Thursday, December 19, 2024

ಹುಡುಗ್ರೇ ಹುಷಾರ್‌..ಕರಿ ಮಣಿ ಮಾಲಿಕ ನೀ ‘ನಲ್ಲ’ಅಂತ ಮೋಸ ಮಾಡ್ತಾಳಂತೆ ಈ ರೀಲ್ಸ್‌ ಸುಂದ್ರಿ!

ಶಿವಮೊಗ್ಗ: ಮಲೆನಾಡಿನಲ್ಲಿ ಲವ್, ಸೆಕ್ಸ್, ಮ್ಯಾರೇಜ್ ದೋಖಾ ನಡೆದಿದೆ. ಹಣದ ವ್ಯಾಮೋಹ, ಸೆಕ್ಸ್ ನ ಖಯಾಲಿ ಈಕೆ ಬಂಡವಾಳವಾಗಿದ್ದು, 3 ಜನರ ಜೊತೆ ಮದುವೆ, ಹಲವರ ಜೊತೆಗಿನ ಈಕೆಯ ಸಂಬಂಧ, ಈಗ ಬಟಾ ಬಯಲಾಗಿದೆ. ಅಷ್ಟೇ ಅಲ್ಲ, ಪ್ರೀತಿಸಿ ಮದುವೆಯಾಗಿದ್ದ ಈ ಯುವಕನಿಗೆ ಬರೋಬ್ಬರಿ 20 ಲಕ್ಷ ರೂ. ವಂಚನೆ ಮಾಡಿದ್ದಾಳೆ. ಅಷ್ಟಕ್ಕೂ ಯಾರೀ, ಕರಿ ಮಣಿ ಮಾಲಿಕ ನೀನಲ್ಲ ಅಂತಿರೋ, ರೀಲ್ಸ್ ಸುಂದರಿ. 

ಆಕೆ ಮೊದಲು ಟಿಕ್‌ ಟಾಕ್‌ ಸ್ಟಾರ್‌ ಆಗಿದ್ದಳು. ನಂತ್ರ ರೀಲ್ಸ್‌ ರಾಣಿಯಾದಳು. ಹುಡುಗರ ಜತೆ ರೀಲ್ಸ್‌ ಮಾಡಿದಳು. ಒಂದೊಂದು ವಿಡಿಯೊಗೆ ಒಬ್ಬೊಬ್ಬ ಹುಡುಗರು ಅನ್ನೋ ತರ ಬದಲಾದರು. ಆದರೆ, ಈಗ ರಿಯಲ್‌ ಜೀವನದಲ್ಲೂ ಇದೇ ರೀತಿಯ ಆಟ ಆಡಲು ಮುಂದಾಗಿರುವ ಅರೋಪ ಎದುರಿಸುತ್ತಿದ್ದಾಳೆ.

ಹೊಸನಗರ ತಾಲೂಕಿನ ನಗರ ಸಮೀಪದ ಹೆಂಡೆಗದ್ದೆ ಗ್ರಾಮದ ಯುವತಿ ಸನ್ನಿಧಿಯ ಮೇಲೆ ಇಂಥಹುದೊಂದು ಆರೋಪ ಎದುರಾಗಿದೆ. ಆಕೆ ಶಿವಮೊಗ್ಗದಲ್ಲಿ ಮದುವೆಯಾಗಿ ಮೋಸ ಮಾಡಿದ್ದಾಳೆ ಎಂದು ಆಕೆಯ ಗಂಡನಾಗಿದ್ದವನು ಆರೋಪ ಮಾಡಿದ್ದಾನೆ. ಮಲೆನಾಡಿನ ಹುಡುಗರೇ ಎಚ್ಚರ.. ಈ ಹುಡುಗಿ ಹಣಕ್ಕಾಗಿ ಮದುವೆಯಾಗಿ ನಂತರ ಮೋಸ ಮಾಡ್ತಾಳೆ ಎಂದು ಆರೋಪಿಸಿದ್ದಾನೆ.

ಶಿವಮೊಗ್ಗ ನಗರ ಸಂಕೇತ್ ಎಂಬ ಯುವಕ ತನಗೆ ಸನ್ನಿಧಿಯಿಂದ ಮೋಸವಾಗಿದೆ ಎಂದು ಆರೋಪಿಸಿದ್ದಾನೆ. ಮದುವೆಯಾಗಿ ಕೆಲವು ದಿನವೂ ಸರಿಯಾಗಿ ಸಂಸಾರ ಮಾಡಿಲ್ಲ. ಈಗ ಬರೋಬ್ಬರಿ 20 ಲಕ್ಷ ರೂ. ಮೋಸ ಮಾಡಿದ್ದಾಳೆ ಎಂದು ಆರೋಪಿಸಿದ್ದಾನೆ.

ಸಂಕೇತ್‌ ಮತ್ತು ಸನ್ನಿಧಿಯ ಮದುವೆ 2023ರ ಫೆಬ್ರವರಿಯಲ್ಲಿ ನಡೆದಿತ್ತು. ಅಂದರೆ ಒಂದು ವರ್ಷದ ಹಿಂದೆ ಅವರಿಬ್ಬರು ಒಂದಾಗಿದ್ದರು. ಆದರೆ, ಅವರ ಖುಷಿಯ ದಿನಗಳು ಒಂದೆರಡು ತಿಂಗಳಿಗಷ್ಟೇ ಸೀಮಿತವಾಗಿತ್ತು. ಒಂದೆರಡು ತಿಂಗಳು ಸಂಸಾರ ಮಾಡಿ ಕೈ ಕೊಟ್ಟ ಈ ಸುಂದರಿ ನೀನು ಕೀಳು ಜಾತಿಯವನೆಂದು ಆರೋಪ ಮಾಡಿ ದೂರ ಮಾಡಿದ್ದಾಳಂತೆ. ಈಗ ಬೇರೊಬ್ಬ ಹುಡುಗನ ಜತೆ ಓಡಾಡುತ್ತಿದ್ದಾಳಂತೆ.

ಸಂಕೇತ್‌ನನ್ನು ಮದುವೆಯಾಗುವ ಮುನ್ನವೂ ಕೆಲವು ತಿಂಗಳ ಕಾಲ ಆಕೆ ಪ್ರೀತಿಸಿದ್ದಳು. ಪ್ರೀತಿ ಪ್ರೇಮ ಅಂತ ಅವನ ಬೆನ್ನುಬಿದ್ದಿದ್ದ ಆಕೆ ಸುಮಾರು 20 ಲಕ್ಷ ರೂ.ಯನ್ನು ಪಡೆದಿದ್ದಳಂತೆ. ಕೊನೆಗೆ ಮದುವೆಯೂ ಆಗಿದೆ. ಆದರೆ, ಜಾತಿ ಹೆಸರು ಹೇಳಿ ಜಾರಿಕೊಂಡಿದ್ದಾಳೆ ಎನ್ನುವುದು ಸಂಕೇತ್‌ ದೂರು.

ಈ ನಡುವೆ, ತನಗೆ ಮೋಸ ಮಾಡಿದ ಸನ್ನಿಧಿ ಬೇರೆ ಹುಡುಗರಿಗೂ ಇದೇ ರೀತಿ ಮೋಸ ಮಾಡಿದ್ದಾಳೆ. ಬೇರೆ ಯುವಕರ ಜತೆಗೂ ಆಕೆಗೆ ಸಂಬಂಧವಿದೆ ಎಂದೆಲ್ಲ ಸಂಕೇತ್‌ ಆರೋಪ ಮಾಡಿದ್ದಾರೆ. ಸನ್ನಿಧಿಗೆ ಈ ಹಿಂದೆ ಕಡೂರು ಮೂಲದ ಯುವಕನ ಜೊತೆ ಮದುವೆಯಾಗಿದೆ ಎನ್ನುವುದು ಸಂಕೇತ್‌ ಆರೋಪ.

ಸಂಕೇತ್‌ ಮಾಡಿದ ಆರೋಪದಲ್ಲಿ ನಿಜವೆಷ್ಟು ಸುಳ್ಳೆಷ್ಟು ಎನ್ನುವುದು ಸ್ಪಷ್ಟವಿಲ್ಲ. ಯಾಕೆಂದರೆ ಸನ್ನಿಧಿ ಮದುವೆಯಾಗಿ ಕೈಬಿಟ್ಟಿದ್ದಾಳೆ ಎಂಬ ಕಾರಣಕ್ಕಾಗಿ ಆತ ಈ ರೀತಿ ಆರೋಪ ಮಾಡಿದ್ದಾನೆಯೇ ಎನ್ನುವ ಬಗ್ಗೆ ಸ್ಪಷ್ಟತೆ ಇಲ್ಲ. ಅಂತೂ ರೀಲ್ಸ್‌ ಸುಂದರಿಯರು ದಿನಕ್ಕೊಂದು ಬಣ್ಣ ಬದಲಿಸುವ ಕಥೆಗಳು ಹೆಚ್ಚುತ್ತಿರುವುದಂತೂ ನಿಜ.

RELATED ARTICLES

Related Articles

TRENDING ARTICLES