ಬೆಂಗಳೂರು : ತವರು ಅಂಗಳದಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಭಾರತದ ಆಲ್ರೌಂಡರ್ ರವೀಂದ್ರ ಜಡೇಜಾ ಭರ್ಜರಿ ಶತಕ ಸಿಡಿಸಿದರು.
ರಾಜ್ಕೋಟ್ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಆಂಗ್ಲರನ್ನು ಬಿಟ್ಟು ಬಿಡದೇ ಕಾಡಿದ ಜಡ್ಡು ಅಂತರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ನಲ್ಲಿ 4ನೇ ಶತಕ ದಾಖಲಿಸಿದರು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತಕ್ಕೆ ಇಂಗ್ಲೆಂಡ್ ಬೌಲರ್ಗಳು ಆರಂಭದಲ್ಲೇ ಬಿಗ್ ಶಾಕ್ ನೀಡಿದರು. ಕೇವಲ 33 ರನ್ಗಳಿಸುವಷ್ಟರಲ್ಲೇ 3 ವಿಕೆಟ್ ಕಬಳಿಸಿದರು. ಜೈಸ್ವಾಲ್ 10, ಶುಭ್ಮನ್ ಗಿಲ್ ಶೂನ್ಯ (0) ಹಾಗೂ ರಜತ್ ಪಟೀದಾರ್ 5 ರನ್ ಗಳಿಸಿ ಔಟಾದರು.
ಸಂಕಷ್ಟದಲ್ಲಿದ್ದ ಭಾರತಕ್ಕೆ ನಾಯಕ ರೋಹಿತ್ ಶರ್ಮಾ ಜೊತೆಗೂಡಿ ಜಡೇಜಾ ತಂಡಕ್ಕೆ ಆಸರೆಯಾದರು. ಜವಾಬ್ದಾರಿಯುತವಾಗಿ ಬ್ಯಾಟ್ ಬೀಸಿದ ಜಡೇಜಾ138 ಎಸೆತಗಳಲ್ಲಿ 6 ಬೌಂಡರಿ ಹಾಗೂ 1 ಸಿಕ್ಸರ್ನೊಂದಿಗೆ ಅರ್ಧಶತಕ ಪೂರೈಸಿದರು. ರೋಹಿತ್ ಶರ್ಮಾ ನಿರ್ಗಮನದ ಬಳಿಕವೂ ಜಡೇಜಾ ಆಂಗ್ಲರನ್ನು ಮನಬಂದಂತೆ ಚಚ್ಚಿದರು.
198 ಎಸೆತ, 7 ಬೌಂಡರಿ, 2 ಸಿಕ್ಸರ್ನೊಂದಿಗೆ ಶತಕ
198 ಎಸೆತಗಳಲ್ಲಿ 7 ಬೌಂಡರಿ ಹಾಗೂ 2 ಬೊಂಬಾಟ್ ಸಿಕ್ಸರ್ ಮೂಲಕ ಭರ್ಜರಿ ಶತಕ (100*) ಪೂರೈಸಿದರು. ಪ್ರಸ್ತುತ ಭಾರತ 85 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 322 ರನ್ ಕಲೆಹಾಕಿದೆ. ಅಜೇಯ 106* ರನ್ ಗಳಿಸಿರುವ ರವೀಂದ್ರ ಜಡೇಜಾ ಹಾಗೂ ಕುಲ್ದೀಪ್ ಯಾದವ್ 1* ಕ್ರೀಸ್ನಲ್ಲಿದ್ದಾರೆ.