Wednesday, January 22, 2025

ISRO ಮತ್ತೊಂದು ಸಾಧನೆ: ಇನ್‌ಸ್ಯಾಟ್-3ಡಿಎಸ್ ಉಡಾವಣೆ

ನವದೆಹಲಿ: ಭಾರತದ ಖ್ಯಾತ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ, ಇಂದು ಇನ್‌ಸ್ಯಾಟ್-3ಡಿಎಸ್ ಹವಾಮಾನ ಮುನ್ಸೂಚನಾ ಉಪಗ್ರಹವನ್ನು ಉಡಾವಣೆ ಮಾಡಿದೆ.

ಸಂಜೆ 5.35ಕ್ಕೆ ಆಂಧ್ರಪ್ರದೇಶದ ಶ್ರೀಹರಿಕೋಟದಿಂದ ಉಪಗ್ರಹ ಉಡಾವಣೆ ಮಾಡಲಾಗಿದೆ. 51.7 ಮೀಟರ್ ಎತ್ತರವಿರುವ ಜಿಎಸ್‌ಎಲ್‌ವಿ ಉಪಗ್ರಹವನ್ನು ಹೊತ್ತೂಯ್ಯಲಿದೆ. ಉಪಗ್ರಹ ಒಟ್ಟು ತೂಕ 2,274 ಕೆ.ಜಿ. ಇದರ ನಿರ್ಮಾಣಕ್ಕೆ 480 ಕೋಟಿ ರೂ. ವೆಚ್ಚವಾಗಿದೆ. ಕೇಂದ್ರ ಭೂವಿಜ್ಞಾನ ಇಲಾಖೆ ಸಂಪೂರ್ಣ ವೆಚ್ಚವನ್ನು ಭರಿಸಿದೆ.

ಇನ್‌ಸ್ಯಾಟ್-3ಡಿಎಸ್​ನ ಪ್ರಯೋಜನಗಳೇನು..?

ಭಾರತದ ಹವಾಮಾನ, ವಾತಾವರಣಕ್ಕೆ ಸಂಬಂಧಿಸಿದಂತೆ ಮುನ್ಸೂಚನೆಗಳನ್ನು ನೀಡುವುದು ಇನ್‌ಸ್ಯಾಟ್-3ಡಿಎಸ್ ಉಪಗ್ರಹದ ಮುಖ್ಯ ಕೆಲಸ. ಈ ಉಪಗ್ರಹಗಳು ಇದುವರೆಗೆ ಭಾರತದ ಪಾಲಿಗೆ ನಿರ್ಣಾಯಕ ಶಕ್ತಿಗಳಾಗಿ ಕೆಲಸ ಮಾಡಿವೆ. ಭೂಮಿಯ ಮೇಲ್ಪದರ, ಸಮುದ್ರಭಾಗಗಳ ಮೇಲೆ ನಿಗಾ, ಮಳೆ, ಪ್ರವಾಹಗಳು, ಭೂಕಂಪನಗಳ ಕುರಿತು ಉಪಗ್ರಹ ಮುನ್ಸೂಚನೆ ನೀಡಲಿದೆ. ಈ ಉಪಗ್ರಹ ಸುಧಾರಿತ ಮೂರನೇ ಆವೃತ್ತಿಯಾಗಲಿದೆ. ಪೂರ್ಣವಾಗಿ ಹವಾಮಾನ ಸಂಬಂಧಿ ಕೆಲಸಗಳಿಗೇ ಸಮರ್ಪಿತಗೊಂಡಿದೆ.

2,274 ಕೆಜಿ- ಉಪಗ್ರಹದ ತೂಕ

480 ಕೋಟಿ ರೂ.- ನಿರ್ಮಾಣ ವೆಚ್ಚ

51.9 ಮೀಟರ್- ಜಿಎಸ್‌ಎಲ್‌ವಿ ರಾಕೆಟ್‌ನ ಎತ್ತರ

 

RELATED ARTICLES

Related Articles

TRENDING ARTICLES