Wednesday, January 22, 2025

ಕುಮಾರಸ್ವಾಮಿ ಯಾರು ಯಾರಿಗೆ ಕಾಲ್ ಮಾಡಿದ್ದಾರೆ, ಧಮ್ಕಿ ಹಾಕ್ತಿದ್ದಾರೆ, ಎಲ್ಲಾ ನನಗೆ ಗೊತ್ತು : ಡಿ.ಕೆ. ಶಿವಕುಮಾರ್

ಬೆಂಗಳೂರು : ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರು ಯಾರು ಯಾರಿಗೆ ಕಾಲ್ ಮಾಡುತ್ತಿದ್ದಾರೆ. ಯಾರು ಯಾರಿಗೆ ಧಮ್ಕಿ ಹಾಕ್ತಿದ್ದಾರೆ ಎಲ್ಲರೂ ಬಂದು ನನಗೆ ಹೇಳುತ್ತಿದ್ದಾರೆ ಎಂದು ಕುಮಾರಸ್ವಾಮಿ ವಿರುದ್ಧ ಡಿಸಿಎಂ ಡಿ.ಕೆ. ಶಿವಕುಮಾರ್ ಗಂಭೀರ ಆರೋಪ ಮಾಡಿದರು.

ರಾಜ್ಯಸಭೆ ಚುನಾವಣೆ ವಿಚಾರವಾಗಿ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಏನೇನೋ ಹೇಳಿದ್ದಾರಲ್ಲ.. ನಂದು, ಗೋಪಾಲಯ್ಯ ಅವರದು ಹಾಗೂ ಎಸ್‌.ಟಿ. ಸೋಮಶೇಖರ್ ಅವರದು ವೈಯಕ್ತಿಕ ಸಂಬಂಧ ಇದೆ ಎಂದು ಕುಟುಕಿದರು.

ನಮಗೆ ಯಾರ ಅಗತ್ಯವೂ ಇಲ್ಲ. ನಾವು 136 ಸೀಟು ಗೆದ್ದಿದ್ದೇವೆ. ಇಬ್ಬರು ಪಕ್ಷೇತರರು ನಮ್ಮ ಜೊತೆಗೆ ಇದ್ದಾರೆ. ಇದು ಅಲ್ಲದೇ ಇನ್ನೂ ಯಾರು ಯಾರೋ ನಮ್ಮ ಜೊತೆ ಇದಾರೆ. ಎಲ್ಲವನ್ನೂ ತೋರಿಸಿ ಆಮೇಲೆ ಮಾತನಾಡುತ್ತೇನೆ ಎಂದು ತಿಳಿಸಿದರು.

ಬಿಜೆಪಿ ಸ್ಟ್ರಾಟರ್ಜಿ ಏನು ಅಂತ ಗೊತ್ತಾಗುತ್ತಿದೆ

ಕ್ರಾಸ್ ವೋಟಿಂಗ್​ಗೆ ಪ್ರಯತ್ನ ಮಾಡುತ್ತಿದ್ದಾರಾ? ಎಂಬ ಪ್ರಶ್ನೆಗೆ, ಬಿಜೆಪಿ ಸ್ಟ್ರಾಟರ್ಜಿ ಏನು ಅಂತ ಎಲ್ಲಾ ಗೊತ್ತಾಗುತ್ತಿದೆ. ಸುಮ್ಮನೆ ಅರ್ಜಿ ಹಾಕ್ತಾರಾ..? ನೋಡೋಣ ಫೆ.27ಕ್ಕೆ ಏನು ಅಂತ ಗೊತ್ತಾಗುತ್ತದೆ. ಕುಮಾರಸ್ವಾಮಿ ಮಾತಾಡಿದ್ದಾರೆ, ಕಾಲ್ ಮಾಡಿದ್ದಾರೆ, ಧಮ್ಕಿ ಹಾಕಿದ್ದಾರೆ. ಏನೇನು ನಡೆಯುತ್ತಾ ಇದೆ ಎನ್ನುವುದು ನಮಗೆ ಗೊತ್ತು ಎಂದು ಹೇಳಿದರು.

35 ವರ್ಷ ಜೊತೆಯಲ್ಲೇ ಸಂಸಾರ ಮಾಡಿದ್ದೀವಿ

ಡಿಸಿಎಂ ಜೊತೆ ಎಸ್.ಟಿ. ಸೋಮಶೇಖರ್ ಹೆಚ್ಚು ಓಡಾಟ ವಿಚಾರವಾಗಿ ಮಾತನಾಡಿ, ಎಸ್.ಟಿ. ಸೋಮಶೇಖರ್ ಅವರು ಮೂರು ವರ್ಷ ಆ ಕಡೆ ಹೋಗಿದ್ರು ಅಷ್ಟೇ. 35 ವರ್ಷ ಜೊತೆಯಲ್ಲೇ ಸಂಸಾರ ಮಾಡಿದ್ದೀವಿ, ನಡೀರಿ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು.

RELATED ARTICLES

Related Articles

TRENDING ARTICLES