್ ಇದೀಗ ಇವರ ನಟನೆಯ ಟ್ರೈಲರ್ ಲಾಂಚ್ ಆಗಿದೆ.

ಹಲವು ವರ್ಷಗಳ ಬಳಿಕ ಈಗ ಮತ್ತೆ ಕಿರು ಚಿತ್ರದ ಮೂಲಕ ನಟ, ನಿರ್ಮಾಪಕ ಹುಚ್ಚ ವೆಂಕಟ್ ಅವರು ಎಂಟ್ರಿ ಕೊಟ್ಟಿದ್ದಾರೆ. ಡಾ. ವಿಷ್ಣುವರ್ಧನ್ ಅವರ ಅಭಿಮಾನಿ ಸಂಘವಾದ ಡಾ.ವಿಷ್ಣು ಸೇನಾ ಸಮಿತಿ ನಿರ್ಮಾಣದಲ್ಲಿ ಮೂಡಿ ಬಂದಿರುವ “ವಿಷ್ಣು ಮಾರ್ಗ” ಕಿರುಚಿತ್ರದ ಮೂಲಕ ಹುಚ್ಚ ವೆಂಕಟ್ ಚಿತ್ರರಂಗಕ್ಕೆ ಮರಳುತ್ತಿದ್ದಾರೆ.

ಇದನ್ನೂ ಓದಿ: PUC ಮತ್ತು SSLC ಪರೀಕ್ಷೆಗಳ ವೇಳಾಪಟ್ಟಿ ಪ್ರಕಟ!

“ವಿಷ್ಣುಮಾರ್ಗ” ಕಿರುಚಿತ್ರದಲ್ಲಿ ಹುಚ್ಚ ವೆಂಕಟ್ ಅವರು, ಸಾಹಸ ಸಿಂಹ ವಿಷ್ಣುವರ್ಧನ್ ಅವರ ದೊಡ್ಡ ಅಭಿಮಾನಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಎಲ್ಲರಿಗೂ ತಿಳಿದಿರುವಂತೆ ಹುಚ್ಚ ವೆಂಕಟ್ ಅಪ್ಪಟ ವಿಷ್ಣುವರ್ಧನ್ ಅವರ ಅಭಿಮಾನಿ ಕೂಡ. ಈ ಕಿರುಚಿತ್ರದಲ್ಲಿಯೂ ಸಹ ಅವರ ಅಭಿಮಾನಿಯಾಗಿ ಕಾಣಿಸಿಕೊಂಡಿದ್ದಾರೆ.

ಸದ್ಯ “ವಿಷ್ಣುಮಾರ್ಗ” ಕಿರುಚಿತ್ರದ ಟೀಸರ್ ಮತ್ತು ಟ್ರೈಲರ್ ರಿಲೀಸ್ ಆಗಿದ್ದು, ಫೆಬ್ರವರಿ 29 ರಂದು ಸಿನಿಮಾ ಬಿಡುಗಡೆಯಾಗುತ್ತಿದೆ. ಚಿತ್ರದಲ್ಲಿ ನಾಲ್ವರು ವಿಷ್ಣು ಅಭಿಮಾನಿಗಳಿಗೆ ಬುದ್ಧಿ ಹೇಳುವ, ಅವರನ್ನು ದಂಡಿಸುವ ದೊಡ್ಡ ಅಭಿಮಾನಿಯಾಗಿ ಹುಚ್ಚ ವೆಂಕಟ್ ನಟಿಸಿದ್ದಾರೆ ಎನ್ನುವಂತಿದೆ ಟ್ರೈಲರ್. ಫೆಬ್ರವರಿ 29 ಕ್ಕೆ ಬಿಡುಗಡೆಯಾಗುವ ಕಿರುಚಿತ್ರದಲ್ಲಿ ಎಲ್ಲಕ್ಕೂ ಉತ್ತರ ದೊರೆಯಲಿದೆ.

RELATED ARTICLES

Related Articles

TRENDING ARTICLES