ಅಬುದಾಬಿ: ಪ್ರಧಾನಿ ನರೇಂದ್ರ ಮೋದಿ ಅಯೋಧ್ಯೆ ಬಳಿಕ ಅರಬ್ಬರ ನಾಡಿನಲ್ಲಿ ಮೊದಲ ಭವ್ಯ ಮಂದಿರ ಉದ್ಘಾಟನೆ ಮಾಡಲಿದ್ದಾರೆ. ನಿನ್ನೆ ಅಬುಧಾಬಿಯಲ್ಲಿ ನಡೆದ ಅಹ್ಲಾನ್ ಮೋದಿ ಹಲೋ ಮೋದಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಇದನ್ನೂ ಓದಿ: ರಾಜಸ್ಥಾನದಿಂದ ರಾಜ್ಯಸಭೆಗೆ ಸೋನಿಯಾ ಗಾಂಧಿ ಸ್ಪರ್ಧೆ: ಇಂದು ನಾಮಪತ್ರ ಸಲ್ಲಿಕೆ
ಅಬುದಾಬಿಯಲ್ಲಿ 27 ಎಕರೆ ವಿಶಾಲ ಪ್ರದೇಶದಲ್ಲಿ ನಿರ್ಮಾಣವಾಗಿರುವ ನಾರಾಯಣ ಮಂದಿರವನ್ನು ಪ್ರಧಾನಿ ಮೋದಿ ಉದ್ಘಾಟಿಸಲಿದ್ದಾರೆ. ಬ್ಯಾಪ್ಸ್ ಸಂಸ್ಥೆ ವತಿಯಿಂದ 700 ಕೋಟಿ ವೆಚ್ಚದಲ್ಲಿ ಈ ಭವ್ಯ ದೇವಸ್ಥಾನ ನಿರ್ಮಾಣವಾಗಿದ್ದು ಇಲ್ಲಿ ರಾಮ, ಕೃಷ್ಣ, ಶಿವ, ಅಯ್ಯಪ್ಪಸ್ವಾಮಿ ಸೇರಿದಂತೆ 7 ದೇವರ ಪ್ರತಿಷ್ಠಾಪನೆ ಆಗಲಿದೆ. ಈ ದೇವಾಲಯದ ನಿರ್ಮಾಣಕ್ಕಾಗಿ ಭಾರತದಿಂದ 2 ಸಾವಿರಕ್ಕೂ ಹೆಚ್ಚು ನುರಿತ ಕಾರ್ಮಿಕರು ತೆರಳಿದ್ದು ಮಂದಿರ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದಾರೆ.
ಈ ವೇಳೆಯಲ್ಲಿ ಪ್ರಧಾನಿ ಮೋದಿ ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಅವರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಲಿದ್ದು, ಹಲವು ಮಹತ್ವದ ಒಪ್ಪಂದಗಳಿಗೆ ಸಹಿ ಹಾಕುವ ಸಾಧ್ಯತೆಯಿದೆ. ಅಲ್ಲದೇ ವಿಶ್ವ ಸರ್ಕಾರ ಶೃಂಗಸಭೆ 2024 ರಲ್ಲಿ ವಿಶೇಷ ಅತಿಥಿಯಾಗಿ ಭಾಗವಹಿಸಿ ಪ್ರಧಾನಿ ಮೋದಿ ಭಾಷಣ ಮಾಡಲಿದ್ದಾರೆ.
Immensely grateful to my brother, HH @MohamedBinZayed, for taking the time to receive me at Abu Dhabi airport.
I look forward to a productive visit which will further strength the friendship between India and UAE. 🇮🇳 🇦🇪 pic.twitter.com/OWQivfszI2
— Narendra Modi (@narendramodi) February 13, 2024