Monday, December 23, 2024

ಮಗಳ ಜೊತೆ ಐಸ್​ ಕ್ರೀಂ ಸವಿಯಲು ಮಳಿಗೆಗೆ ಬಂದ ಇನ್ಫೋಸಿಸ್ ನಾರಾಯಣ ಮೂರ್ತಿ !

ಬೆಂಗಳೂರು: ಜಯನಗರದ ಕಾರ್ನರ್​ ಹೌಸ್ ಮಳಿಗೆಯಲ್ಲಿ ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಅವರು ಬ್ರಿಟನ್‌ನ ಪ್ರಥಮ ಮಹಿಳೆಯೂ ಆಗಿರುವ ಮಗಳು ಅಕ್ಷತಾ ಮೂರ್ತಿ ಜತೆಗೆ ಐಸ್ ಕ್ರೀಂ ಸವಿದಿದ್ದಾರೆ. ಇದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ಅವರಿಬ್ಬರ ಸರಳತೆಗೆ ಮೆಚ್ಚುಗೆ ವ್ಯಕ್ತವಾಗಿದೆ.

ಇದನ್ನೂ ಓದಿ: ಚಿತ್ರದುರ್ಗ ಲೋಕಸಭಾ ಕ್ಷೇತ್ರದಿಂದ ಮಾದಾರ ಚನ್ನಯ್ಯ ಸ್ವಾಮೀಜಿ ಕಣಕ್ಕೆ!?

ಫೆ.10ರಂದು ಸೇಂಟ್ ಜೋಸೆಫ್ ಕಾಮರ್ಸ್ ಕಾಲೇಜಿನಲ್ಲಿ ಸಪ್ನ ಬುಕ್ ಆಯೋಜಿಸಿದ್ದ ‘ಆನ್ ಅನ್‌ಕಾಮನ್ ಲವ್’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಚಿತ್ರಾ ಬ್ಯಾನರ್ಜಿ ದಿವಾಕರುಣಿ ಅವರು ಈ ಪುಸ್ತಕದ ಲೇಖಕರಾಗಿದ್ದು, ನಾರಾಯಣ ಮೂರ್ತಿ ಮತ್ತು ಸುಧಾ ಮೂರ್ತಿ ಅವರ ಕುರಿತ ಪುಸ್ತಕ ಇದಾಗಿದೆ. ಇದರಿಂದಾಗಿ ಮಕ್ಕಳು ಹಾಗೂ ಪಾಲಕರ ಜತೆಗೆ ಅಕ್ಷತಾ ಭಾಗವಹಿಸಿದ್ದರು.

ಸದ್ಯ ನಾರಾಯಣ ಮೂರ್ತಿ ಅವರ ಜತೆಗೆ ಅಕ್ಷತಾ ಅವರು ಜಯನಗರದ ‘ಕಾರ್ನರ್ ಹೌಸ್’ ಮಳಿಗೆಯಲ್ಲಿ ಸೋಮವಾರ ಐಸ್ ಕ್ರೀಂ ಸವಿದಿದ್ದಾರೆ. ಅವರ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಒಂದಾದ ‘ಎಕ್ಸ್’ನಲ್ಲಿ ಹಂಚಿಕೊಂಡಿದ್ದು ವೈರಲ್ ಆಗಿದೆ.

RELATED ARTICLES

Related Articles

TRENDING ARTICLES