Sunday, December 22, 2024

ಲೋಕಸಭಾ ಚುನಾವಣೆ: ಮೈಸೂರು ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಡಾಲಿ ಧನಂಜಯ ಕಣಕ್ಕೆ!

ಮೈಸೂರು : ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದಲ್ಲಿ ದೊಡ್ಡದೊಂದು ಸಂಚಲನ ಸೃಷ್ಟಿ ಮಾಡಲು ಕಾಂಗ್ರೆಸ್‌ ಕಾರ್ಯತಂತ್ರ ಸಿದ್ಧವಾಗುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆಯ ಕ್ಷೇತ್ರವಾಗಿರುವ ಮೈಸೂರು ಕ್ಷೇತ್ರವನ್ನು ಗೆಲ್ಲಲು ಒಂದು ರಣತಂತ್ರವನ್ನು ಚರ್ಚಿಸಲಾಗುತ್ತಿದೆ.

ಖ್ಯಾತ ಚಿತ್ರ ನಟ ʻಬಡವರ ಮಕ್ಕಳು ಬೆಳೀಬೇಕುʼ ಖ್ಯಾತಿಯ ನಟ ರಾಕ್ಷಸ ಡಾಲಿ ಧನಂಜಯ ಅವರನ್ನು ಮೈಸೂರು – ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಕಣಕ್ಕಿಳಿಸಲು ಪ್ಲ್ಯಾನ್‌ ನಡೆದಿದೆ ಎಂದು ತಿಳಿದುಬಂದಿದೆ. ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ  ಹಾಲಿ ಬಿಜೆಪಿ ಸಂಸದರಾಗಿರುವವರು ಪ್ರತಾಪ್‌ ಸಿಂಹ ಅವರು ಸಿಎಂ ಸಿದ್ದರಾಮಯ್ಯ ಮತ್ತು ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರಿಗೆ ನೇರವಾದ ಪೈಪೋಟಿ ನೀಡುತ್ತಿದ್ದಾರೆ.

ಇದನ್ನೂ ಓದಿ: ಮಾಜಿ ಸಿಎಂ ಚಂದ್ರಬಾಬು ನಾಯ್ಡು ವಿರುದ್ದ ಮತ್ತೊಂದು ಚಾರ್ಜ್ ಶೀಟ್ ಸಲ್ಲಿಕೆ!

ಒಂದು ಹಂತದಲ್ಲಿ ಪ್ರತಾಪ್‌ ಸಿಂಹ ವಿರುದ್ಧ ಯತೀಂದ್ರ ಸಿದ್ದರಾಮಯ್ಯ ಅವರೇ ಕಣಕ್ಕಿಳಿಯುತ್ತಾರೆ ಎಂಬ ಚರ್ಚೆ ನಡೆದಿತ್ತು. ಆದರೆ, ಈಗ ಚರ್ಚೆಯ ದಿಕ್ಕು ಸ್ವಲ್ಪ ಬದಲಾಗಿ ಡಾಲಿ ಧನಂಜಯ ಅವರ ಹೆಸರು ಕೇಳಿಬರುತ್ತಿದೆ.

RELATED ARTICLES

Related Articles

TRENDING ARTICLES