ಮಾಜಿ ಸಿಎಂ ಚಂದ್ರಬಾಬು ನಾಯ್ಡು ವಿರುದ್ದ ಮತ್ತೊಂದು ಚಾರ್ಜ್ ಶೀಟ್ ಸಲ್ಲಿಕೆ!
Saturday, January 4, 2025

ಮಾಜಿ ಸಿಎಂ ಚಂದ್ರಬಾಬು ನಾಯ್ಡು ವಿರುದ್ದ ಮತ್ತೊಂದು ಚಾರ್ಜ್ ಶೀಟ್ ಸಲ್ಲಿಕೆ!

 ಆಂಧ್ರ: ಆಂದ್ರಪ್ರದೇಶ ಫೈಬರ್ ನೆಟ್ ಹಗರಣಕ್ಕೆ ಸಂಬಂಧಿಸಿದಂತೆ ಎಪಿ ಸಿಐಡಿ ಪೊಲೀಸರು ಸಿಬಿಎಸ್‌ಇ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಪ್ರಕರಣದಲ್ಲಿ ಎ 1 ಆಗಿ ಚಂದ್ರಬಾಬು ನಾಯ್ಡು, ಎ 2 ಆಗಿ ವೇಮುರಿ ಹರಿಕೃಷ್ಣ, ಎ 3 ಆಗಿ ಕೋಗಂಟಿ ಸಾಂಬಶಿವ ರಾವ್ ಅವರನ್ನು ಸೇರಿಸಲಾಯಿತು.

ಆಂಧ್ರದಲ್ಲಿ ವಿಧಾನಸಭಾ ಚುನಾವಣೆಗೆ ಸಮಯ ಹತ್ತಿರವಾಗುತ್ತಿದ್ದು ಈ ಹಿಂದೆ ಅಧಿಕಾರ ಕಳೆದುಕೊಂಡಿದ್ದ ಟಿಡಿಪಿ ನಾಯಕ ಚಂದ್ರಬಾಬು ಸುತ್ತ ನ್ಯಾಯಾಲಯದಲ್ಲಿ ಹಲವು ಪ್ರಕರಣಗಳು ಸುತ್ತುತ್ತಿದ್ದು, ಕೋರ್ಟ್​​ ಅಲೆದಾಟಕ್ಕೆ ಗುರಿಯಾಗಿದ್ದಾರೆ. ಬಾಬು ಆಡಳಿತಾವಧಿಯಲ್ಲಿನ ಹಲವು ಯೋಜನೆಗಳ ತನಿಖೆಯನ್ನು ಎಸಿ ಸಿಐಡಿ ತೀವ್ರಗೊಳಿಸಿದೆ.

ಇದನ್ನೂ ಓದಿ: ಮಧ್ಯ ಪ್ರಿಯರಿಗೆ ಶಾಕ್​: ಬಿಯರ್ ದರ ಏರಿಕೆ; ಕಿಕ್‌ ಇಳಿಕೆ

ಈ ಹಿಂದೆ ಕೌಶಲಾಭಿವೃದ್ಧಿ ಹಗರಣದಲ್ಲಿ ಚಂದ್ರಬಾಬು ಜೈಲಿಗೆ ಹೋಗಿಬಂದರು. ಅವರ ಆರೋಗ್ಯ ಸ್ಥಿತಿಯನ್ನು ಪರಿಗಣಿಸಿ, ಎಪಿ ಹೈಕೋರ್ಟ್ ಅವರಿಗೆ ಜಾಮೀನು ನೀಡಿದ್ದರಿಂದ ಅವರು ಹೊರಬಂದಿದ್ದಾರೆ. ಈ ಮಧ್ಯೆ ಮತ್ತೊಂದು ಪ್ರಕರಣ ತೆಲುಗು ದೇಶಂ ನಾಯಕ ಚಂದ್ರಬಾಬು ಅವರನ್ನು ಕಾಡುತ್ತಿದೆ. ಎಪಿ ಫೈಬರ್ ನೆಟ್ ಹಗರಣದಲ್ಲಿ ಚಂದ್ರಬಾಬು ಅವರನ್ನು ಎ1 ಎಂದು ಹೆಸರಿಸಿ ಎಪಿ ಸಿಐಡಿ ಸಿಬಿಐ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದೆ.

RELATED ARTICLES

Related Articles

TRENDING ARTICLES