Wednesday, January 22, 2025

ಸಿನಿಮಾದಲ್ಲಿ ಹಿರೋಯಿನ್​ ಮಾಡುವ ಆಸೆ ತೋರಿಸಿ ಯುವತಿಗೆ ವಂಚನೆ: ದೂರು ದಾಖಲು

ಬೆಂಗಳೂರು: ಸಿನಿಮಾ ಅವಕಾಶ ಕೊಡಿಸುವುದಾಗಿ ಪ್ರೀತಿಯ ನಾಟಕವಾಡಿ ನಂಬಿಸಿ ವಂಚಿಸಿರುವ ಆರೋಪದಡಿ ಸಹಾಯಕ ನಟನೊಬ್ಬನ ವಿರುದ್ಧ ಜ್ಞಾನಭಾರತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಯುವತಿ ನೀಡಿರುವ ದೂರಿನ ಅನ್ವಯ ಕನ್ನಡ ಹಾಗೂ ತಮಿಳು ಸಿನಿಮಾಗಳಲ್ಲಿ ಸಣ್ಣ ಪುಟ್ಟ ಪಾತ್ರ ಮಾಡಿರುವ ಸಂತೋಷ್ ಎಂಬುವರ ವಿರುದ್ಧ ಎಫ್ಐಆರ್ ದಾಖಲಾಗಿದೆ.

ಇದನ್ನೂ ಓದಿ: ಮಕ್ಕಳ ಮನಸಲ್ಲೂ ಸಂಘರ್ಷ ಉಂಟು ಮಾಡಿ ರಾಜಕೀಯ ಮಾಡುತ್ತಿದೆ : ಬಸವರಾಜ ಬೊಮ್ಮಾಯಿ

ರಾಯಚೂರು ಮೂಲದ ಯುವತಿಯ ಕುಟುಂಬ ಬೆಂಗಳೂರಿನಲ್ಲಿ ನೆಲೆಸಿದ್ದು, 2019ರಲ್ಲಿ ದೂರುದಾರಳಿಗೆ ಆರೋಪಿಯ ಪರಿಚಯವಾಗಿದೆ. ತಾನು ಸಿನಿಮಾ ನಟ ಎಂದು ಪರಿಚಯಿಸಿಕೊಂಡು ‘ಸಿನಿಮಾ ಹಿರೋಯಿನ್ ಪಾತ್ರ ಕೊಡೆಸುತ್ತೇನೆ’ ಎಂದು ಯುವತಿಯನ್ನು ನಂಬಿಸಿದ್ದ. ಬಳಿಕ ಆಕೆಯನ್ನ ಪ್ರೀತಿಸುತ್ತಿರುವುದಾಗಿ ಹೇಳಿಕೊಂಡಿದ್ದ. ಯುವತಿಗೆ ವಂಚಿಸಿ ಆರೋಪಿ ಬೇರೆ ಮದುವೆಯಾಗಿದ್ದ. ಬಳಿಕ ಅತ್ತಿಬೆಲೆಯಲ್ಲಿ ಆರೋಪಿ ವಾಸವಾಗಿದ್ದ.

ಈ ಬಗ್ಗೆ ಮಾಹಿತ ತಿಳಿದು ಯುವತಿ, ಪ್ರಶ್ನಿಸಲು ತೆರಳಿದಾಗ ಆಕೆಯ ಮೇಲೆ ಹಲ್ಲೆ ಮಾಡಿದ್ದಾನೆ. ಅಷ್ಟೇ ಅಲ್ಲ ಫೆಬ್ರವರಿ 14ರಂದು ಯುವತಿಯ ಮನೆ ಬಳಿ‌ ಬಂದು ‘ನಾನು ಕರೆದಾಗ ಬರಬೇಕು, ಇಲ್ಲದಿದ್ದರೆ ನಿನ್ನ ಖಾಸಗಿ ಫೋಟೊ ವಿಡಿಯೋಗಳನ್ನ ವೈರಲ್ ಮಾಡುತ್ತೇನೆ, ನಿನ್ನ ತಂದೆ ತಾಯಿಗೆ ತೋರಿಸುತ್ತೇನೆ’ ಎಂದು ಧಮ್ಕಿ ಹಾಕಿದ್ದಾನೆ. ಜೊತೆಗೆ ಯುವತಿಯ ಮೇಲೆ ಹಲ್ಲೆ ಮಾಡಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

RELATED ARTICLES

Related Articles

TRENDING ARTICLES