Thursday, November 21, 2024

ಪಂಜಾಬ್ ಚುನಾವಣಾ ‘ಐಕಾನ್’ ಆಗಿ ಶುಭ್​ಮನ್ ಗಿಲ್ ಆಯ್ಕೆ

ಬೆಂಗಳೂರು : ಲೋಕಸಭಾ ಚುನಾವಣೆಗೂ ಮುಂಚೆಯೇ ಭಾರತದ ಆರಂಭಿಕ ಬ್ಯಾಟರ್ ಶುಭ್​ಮನ್ ಗಿಲ್​ ಅವರಿಗೆ ಪಂಜಾಬ್ ಚುನಾವಣಾ ಆಯೋಗವು ಬಹುದೊಡ್ಡ ಜವಾಬ್ದಾರಿಯನ್ನು ನೀಡಿದೆ.

ಪಂಜಾಬ್ ಮುಖ್ಯ ಚುನಾವಣಾಧಿಕಾರಿಗಳಾದ ಸಿಬಿನ್​ ಸಿ ಅವರು, ಶುಭ್​ಮನ್​ ಗಿಲ್ ಅವರನ್ನು ಪಂಜಾಬ್ ರಾಜ್ಯ ಚುನಾವಣಾ ಐಕಾನ್ ಆಗಿ ಆಯ್ಕೆ ಮಾಡಿದ್ದಾರೆ.

ಗಿಲ್ ಅವರು ಚುನಾವಣೆಗೂ ಮುಂಚಿತವಾಗಿ ಮತದಾರರಲ್ಲಿ ಮತದಾನದ ಬಗ್ಗೆ ಅರಿವು ಮೂಡಿಸಲಿದ್ದಾರೆ. ಈ ಬಾರಿ ಪಂಜಾಬ್​ ರಾಜ್ಯದಲ್ಲಿ ಶೇ.70ರಷ್ಟು ಮತದಾನ ದಾಟುವಂತೆ ಜಾಗೃತಿ ಮೂಡಿಸುವುದೇ ನಮ್ಮ ಉದ್ದೇಶ ಎಂದು ಚುನಾವಣಾಧಿಕಾರಿ ಹೇಳಿದ್ದಾರೆ.

ಈ ಸುದ್ದಿ ಓದಿದ್ದೀರಾ? : ಇತಿಹಾಸ ಸೃಷ್ಟಿ..! ಭಾರತಕ್ಕೆ ಅತಿದೊಡ್ಡ ಗೆಲುವು, ಇಂಗ್ಲೆಂಡ್​ಗೆ 2ನೇ ಅತಿದೊಡ್ಡ ಸೋಲು 

ಯುವ ಜನರಲ್ಲಿ ಮತದಾನದ ಬಗ್ಗೆ ಜಾಗೃತಿ

ಗಿಲ್ ಪ್ರತಿಭಾವಂತ ಯುವ ಕ್ರಿಕೆಟಿಗ. ಅವರು ಯುವ ಜನರಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸಿಲಿದ್ದಾರೆ. ಇದು ಪ್ರತಿಯೊಬ್ಬರನ್ನು ಮತದಾನ ಮಾಡುವಂತೆ ಪ್ರೇರೇಪಿಸುತ್ತದೆ. ಈ ಹಿಂದೆ, ಖ್ಯಾತ ಪಂಜಾಬಿ ಗಾಯಕ ತಾರ್ಸೆಮ್ ಜಸ್ಸರ್ ಅವರನ್ನು ರಾಜ್ಯ ಚುನಾವಣಾ ಐಕಾನ್ ಆಗಿ ಆಯ್ಕೆ ಮಾಡಲಾಗಿತ್ತು. ಇದೀಗ ಆ ಜವಬ್ದಾರಿಯನ್ನು ಗಿಲ್ ನಿರ್ವಹಿಸಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

RELATED ARTICLES

Related Articles

TRENDING ARTICLES