Sunday, November 3, 2024

ಶೋಭಾ ಆ ಕ್ಷೇತ್ರಕ್ಕೆ, ಈ ಕ್ಷೇತ್ರಕ್ಕೆ ಅಂತ ಐದಾರು ಕ್ಷೇತ್ರದ ಹೆಸರು ಕೇಳಿ ಬರುತ್ತಿದೆ : ಶೋಭಾ ಕರಂದ್ಲಾಜೆ

ಉಡುಪಿ : ಶೋಭಾ ಆ ಕ್ಷೇತ್ರಕ್ಕೆ, ಈ ಕ್ಷೇತ್ರಕ್ಕೆ ಎಂದು ಐದಾರು ಕ್ಷೇತ್ರದ ಹೆಸರು ಕೇಳಿ ಬರುತ್ತಿದೆ ಎಂದು ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದಲೇ ಚುನಾವಣೆಗೆ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದರು.

ರಾಜ್ಯದ ಬೇರೆ ಬೇರೆ ಕ್ಷೇತ್ರಗಳಲ್ಲಿ ನನ್ನ ಹೆಸರು ಕೇಳಿ ಬರುತ್ತಾ ಇದೆ. ಉಡುಪಿ-ಚಿಕ್ಕಮಗಳೂರು ನನ್ನ ಕ್ಷೇತ್ರ. ಸಾಕಷ್ಟು ಅಭಿವೃದ್ಧಿ ಮಾಡಿದ್ದೇನೆ. ನನ್ನ ಬಗ್ಗೆ ಗೊತ್ತೇ ಇಲ್ಲದಾಗ ಉಡುಪಿ-ಚಿಕ್ಕಮಗಳೂರು ಜನ ನನ್ನನ್ನು ಗೆಲ್ಲಿಸಿದ್ದಾರೆ. ಹಾಗಾಗಿ, ನಾನು ಬೇರೆ ಕಡೆ ಹೋಗುವ ಪ್ರಶ್ನೆ ಬರುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಅಭಿವೃದ್ಧಿ ಆಧಾರದಲ್ಲಿ ನಾನು ಮತ ಕೇಳುತ್ತೇನೆ

ಪಕ್ಷದ ನಿರ್ಧಾರಕ್ಕೆ, ಪಾರ್ಟಿ ಕೊಡುವ ಸೂಚನೆಗೆ ನಾನು ಬದ್ಧಳಾಗಿದ್ದೇನೆ. ಈ ಬಾರಿ ಅಭಿವೃದ್ಧಿ ಆಧಾರದಲ್ಲಿ ನಾನು ವೋಟು ಕೇಳುತ್ತೇನೆ. ಹಿಂದಿನ ಸಂಸದರು, ಹಿಂದಿನ ಸರ್ಕಾರ ಏನು ಮಾಡಿತ್ತು..? ಪ್ರಧಾನಿ ಮೋದಿ ಸರ್ಕಾರದ ಅವಧಿಯಲ್ಲಿ ಏನಾಗಿದೆ ಎಂದು ಹೇಳಿ ವೋಟ್ ಕೇಳುತ್ತೇನೆ ಎಂದು ಹೇಳಿದರು.

ಮೋದಿಯನ್ನು ವಿಶ್ವನಾಯಕ ಮಾಡುವ ಅವಕಾಶ

ಜಯಪ್ರಕಾಶ್ ಹೆಗ್ಡೆ ಕಾಂಗ್ರೆಸ್ ಸೇರ್ಪಡೆ ಚರ್ಚೆ ಬಗ್ಗೆ ಮಾತನಾಡಿ, ಯಾರು ಕಾಂಗ್ರೆಸ್ಸಿಗೆ ಹೋಗ್ತಾರೆ? ಯಾರು ಬಿಜೆಪಿಯಲ್ಲಿ ಇರ್ತಾರೆ? ನನಗೆ ಗೊತ್ತಿಲ್ಲ. ಪಕ್ಷದಿಂದ ಲಾಭ ಪಡೆದು ಪಕ್ಷ ತ್ಯಜಿಸಿದರೆ ಅವರಿಗೆ ನಷ್ಟ. ಅಧಿಕಾರದಲ್ಲಿದ್ದಾಗ ಬರ್ತೀವಿ, ಇಲ್ಲದಾಗ ಹೋಗ್ತಿವಿ ಎಂಬುದು ಬಿಜೆಪಿಯ ಮಾನಸಿಕತೆ ಅಲ್ಲ. ಯಾರೂ ಪಕ್ಷವನ್ನು ಬಿಡಬೇಡಿ ಎಂದು ವಿನಂತಿಸುತ್ತೇನೆ. ನರೇಂದ್ರ ಮೋದಿಯನ್ನು ಮತ್ತೆ ಪ್ರಧಾನಿ, ವಿಶ್ವನಾಯಕ ಮಾಡುವ ಅವಕಾಶ ಸಿಗಲಿದೆ, ಬರುತ್ತಿದೆ ಎಂದು ಶೋಭಾ ಕರಂದ್ಲಾಜೆ ತಿಳಿಸಿದರು.

RELATED ARTICLES

Related Articles

TRENDING ARTICLES