Thursday, January 16, 2025

ರಾಹುಲ್ ಗಾಂಧಿ ಟೈಂ ಪಾಸ್ ಗಿರಾಕಿ: ಯತ್ನಾಳ್​ ವ್ಯಂಗ್ಯ

ಶಿವಮೊಗ್ಗ: ರಾಹುಲ್ ಗಾಂಧಿ ಟೈಂ ಪಾಸ್ ಗಿರಾಕಿ ಎಂದು ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಕುಟುಕಿದ್ದಾರೆ. 

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗಬೇಕು.
ದೇಶದ್ರೋಹಿ ಹೇಳಿಕೆ ಕಾಂಗ್ರೆಸ್​ನಿಂದಲೇ ಬರೋದು. ದೇಶ ವಿಭಜನೆ ಮಾಡಿದ್ದು ಯಾರು..?ತಮ್ಮ ಸ್ವಾರ್ಥಕ್ಕಾಗಿ ನೆಹರು ಪ್ರಧಾನಿ ಆಗಲು ದೇಶ ಒಡೆದಿದ್ದರು. ಭಾರತ ಜೋಡೋ ಅಂತ ಮಾಡುತ್ತಾರೆ.ಇಲ್ಲಿ ಭಾರತ ತೋಡೋ ಮಾಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚುನಾವಣೆಯಲ್ಲಿ ನಿಲ್ಲದಂತೆ ನಿಷೇದ ಹೇರಬೇಕು ಇಂತ ಹೇಳಿಕೆ ಕೊಟ್ಟಾಗ. ರಾಹುಲ್ ಗಾಂಧಿ ಎಂದಿಗೂ ಅನರ್ಹ ಇದ್ದಾರೆ.ರಾಹುಲ್ ಗಾಂಧಿ ಟೈಂ ಪಾಸ್ ಗಿರಾಕಿ ಎಂದರು.

2024 ರಲ್ಲಿ ಸಹ ಕಾಂಗ್ರೆಸ್ ಬರಲ್ಲ

ಕಾಂಗ್ರೆಸ್​ ಸರ್ಕಾರ 2024ಕ್ಕೂ ಅಧಿಕಾರಕ್ಕೆ ಬರುವುದಿಲ್ಲ.

ಮುಳುಗಿ ಹೋಗುವ ಪಕ್ಷಕ್ಕೆ ಖರ್ಗೆ ಅಧ್ಯಕ್ಷ

ಮುಳುಗಿ ಹೋಗುವ ಪಕ್ಷಕ್ಕೆ ಖರ್ಗೆ ಅವರನ್ನು ಅಧ್ಯಕ್ಷರಾನ್ನಾಗಿ ಮಾಡಿದ್ದಾರೆ.ಯಾವ ಯಾವ ಸರ್ಕಾರ ಎಷ್ಟು ಅನುದಾನ ಕೊಟ್ಟಿದ್ದಾರೆ ಅಂತ ಹೇಳಿದ್ದಾರೆ. ಶ್ವೇತಪತ್ರಕ್ಕೆ ಉತ್ತರ ಕೊಡಬೇಕಿತ್ತು ಯಾಕೇ ಕೊಟ್ಟಿಲ್ಲ.ಅನ್ಯಾಯ ಆಗಿದೆ ಅಂತ ಸುಪ್ರೀಂ ಕೋರ್ಟ್ ಗೆ ಹೋಗಬೇಕಿತ್ತು. ಅದು ಸಹ ಮಾಡಿಲ್ಲ. ಹಿಂದೂಗಳ ದೇವಸ್ಥಾನದ ಮೇಲೆ ತೆರಿಗೆ ಹಾಕುತ್ತಿದ್ದೀರಾ..? ಯಾವುದೋ ಕೌಂಪಡ್ ಕಟ್ಟಲು 32 ಕೋಟಿ ಹಂಚುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

ಕೇಂದ್ರದ ಹೈಕಮಾಂಡ್ ನಿರ್ಧಾರಕ್ಕೆ ನಾವು ಬದ್ಧ.
ಯೋಗಿ ಆಧಿತ್ಯ ನಾಥ್ ಆಗಿದ್ದಾರೆ ಅಂತ ಮಾದರ ಚನಯ್ಯ ಕೇಳಿರಬಹುದು. ಅನೇಕ ಜನ ಸಾಧು ಸಂತರಿದ್ದಾರೆ. ನಾವು ಕೇಂದ್ರದ ಹೈಕಮಾಂಡ್ ನಿರ್ಧಾರಕ್ಕೆ ನಾವು ಬದ್ಧರಾಗಿರುತ್ತೇವೆ.

ರೋಕ್ಕಾ ಇಲ್ಲ ಏನೇ ಇದ್ರೂ ನೋ ಬಜೆಟ್. ಚುನಾವಣೆ ನಂತರ ನೋ ಗ್ಯಾರಂಟಿ ಸರ್ಕಾರ ಇದು.ಎಂಪಿ ಚುನಾವಣೆ ಬಳಿಕ ನೋ ಗ್ಯಾರಂಟಿ, ನೋ ವ್ಯಾರಂಟಿ ಎಂದರು.

RELATED ARTICLES

Related Articles

TRENDING ARTICLES