Wednesday, January 22, 2025

ಪರ್ಫ್ಯೂಮ್‌ ಗೋಡೌನ್‌ನಲ್ಲಿ ಬೆಂಕಿ; ಗಾಯಾಳುಗಳು ಸಾವು ಬದುಕಿನ ಮಧ್ಯೆ ಹೋರಾಟ

ಬೆಂಗಳೂರು: ಬೆಂಗಳೂರು ದಕ್ಷಿಣ ತಾಲೂಕಿನ ರಾಮಸಂದ್ರದಲ್ಲಿ ಪರ್ಪ್ಯೋಮ್ ಪ್ಯಾಕ್ಟರಿಯಲ್ಲಿ ಅಗ್ನಿ ಅವಘಡ ಸಂಭವಿಸಿದೆ, ಘಟನೆಯಲ್ಲಿ ಮೂವರು ಮೃತಪಟ್ಟಿದ್ದು ಹಲವರು ತೀವ್ರವಾಗಿ ಗಾಯಗೊಂಡಿದ್ದಾರೆ. ತೀವ್ರವಾಗಿ ಗಾಯಗೊಂಡ ಮೂವರಿಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಈ ಅಘಡದಲ್ಲಿ 28 ವರ್ಷದ ಇರ್ಫಾನ್​​ಗೆ ಶೇಕಡ 27 ರಷ್ಟು ಸುಟ್ಟಿದ್ದು, 10ವರ್ಷದ ಬಾಲಕನಿಗೆ ಗಂಭೀರ ಗಾಯವಾಗಿದೆ. ಅಪ್ರೋಜ್ ಪಾಷನಿಗೆ ಕೈ ಕಾಲುಗಳು ಸುಟ್ಟು ಹೋಗಿವೆ. ಮತ್ತೊಬ್ಬ ಗಾಯಾಳು ಅಲ್ಲಾ ಭಕ್ಷ್​​ಗೆ ಶೇಕಡ 7 ರಷ್ಟು ಸುಟ್ಟ ಗಾಯಗಳಾಗಿವೆ. ಮತ್ತೊಬ್ಬ ಬಾಲಕನಿಗೆ ಎದೆ ಹಾಗೂ ಮುಖದ ಭಾಗದಲ್ಲಿ ಸುಟ್ಟಗಾಯಗಳಾಗಿವೆ. ಗಾಯಾಳುಗಳ ಕುಟುಂಬಸ್ಥರು ಆಸ್ಪತ್ರೆ ಬಳಿ ಜಮಾಯಿಸಿದ್ದಾರೆ.

ಇದನ್ನೂ ಓದಿ: ಡಾಲಿ ಧನಂಜಯಗೆ ಕಾಂಗ್ರೆಸ್ ಟಿಕೆಟ್ ಬಗ್ಗೆ ಚರ್ಚೆ ಆಗಿಲ್ಲ: ಸಿಎಂ ಸಿದ್ದರಾಮಯ್ಯ 

ಇನ್ನು, ಕುಂಬಳಗೋಡಿನ‌ ಬಳಿ ಪರ್ಫ್ಯೂಮ್ ಗೋಡೌನ್​ನಲ್ಲಿ ಸ್ಪೋಟ ಸಂಭವಿಸಿದ್ದು ಪ್ರಕರಣ ಸಂಬಂಧ ಕುಂಬಳಗೋಡು ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ. ಜಾಗದ ಮಾಲೀಕ ವಿಠಲ್ ಹಾಗೂ ಗೋಡೌನ್​​ನಲ್ಲಿ ಪರ್ಪೂಮ್ ಶೇಖರಿಸುತ್ತಿದ್ದ ಸಲೀಂ ಎಂಬಾತನ ಮೇಲೆ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಾಗ್ತಿದ್ದಂತೆ ಮಾಲೀಕ ವಿಠಲ್ ಪರಾರಿಯಾಗಿದ್ದಾನೆ. ಐಪಿಸಿ 420, 304,467, ಅಡಿ ಪ್ರಕರಣ ದಾಖಲಾಗಿದೆ.

RELATED ARTICLES

Related Articles

TRENDING ARTICLES