Friday, January 10, 2025

‘ಫಾರ್ ರಿಜಿಸ್ಟ್ರೇಷನ್’ ಟ್ರೈಲರ್‌ ಔಟ್‌ : ಫೆ.23ಕ್ಕೆ ಪೃಥ್ವಿ-ಮಿಲನಾ ಸಮ್ಮಿಲನ

ಬೆಂಗಳೂರು: ಸ್ಯಾಂಡಲ್​ವುಡ್​ನಲ್ಲಿ ಹಲವು ವಿಚಾರಗಳಿಂದ ಸದ್ದ ಮಾಡುತ್ತಿರುವ ಹೊಸ ಸಿನಿಮಾ ”ಫಾರ್ ರಿಜಿಸ್ಟ್ರೇಷನ್” ಚಿತ್ರ ಫೆಬ್ರುವರಿ 23ರಂದು ತರೆ ಕಾಣಲಿದೆ. ಪೃಥ್ವಿ ಅಂಬಾರ್ ಹಾಗೂ ಮಿಲನ ನಾಗರಾಜ್ ನಟಿಸಿರುವ ಬಹುನಿರೀಕ್ಷಿತ ಚಿತ್ರದ ಮೊದಲ ನೋಟ ಅನಾವರಣಗೊಂಡಿದೆ.

ಬೆಂಗಳೂರಿನ ಚಾಮರಾಜಪೇಟೆಯ ಕಲಾವಿದ ಸಂಘದಲ್ಲಿ ಟ್ರೇಲರ್ ಬಿಡುಗಡೆಯಾಗಿತ್ತು.ವಾಲಗದ ಮೂಲಕ ಇಡೀ ಚಿತ್ರತಂಡ ಸುದ್ದಿಗೋಷ್ಠಿಗೆ ಎಂಟ್ರಿ ಕೊಟ್ಟಿದ್ದು, ವಿಶೇಷವಾಗಿತ್ತು. ನಿರ್ದೇಶಕರಾದ ಶಶಾಂಕ್ ಹಾಗೂ ಚೇತನ್ ಕುಮಾರ್ ಟ್ರೇಲರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು.

ಟ್ರೇಲರ್ ಬಿಡುಗಡೆ ಬಳಿಕ ನಟ ಪೃಥ್ವಿ ಅಂಬಾರ್ ಮಾತನಾಡಿ, ಫಾರ್ ರಿಜಿಸ್ಟ್ರೇಷನ್ ಎರಡು ಸಹಪಾಠಿಗಳ ಪ್ರಯತ್ನ ಇದು. ನವೀನ್ ಅವರ ಕನಸಿನ ಕೂಸು ಇದು. ಈ ಚಿತ್ರಕ್ಕಾಗಿ ತುಂಬಾ ಹಾರ್ಡ್ ವರ್ಕ್ ಮಾಡಲಾಗಿದೆ.  ಚಿತ್ರದಲ್ಲಿನ ದೃಶ್ಯಗಳು ನೋಡುಗರು ಮನಸ್ಸಿನಲ್ಲಿ ಸಂಬಂಧಗಳು ರಿಜಿಸ್ಟ್ರೇಷನ್ ಆಗಬೇಕು ಅನ್ನೋದು ನಮ್ಮ ಆಸೆ. ಟ್ರೇಲರ್ ತುಂಬಾ ಚೆನ್ನಾಗಿ ಮೂಡಿಬಂದಿದೆ. ಈ ಸಿನಿಮಾ ಎಲ್ಲರಿಗೂ ಹತ್ತಿರವಾಗುತ್ತದೆ. ಎಲ್ಲಾ ಪಾತ್ರ ವರ್ಗವದವರು ಅದ್ಭುತವಾಗಿ ನಟಿಸಿದ್ದಾರೆ ಎಂದು ತಿಳಿಸಿದರು.

ನಟಿ ಮಿಲನಾ ನಾಗರಾಜ್ ಮಾತನಾಡಿ, ನವೀನ್ ಸರ್ ಮನೆಗೆ ಬಂದು ಕಥೆ ವಿವರಿಸಿದರು. ತುಂಬಾ ತಯಾರಿಯಿಂದ ಬಂದಿದ್ದರು. ಫಸ್ಟ್ ಆಫ್ ಕಥೆ ಹೇಳಿ ನಿಲ್ಲಿಸಿಬಿಟ್ಟರು. ಕಂಟಿನ್ಯೂ ಮಾಡಿ ಎಂದಾಗ ನೀವು ಸಿನಿಮಾ ಒಪ್ಪಿಕೊಂಡರೇ ಕಥೆ ಹೇಳುತ್ತೇನೆ ಎಂದರು. ಸರಿ ಸರ್, ಯೋಚನೆ ಮಾಡಿ ಹೇಳುತ್ತೇನೆ ಎಂದೆ. ಆಮೇಲೆ ಸಿನಿಮಾ ಮಾಡುತ್ತೇನೆ ಬಂದು ಕಥೆ ಹೇಳಿ ಅಂದಾಗ ಕಥೆ ಹೇಳಿದರು. ಒಂದು ರೀತಿ ಬ್ಲಾಕ್ ಮೇಲೆ ಮಾಡಿ ಹೋಗಿದ್ದರು. ನಿರ್ಮಾಪಕರಾದ ನವೀನ್ ಸರ್ ಬಹಳ ಫ್ಯಾಷನೆಟೇಡ್ ನಿರ್ಮಾಪಕರು. ಬಹಳಷ್ಟು ಇಂಟರ್ ವ್ಯೂಗಳಲ್ಲಿಯೂ ಹೇಳಿದ್ದೇನೆ. ಟೈಟಲ್ ಕೊಡುವುದರಿಂದ ಹಿಡಿದು ಕಥೆಯಲ್ಲಿನ ಪ್ರತಿ ಶಾರ್ಟ್, ಸೀನ್ಸ್ ತೊಡಗಿಸಿಕೊಳ್ಳುತ್ತಾರೆ. ನನಗೆ ಮನಸ್ಸು ಪೂರ್ತಿಯಾಗಿ ಸಿನಿಮಾ ಗೆಲ್ಲಬೇಕು. ಇಂತಹ ನಿರ್ದೇಶಕರು, ನಿರ್ಮಾಪಕರು ಗೆಲ್ಲಬೇಕು ಎಂದರು.

ನಿರ್ಮಾಪಕರಾದ ನವೀನ್ ರಾವ್ ಮಾತನಾಡಿ, ಬಹಳ ಪ್ರೀತಿಯಿಂದ ಮಾಡಿರುವ ಸಿನಿಮಾವಿದು. ಎರಡು ತಿಂಗಳು ಚರ್ಚೆ ಬಳಿಕ ಕಥೆ ರೆಡಿ ಮಾಡಿಕೊಂಡೆವು. ಕಥೆ ಡಿಮ್ಯಾಂಡ್ ಮಾಡಿದಾಗ ನಾವು ಮೊದಲ ಭೇಟಿಯಾಗಿದ್ದು ಮಿಲನಾ ಮೇಡಂ ಅವರನ್ನು. ಅವರಿಗೆ ಕಥೆ ಹೇಳಿದೆವು. ಆ ನಂತರ ಪೃಥ್ವಿ ಸರ್ ಭೇಟಿ ಮಾಡಿ ಕಥೆ ಹೇಳಿದೆವು. ಎಲ್ಲಾ ಕಲಾವಿದರು ಸಹಕಾರದಿಂದ ಈ ಚಿತ್ರವಾಗಿದೆ. ಎಲ್ಲರೂ ಶ್ರಮಪಟ್ಟು ಸಿನಿಮಾ ಮಾಡಿದ್ದೇವೆ. ನನ್ನ ಕುಟುಂಬಸ್ಥರು ಸಪೋರ್ಟ್ ಆಗಿ ನಿಂತಿದ್ದಾರೆ. ಕೃಷ್ಣ, ಮಿಲನ ಮೇಡಂ ಸಿನಿಮಾಗೆ ಸ್ಟ್ರೇಂಥ್ ಆಗಿದ್ದರು. ಇದೇ 23ಕ್ಕೆ ಸಿನಿಮಾ ರಿಲೀಸ್ ಆಗಲಿದೆ. ನೀವೆಲ್ಲರು ಸಹಕಾರ ಕೊಡಬೇಕು. ಈ ಚಿತ್ರದ ಬಳಿಕ ಮತ್ತೊಂದು ಚಿತ್ರಕ್ಕೆ ರೆಡಿಯಾಗುತ್ತಿದ್ದೇವೆ ಎಂದರು.

ನಿರ್ದೇಶಕ ನವೀನ್ ದ್ವಾರಕಾನಾಥ್ ಮಾತನಾಡಿ, ಹೊಸ ಪ್ರಯತ್ನ ಮಾಡಿದ್ದೇವೆ. ಬೆನ್ನು ತಟ್ಟಿ ಹಾರೈಸಿ. ತಪ್ಪಾಗಿದ್ದರೆ ಇನ್ನೊಮ್ಮೆ ಬೆನ್ನು ತಟ್ಟಿ ಹೇಳಿ ಚೆನ್ನಾಗಿ ಮಾಡಿ ಅಂತಾ ಹೇಳಿ ಮಾಡೋಣಾ. ನಾನು ಈ ಚಿತ್ರವನ್ನು ನನ್ನ ಗುರುಗಳಾದ ಸಿ ಆರ್ ಸಿಂಹ ಅವರಿಗೆ ಅರ್ಪಿಸುತ್ತೇನೆ ಎಂದು ತಿಳಿಸಿದರು.

ಸಂಬಂಧ ಮಹತ್ವ ಸಾರುವ ಫಾರ್ ರಿಜಿಸ್ಟ್ರೇಷನ್ ಟ್ರೇಲರ್ ಸಿನಿಮಾ ಮೇಲೆ ನಿರೀಕ್ಷೆಯನ್ನು ಇಮ್ಮಡಿಗೊಳಿಸಿದೆ. ರವಿಶಂಕರ್, ತಬಲಾ ನಾಣಿ, ಸುಧಾ ಬೆಳವಾಡಿ, ಬಾಬು ಹಿರಣಯ್ಯ, ಸ್ವಾತಿ, ರಮೇಶ್ ಭಟ್, ಉಮೇಶ್ ಸೇರಿದಂತೆ ಹಲವರು ತಾರಾ ಬಳಗದಲ್ಲಿದ್ದಾರೆ. ಚಿತ್ರಕಥೆ, ನಿರ್ದೇಶನ ನವೀನ್ ದ್ವಾರಕನಾಥ್ ನಿರ್ವಹಿಸಿದ್ದು, ಸಂಗೀತ ಸಂಯೋಜನೆ ಆರ್.ಕೆ ಹರೀಶ್, ಅಭಿಲಾಷ್ ಕಲಾತಿ, ಅಭಿಷೇಕ್ ಜಿ.ಕಾಸರಗೋಡು ಛಾಯಾಗ್ರಹಣ, ಮನು ಶೇಡ್ಗರ್ ಸಂಕಲನ ಚಿತ್ರಕ್ಕಿದೆ. ನಿಶ್ಚಲ್ ಫಿಲಂಸ್ ಬ್ಯಾನರ್ನಲ್ಲಿ ನವೀನ್ ರಾವ್ ಬಂಡವಾಳ ಹೂಡಿದ್ದಾರೆ. ಬಹಳ ದಿನಗಳ ನಂತರ ಮತ್ತೆ ವಿತರಣೆ ಅಖಾಡಕ್ಕೆ ಇಳಿದಿರುವ ದೀಪಕ್ ಗಂಗಾಧರ್ ಫಿಲಂಸ್ ಫಾರ್ ರಿಜಿಸ್ಟ್ರೇಷನ್ ಸಿನಿಮಾವನ್ನು ಫೆಬ್ರವರಿ 23ರಂದು ರಾಜ್ಯಾದ್ಯಂತ ಬಿಡುಗಡೆ ಮಾಡುತ್ತಿದೆ.

RELATED ARTICLES

Related Articles

TRENDING ARTICLES