Monday, December 23, 2024

ಇತಿಹಾಸ ಸೃಷ್ಟಿ..! ಭಾರತಕ್ಕೆ ಅತಿದೊಡ್ಡ ಗೆಲುವು, ಇಂಗ್ಲೆಂಡ್​ಗೆ 2ನೇ ಅತಿದೊಡ್ಡ ಸೋಲು

ಬೆಂಗಳೂರು : ಯಶಸ್ವಿ ಜೈಸ್ವಾಲ್ ತೂಫಾನ್ ಬ್ಯಾಟಿಂಗ್​.. ಸರ್ ರವೀಂದ್ರ ಜಡೇಜಾ ಮಾರಕ ದಾಳಿ.. ಆಂಗ್ಲರ ವಿರುದ್ಧ ಬ್ಲೂಬಾಯ್ಸ್‌​ಗೆ ಐತಿಹಾಸಿಕ ಗೆಲುವು.

ರಾಜ್​ಕೋಟ್​ನಲ್ಲಿ ನಡೆದ ಮೂರನೇ ಟೆಸ್ಟ್​ ಪಂದ್ಯದಲ್ಲಿ ಭಾರತ ತಂಡ, ಇಂಗ್ಲೆಂಡ್​ ವಿರುದ್ಧ 434 ರನ್​ಗಳಿಂದ ಗೆದ್ದು ಹೊಸ ಇತಿಹಾಸ ನಿರ್ಮಿಸಿತು.

ರನ್​ಗಳ ವಿಷಯದಲ್ಲಿ ಭಾರತಕ್ಕೆ ಸಿಕ್ಕ ಅತಿದೊಡ್ಡ ಗೆಲುವು ಇದಾಗಿದೆ. ಈ ಹಿಂದೆ ನ್ಯೂಜಿಲೆಂಡ್​ ವಿರುದ್ಧ 372, ದಕ್ಷಿಣ ಆಫ್ರಿಕಾ ವಿರುದ್ಧ 321 ಹಾಗೂ ಆಸ್ಟ್ರೇಲಿಯಾ ವಿರುದ್ಧ 320 ರನ್​ಗಳ ಅಂತರದಿಂದ ಭಾರತ ಗೆದ್ದು ಬೀಗಿತ್ತು.

ಭಾರತದ ಗೆಲುವು ಇತಿಹಾಸ ಪುಟ ಸೇರಿದರೆ, ಮತ್ತೊಂದೆಡೆ ಆಂಗ್ಲರ ಸೋಲು ಸಹ ಕೆಟ್ಟ ದಾಖಲೆ ಬರೆಯಿತು. ಬೆನ್​ ಸ್ಟೋಕ್ಸ್​ ಪಡೆಗೂ ಇದು ಟೆಸ್ಟ್​ ಪಂದ್ಯದಲ್ಲಿ ಆದ 2ನೇ ಅತಿದೊಡ್ಡ ಸೋಲು. ಈ ಹಿಂದೆ 1934ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಇಂಗ್ಲೆಂಡ್​ 562 ರನ್​ಗಳ ಅಂತರದಲ್ಲಿ ಸೋಲು ಅನುಭವಿಸಿತ್ತು.

ಇಂಗ್ಲೆಂಡ್‌ಗೆ ಅತಿದೊಡ್ಡ ಟೆಸ್ಟ್ ಸೋಲು

  • ಆಸ್ಟ್ರೇಲಿಯಾ ವಿರುದ್ಧ 562 ರನ್​ಗಳ ಸೋಲು(ದಿ ಓವಲ್), 1934
  • ಭಾರತ ವಿರುದ್ಧ 434 ರನ್​ಗಳ ಸೋಲು (ರಾಜ್‌ಕೋಟ್), 2024*
  • ವೆಸ್ಟ್​ ಇಂಡೀಸ್ ವಿರುದ್ಧ 425 ರನ್​ಗಳ ಸೋಲು (ಮ್ಯಾಂಚೆಸ್ಟರ್) 1976
  • ಆಸಿಸ್​ ವಿರುದ್ಧ 409 ರನ್​ಗಳ ಸೋಲು (ಲಾರ್ಡ್ಸ್), 1948
  • ಆಸಿಸ್​ ವಿರುದ್ಧ 405 ರನ್​ಗಳ ಸೋಲು (ಲಾರ್ಡ್ಸ್), 2015

ಟೆಸ್ಟ್‌ನಲ್ಲಿ ಶತಕ ಮತ್ತು 5 ವಿಕೆಟ್

  • ವಿನೂ ಮಂಕಡ್ : 184 ಮತ್ತು 5/196 : ಇಂಗ್ಲೆಂಡ್ (ಲಾರ್ಡ್ಸ್), 1952
  • ಪೊಲ್ಲಿ ಉಮ್ರಿಗರ್ : 172* ಮತ್ತು  5/107 : ವೆಸ್ಟ್​ ಇಂಡೀಸ್ (ಪೋರ್ಟ್ ಆಫ್ ಸ್ಪೇನ್), 1962
  • ಆರ್ ಅಶ್ವಿನ್ : 103 ಹಾಗೂ 5/156 : ವೆಸ್ಟ್​ ಇಂಡೀಸ್ (ಮುಂಬೈ), 2011
  • ಆರ್ ಅಶ್ವಿನ್ : 113 ಮತ್ತು 7/83 : ವೆಸ್ಟ್​ ಇಂಡೀಸ್ (ನಾರ್ತ್ ಸೌಂಡ್), 2016
  • ಆರ್ ಅಶ್ವಿನ್ : 106 ಮತ್ತು 5/43 : ಇಂಗ್ಲೆಂಡ್ (ಚೆನ್ನೈ), 2021
  • ರವೀಂದ್ರ ಜಡೇಜಾ : 175* & 5/41 : ಶ್ರೀಲಂಕಾ (ಮೊಹಾಲಿ), 2022
  • ರವೀಂದ್ರ ಜಡೇಜಾ : 112 ಮತ್ತು 5/41: ಇಂಗ್ಲೆಂಡ್ (ರಾಜ್‌ಕೋಟ್) 2024*

RELATED ARTICLES

Related Articles

TRENDING ARTICLES