Wednesday, January 22, 2025

ಡಿಸಿಎಂ ಡಿಕೆ ಶಿವಕುಮಾರನ್ನು ಭೇಟಿ ಮಾಡಿದ ಬಿಜೆಪಿ ಶಾಸಕ ಗೋಪಾಲಯ್ಯ!

ಬೆಂಗಳೂರು: ಮಾಜಿ ಸಚಿವ, ಮಹಾಲಕ್ಷ್ಮೀ ಲೇಔಟ್​ನ ಬಿಜೆಪಿ ಶಾಸಕ ಗೋಪಾಲಯ್ಯ ಅವರು ಕೆಪಿಸಿಸಿ ಅಧ್ಯಕ್ಷ ಹಾಗು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿದ್ದಾರೆ.

ಇದನ್ನೂ ಓದಿ: ಸುಪ್ರೀಂಕೋರ್ಟ್​ನಲ್ಲಿ ಸಿಎಂ ಸಿದ್ದರಾಮಯ್ಯಗೆ ತಾತ್ಕಾಲಿಕ ರಿಲೀಫ್​​!

ನಗರದ ಸದಾಶಿವನಗರದಲ್ಲಿರುವ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ನಿವಾಸಕ್ಕೇ ಭೇಟಿ ನೀಡಿದ ಶಾಸಕ ಗೋಪಾಲಯ್ಯ ಕೆಲಕಾಲ ಸಮಾಲೋಚನೆ ನಡೆಸಿದ್ದಾರೆ.

ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಇದೀಗ ಕಾಂಗ್ರೆಸ್​ ನಾಯಕ ಡಿಕೆಶಿ ಯವರನ್ನು ಬಿಜೆಪಿ ಶಾಸಕರು ಭೇಟಿ ಮಾಡಿ ಚರ್ಚಿಸಿರುವುದು ಬಾರಿ ಕುತೂಹಲಕ್ಕೆ ಕಾರಣವಾಗಿದೆ.

ಇನ್ನೂ ಬಿಜೆಪಿಯ ಮತ್ತೊಬ್ಬ ಶಾಸಕ ಎಸ್​.ಟಿ ಸೋಮಶೇಖರ್ ಕೂಡ ಕೆಪಿಸಿಸಿ ಅಧ್ಯಕ ಡಿಕೆಶಿವಕುಮಾರ್ ಅವರ ಜೊತೆ ನಿರಂತರ ಸಂಪರ್ಕದಲ್ಲಿರುವುದು ಬಿಜೆಪಿಗೆ ಭಾರಿ ಆಘಾತ ನೀಡುವ ಎಲ್ಲಾ ಲಕ್ಷಣಗಳು ಕಂಡು ಬರುತ್ತಿದೆ ಎನ್ನುವ ಕೂಗು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.

RELATED ARTICLES

Related Articles

TRENDING ARTICLES