Monday, December 23, 2024

ರಾಕ್​ ಲೈನ್​ ಮಾಲ್​ ಗೆ ಬೀಗ ಜಡಿದ ಅಧಿಕಾರಿಗಳು!

ಬೆಂಗಳೂರು: ಬೆಳ್ಳಂಬೆಳಗ್ಗೆ ರಾಕ್‌ಲೈನ್‌ ವೆಂಕಟೇಶ್‌ಗೆ ಬಿಗ್ ಶಾಕ್ ಎದುರಾಗಿದ್ದು ರಾಕ್​ಲೈನ್​ ವೆಂಕಟೇಶ್​ ಮಾಲಿಕತ್ವದ ರಾಕ್​ಲೈನ್​ ಮಾಲ್​ ಗೆ ಪಾಲಿಕೆಯ ಕಂದಾಯ ಅಧಿಕಾರಿಗಳು ಬೀಗ ಜಡಿದಿದ್ದಾರೆ.

ಇದನ್ನೂ ಓದಿ: ಭಿಕ್ಷುಕ ತಂದಿಟ್ಟ ಬಾಕ್ಸ್​​ ಕಂಡು ಭಯಭೀತರಾದ ಜನ: ಸ್ಥಳಕ್ಕೆ ಬಾಂಬ್ ಸ್ಕ್ವಾಡ್​ ದೌಡು!

ನಗರದ ಜಾಲಹಳ್ಳಿ ಕ್ರಾಸ್​ ದಾಸರಹಳ್ಳಿ ವಲಯ ವ್ಯಾಪ್ತಿಯಕಲ್ಲಿರುವ ನಟ, ನಿರ್ಮಾಪಕ ರಾಕ್​ ಲೈನ್​ ವೆಂಕಟೇಶ್​​ ಮಾಲೀಕತ್ವದ ರಾಕ್​ ಲೈನ್ ಮಾಲ್​ ಸಂಬಂಧಿಸಿ ಬಿಬಿಎಂಪಿಗೆ 2011 ರಿಂದ 2023ರ ತನಕ ಸುಮಾರು 11.51 ಕೋಟಿ ರೂ. ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವ ಹಿನ್ನೆಲೆ ರಾಕ್​ಲೈನ್ ಮಾಲ್​ ಗೆ ಬೀಗ ಜಡಿಯಲಾಗಿದೆ.

ತೆರಿಗಯನ್ನು ಬಾಕಿ ಉಳಿಸಿಕೊಂಡಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳು ರಾಕ್​ ಲೈನ್ ಅಂಡ್​ ಸಿನಿಮಾಸ್​  ನ್ನು ಬಂದ್​ ಮಾಡಿ ಸೀಲ್ ಹಾಕಿದ್ದಾರೆ. ಈ ಹಿನ್ನೆಲೆ ಮಾಲ್​ ನಲ್ಲಿರುವ ಶಾಪ್​ ಗಳ ಸಿಬ್ಬಂದಿ ಮಾಲ್ ನ ಗೇಟ್​ ಹೊರಗೆ ಗೇಟ್​ ಕಾಯುವಂತಾಗಿದೆ.

RELATED ARTICLES

Related Articles

TRENDING ARTICLES