Tuesday, October 15, 2024

ಆಸ್ಟ್ರೇಲಿಯಾ ಓಪನ್ ನಲ್ಲಿ ರೋಹನ್​ ಬೋಪಣ್ಣ ಐತಿಹಾಸಿ ಸಾಧನೆ: 50 ಲಕ್ಷ ಬಹುಮಾನ ಘೋಷಿಸಿದ ಸಿಎಂ

ಬೆಂಗಳೂರು: ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿಯ ಪುರುಷರ ಡಬಲ್ಸ್ ವಿಭಾಗದಲ್ಲಿ ಗೆದ್ದು ಐತಿಹಾಸಿಕ ಸಾಧನೆ ಮಾಡಿದ ರೋಹನ್ ಬೋಪಣ್ಣ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಅಭಿನಂದಿಸಿ  50 ಲಕ್ಷ ರೂ.ಗಳ ಬಹುಮಾನ ಘೋಷಿಸಿದರು.

ಇದನ್ನೂ ಓದಿ: ಲೋಕಸಭಾ ಚುನಾವಣೆ: ಖರ್ಗೆಗೆ ಶಾಮನೂರು ಶಿವಶಂಕರಪ್ಪ ಪತ್ರ ಬಾಂಬ್​!

ಈ ಬಾರಿಯ ಆಸ್ಟ್ರೇಲಿಯಾ ಓಪನ್ ಟೆನ್ನಿಸ್​ ಟೂರ್ನಿಯ ಡಬಲ್ಸ್​ ವಿಭಾಗದಲ್ಲಿ ತಮ್ಮ 43ನೇ ವಯಸ್ಸಿನಲ್ಲಿ ರೋಹನ್ ಬೋಪಣ್ಣ- ಎಬ್ಡೆನ್​ ಜೊತೆಯಾಟವಾಡಿ ಉತ್ತಮ ಸಾಧನೆ ಮಾಡುವ ಮೂಲಕ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಫೈನಲ್ ನಲ್ಲಿ ಇಟಲಿಯ ಸಿಮೋನೆ ಬೊಲೆಲ್ಲಿ ಮತ್ತು ಆ್ಯಂಡ್ರಿಯಾ ವವಸ್ಸೋರಿ ರನ್ನು ಮಣಿಸಿದ್ದಾರೆ. ಅಂತಿಮ ಸುತ್ತಿನ ಫೈನಲ್​ ಪಂದ್ಯದಲ್ಲಿ 7-6 ಹಾಗು 7-5 ಸ್ಕೋರ್ ಮಾಡುವ ಮೂಲಕ ಐತಿಹಾಸಿಕ ಸಾಧನೆಯನ್ನು ಮಾಡಿದ್ದಾರೆ.

ಈ ಹಿನ್ನೆಲಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಇಂದು ರೋಹನ್​ ಬೋಪಣ್ಣ ಅವರನ್ನು ಅಭಿನಂದಿಸಿ 50 ಲಕ್ಷ ರೂಗಳ ಬಹುಮಾನವನ್ನು ಘೋಷಿಸಿದ್ದಾರೆ.

ಈ ವೇಳೆ ಸಚಿವರಾದ ಪ್ರಿಯಾಂಕ್ ಖರ್ಗೆ, ಶಿವರಾಜ ತಂಗಡಗಿ, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು ಹಾಗೂ ರೋಹನ್ ಬೋಪಣ್ಣ ಅವರ ಕುಟುಂಬದವರು ಹಾಜರಿದ್ದರು.

RELATED ARTICLES

Related Articles

TRENDING ARTICLES