ಬೆಂಗಳೂರು : ಲೋಕಸಭೆಗೆ ನೀವು, ಕುಮಾರಸ್ವಾಮಿ, ನಿಖಿಲ್ ನಿಲ್ಲಬೇಕು ಎಂದು ಕಳಕಳಿಯಿಂದ ಹೇಳಿದ್ದಾರೆ. ನಾನು ನಿಲ್ಲಲ್ಲ, ನಿಖಿಲ್ ಕೂಡ ನಿಲ್ಲಲ್ಲ ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಸ್ಪಷ್ಟಪಡಿಸಿದರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಡ್ಯ ಲೋಕಸಭಾ ಕ್ಷೇತ್ರದ ಎಂಟೂ ಕ್ಷೇತ್ರದಲ್ಲೂ ಓಡಾಟ ನಡೆಸುತ್ತೇವೆ ಎಂದು ಹೇಳಿದರು.
ರಾಜ್ಯಾದ್ಯಂತ ಓಡಾಡಿ ಸಕ್ರಿಯ ರಾಜಕಾರಣದಲ್ಲಿ ತೊಡಗಿಸಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣಕಾರ್ಯಕರ್ತರೊಂದಿಗೆ ಸಭೆ ಮಾಡಿ ಮಾತನಾಡಿದ್ದಾರೆ. ಇಲ್ಲಿನ ಸಭೆಯಲ್ಲಿ ನಾವು ಮೂವರಲ್ಲಿ ಒಬ್ಬರು ನಿಲ್ಲಿ ಎಂದು ಒತ್ತಾಯ ಮಾಡಿದ್ದಾರೆ ಎಂದು ತಿಳಿಸಿದರು.
HDK-ನಡ್ಡಾ ನಿರ್ಧಾರ ತಗೋತಾರೆ
ಕುಮಾರಸ್ವಾಮಿ ಅವರು ಇವತ್ತು ಸಭೆಯಲ್ಲಿ ಇರಲಿಲ್ಲ. ಅಂತಿಮವಾಗಿ ಲೋಕಸಭೆ ಬಗ್ಗೆ ನಾವು ಒಂದು ಅಭಿಪ್ರಾಯ ತಗೆದುಕೊಳ್ಳುತ್ತೇವೆ. ನಮ್ಮ ಅಭಿಪ್ರಾಯವನ್ನು ಬಿಜೆಪಿ ಹೈಕಮಾಂಡ್ ಗಮನಕ್ಕೆ ತರುತ್ತಾರೆ. ಕುಮಾರಸ್ವಾಮಿ ಹಾಗೂ ಜೆ.ಪಿ ನಡ್ಡಾ ಕುಳಿತು ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಮಾಹಿತಿ ನೀಡಿದರು.
ಎನ್ಡಿಎ ಕೂಟದಲ್ಲಿ ನಾವು ಇದ್ದೇವೆ
ಜೆಡಿಎಸ್ ಹಾಗೂ ಬಿಜೆಪಿ ಪ್ರಶ್ನೆ ಅಲ್ಲ. ಎನ್ಡಿಎ ಕೂಟದಲ್ಲಿ ನಾವು ಇದ್ದೇವೆ. ಅಂತಿಮವಾಗಿ ಪ್ರಧಾನಿ ಮೋದಿ, ಜೆ.ಪಿ. ನಡ್ಡಾ, ಕುಮಾರಸ್ವಾಮಿ, ಯಡಿಯೂರಪ್ಪ ಎಲ್ಲರೂ ಸಮಾಲೋಚನೆ ಮಾಡಿ ತೀರ್ಮಾನ ಮಾಡುತ್ತಾರೆ ಎಂದು ದೇವೇಗೌಡ ಹೇಳಿದರು.