Thursday, April 25, 2024

ತವರು ಅಂಗಳದಲ್ಲೇ ಭರ್ಜರಿ ಶತಕ ಸಿಡಿಸಿದ ರವೀಂದ್ರ ಜಡೇಜಾ

ಬೆಂಗಳೂರು : ತವರು ಅಂಗಳದಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್​ ಪಂದ್ಯದಲ್ಲಿ ಭಾರತದ ಆಲ್​ರೌಂಡರ್ ರವೀಂದ್ರ ಜಡೇಜಾ ಭರ್ಜರಿ ಶತಕ ಸಿಡಿಸಿದರು.

ರಾಜ್​ಕೋಟ್​ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಆಂಗ್ಲರನ್ನು ಬಿಟ್ಟು ಬಿಡದೇ ಕಾಡಿದ ಜಡ್ಡು ಅಂತರಾಷ್ಟ್ರೀಯ ಟೆಸ್ಟ್​ ಕ್ರಿಕೆಟ್​ನಲ್ಲಿ 4ನೇ ಶತಕ ದಾಖಲಿಸಿದರು.

ಟಾಸ್​ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತಕ್ಕೆ ಇಂಗ್ಲೆಂಡ್​ ಬೌಲರ್​ಗಳು ಆರಂಭದಲ್ಲೇ ಬಿಗ್​ ಶಾಕ್ ನೀಡಿದರು. ಕೇವಲ 33 ರನ್ಗಳಿಸುವಷ್ಟರಲ್ಲೇ 3 ವಿಕೆಟ್ ಕಬಳಿಸಿದರು. ಜೈಸ್ವಾಲ್ 10, ಶುಭ್​ಮನ್ ಗಿಲ್ ಶೂನ್ಯ (0) ಹಾಗೂ ರಜತ್ ಪಟೀದಾರ್ 5 ರನ್​ ಗಳಿಸಿ ಔಟಾದರು.

ಸಂಕಷ್ಟದಲ್ಲಿದ್ದ ಭಾರತಕ್ಕೆ ನಾಯಕ ರೋಹಿತ್​ ಶರ್ಮಾ ಜೊತೆಗೂಡಿ ಜಡೇಜಾ ತಂಡಕ್ಕೆ ಆಸರೆಯಾದರು. ಜವಾಬ್ದಾರಿಯುತವಾಗಿ ಬ್ಯಾಟ್ ಬೀಸಿದ ಜಡೇಜಾ138 ಎಸೆತಗಳಲ್ಲಿ 6 ಬೌಂಡರಿ ಹಾಗೂ 1 ಸಿಕ್ಸರ್​ನೊಂದಿಗೆ ಅರ್ಧಶತಕ ಪೂರೈಸಿದರು. ರೋಹಿತ್ ಶರ್ಮಾ ನಿರ್ಗಮನದ ಬಳಿಕವೂ ಜಡೇಜಾ ಆಂಗ್ಲರನ್ನು ಮನಬಂದಂತೆ ಚಚ್ಚಿದರು.

198 ಎಸೆತ, 7 ಬೌಂಡರಿ, 2 ಸಿಕ್ಸರ್​ನೊಂದಿಗೆ ಶತಕ

198 ಎಸೆತಗಳಲ್ಲಿ 7 ಬೌಂಡರಿ ಹಾಗೂ 2 ಬೊಂಬಾಟ್ ಸಿಕ್ಸರ್ ಮೂಲಕ ಭರ್ಜರಿ ಶತಕ (100*) ಪೂರೈಸಿದರು. ಪ್ರಸ್ತುತ ಭಾರತ 85 ಓವರ್​ಗಳಲ್ಲಿ 5 ವಿಕೆಟ್ ಕಳೆದುಕೊಂಡು 322 ರನ್​ ಕಲೆಹಾಕಿದೆ. ಅಜೇಯ 106* ರನ್​ ಗಳಿಸಿರುವ ರವೀಂದ್ರ ಜಡೇಜಾ ಹಾಗೂ ಕುಲ್​ದೀಪ್ ಯಾದವ್ 1* ಕ್ರೀಸ್​ನಲ್ಲಿದ್ದಾರೆ.

RELATED ARTICLES

Related Articles

TRENDING ARTICLES