Thursday, May 2, 2024

ನಾನೇ ಹೋಗಿ ಡಿ.ಕೆ. ಸುರೇಶ್​ಗೆ ಗುಂಡು ಹಾಕ್ತಿನಿ ಅಂತ ಹೇಳಿಲ್ಲ : ಪ್ರಮೋದ್ ಮುತಾಲಿಕ್

ದಾವಣಗೆರೆ : ಸಂಸದ ಡಿ.ಕೆ. ಸುರೇಶ್ ದೇಶ ವಿಭಜನೆ ಹೇಳಿಕೆಯನ್ನು ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಖಂಡಿಸಿದ್ದಾರೆ.

ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಡಿ.ಕೆ. ಸುರೇಶ್ ಹೇಳಿಕೆಯನ್ನು ಕಾಂಗ್ರೆಸ್ ಸರ್ಕಾರವು ಸಮರ್ಥನೆ ಮಾಡಿಕೊಳ್ಳುತ್ತಿದೆ. ಕಾಂಗ್ರೆಸ್​ನವರು ದೇಶವನ್ನು ವಿಭಜನೆ ಮಾಡುತ್ತಾ ಬಂದಿದ್ದಾರೆ. ಈ ದೇಶವನ್ನು ಪಾಕಿಸ್ತಾನ ಮಾಡಿದ್ದೀರಿ ಎಂದು ಕಿಡಿಕಾರಿದ್ದಾರೆ.

ಭಾಷೆ, ಜಾತಿ ಹೆಸರಲ್ಲಿ ಹೊಡದು ಹಾಕಿದ್ರಿ. ಈ ಸಂಬಂಧ ಒಬ್ಬ ರಾಷ್ಟ್ರ ಭಕ್ತರು, ಜವಾಬ್ದಾರಿ ಇರುವ ಈಶ್ವರಪ್ಪನವರು ಹಿರಿಯರಿದ್ದಾರೆ. ಅವರು ಸಿಟ್ಟಿನಲ್ಲಿ ಅಂತವರಿಗೆ ಗುಂಡು ಹೊಡೆಯುವ ಕಾನೂನು ತರಬೇಕು ಅಂತ ಹೇಳಿದ್ದಾರೆ. ನಾನೇ ಹೋಗಿ ಡಿ.ಕೆ. ಸುರೇಶ್​ಗೆ ಗುಂಡು ಹಾಕ್ತಿನಿ ಅಂತ ಹೇಳಿಲ್ಲ. ಆದ್ರೆ, ಅವರ ಮೇಲೆ FIR ಮಾಡಿದ್ದಾರೆ. ಅದೇ ರೀತಿ ಡಿ.ಕೆ. ಸುರೇಶ್ ವಿರುದ್ಧವೂ FIR ಆಗಬೇಕು. ಅದು ತಾರತಮ್ಯ ಆಗಬಾರದು ಎಂದು ಅಸಮಾಧಾನ ಹೊರಹಾಕಿದ್ದಾರೆ.

ರಾಮ, ಶಿವ ಅಂದರೂ ಯಾರು ನಂಬಲ್ಲ

ರಾಜ್ಯ ಸರ್ಕಾರ 100 ರಾಮ ಮಂದಿರ ಪ್ರಸ್ತಾವನೆ ವಿಚಾರವಾಗಿ ಮಾತನಾಡಿ, ಕಾಂಗ್ರೆಸ್​ನವರಿಗೆ ಈಗ ಹಿಂದೂ ವಿರೋಧಿ ಎನ್ನುವುದು ಗೊತ್ತಾಗ್ತಾ ಇದೆ. ಅದಕ್ಕೆ ಬ್ಯಾಲೆನ್ಸ್ ಮಾಡುತ್ತಿದ್ದಾರಾ..? ಇವರ ಗುಣ ಸಮಾನತೆ ನೋಡುವ ಗುಣ ಅಲ್ಲ. ಮುಸ್ಲಿಂ ತುಷ್ಟೀಕರಣ ಮಾಡುವ ಗುಣ. ಕಾಂಗ್ರೆಸ್​ನವರು ಈಗ ರಾಮ, ಶಿವ ಅಂದರೂ ಯಾರು (ಜನರು) ನಂಬಲ್ಲ ಎಂದು ಕುಟುಕಿದ್ದಾರೆ.

RELATED ARTICLES

Related Articles

TRENDING ARTICLES