Friday, May 17, 2024

‘ವಿಶ್ವಗುರು ಬಸವಣ್ಣ ಸಾಂಸ್ಕೃತಿಕ ನಾಯಕ” ಎಂದು ಘೋಷಣೆ ಮಾಡಿದ ರಾಜ್ಯ ಸರ್ಕಾರ!

ಬೆಂಗಳೂರು: ಜಗಜ್ಯೋತಿ ಬಸವೇಶ್ವರ ಎಂದು ಪ್ರಖ್ಯಾತರಾಗಿರುವ ಬಸವಣ್ಣನವರನ್ನು ಸರ್ಕಾರವು ಬಸವಣ್ಣನವರನ್ನು ‘ವಿಶ್ವಗುರು ಬಸವಣ್ಣ ಸಾಂಸ್ಕೃತಿಕ ನಾಯಕ” ಎಂದು ಘೋಷಣೆ ಮಾಡಿದೆ.

ರಾಜ್ಯದ ಸರ್ಕಾರಿ ಕಛೇರಿಗಳಲ್ಲಿರುವ ಸರ್ಕಾರವು ಅನುಮೋದಿಸಿರುವ ಬಸವಣ್ಣನವರ ಭಾವಚಿತ್ರಗಳಲ್ಲಿ “ವಿಶ್ವಗುರು ಬಸವಣ್ಣ ಸಾಂಸ್ಕೃತಿಕ ನಾಯಕ” ಎಂದು ಮುದ್ರಿಸಿ ಅಳವಡಿಸಲು ಕ್ರಮ ವಹಿಸುವುದು. ರಾಜ್ಯ, ಜಿಲ್ಲೆ ಹಾಗೂ ತಾಲ್ಲೂಕು ಮಟ್ಟಗಳಲ್ಲಿ ನಡೆಯುವ ಎಲ್ಲ ಕಾರ್ಯಕ್ರಮಗಳಲ್ಲಿ ಬಸವಣ್ಣನವರ ಚಿಂತನೆಗಳು ಹಾಗೂ ಸರ್ಕಾರದ ಉದ್ದೇಶಗಳ ಕುರಿತು ಅರಿವು ಮೂಡಿಸುವ ನಿಟ್ಟಿನಲ್ಲಿ ಸೂಕ್ತ ನಿರ್ದೇಶನಗಳನ್ನು ಹೊರಡಿಸಬೇಕೆಂದು ಸೂಚಿಸಿದೆ.

ಇದನ್ನೂ ಓದಿ: ರಾಜ್ಯ ಬಜೆಟ್ ಅಧಿವೇಶ : ರಾಜ್ಯಪಾಲರ ಭಾಷಣ, ಸರ್ಕಾರದ ಸಾಧನೆಗಳ ಗುಣಗಾನ

12 ಶತಮಾನದ ವಚನ ಚಳುವಳಿ ಹಾಗು ಸಾಮಾಜಿಕ ನ್ಯಾಯದ ನಾಯಕತ್ವ ವಹಿಸಿದ್ದ ಇವರು ಮನುಧರ್ಮಶಾಸ್ತ್ರದ ಶ್ರೇಣೀಕೃತ ಸಮಾಜವನ್ನು ವಿರೋಧಿಸಿ ಎಲ್ಲರೂ ಸಮಾರು ಎಂಬ ಸಮಾನತೆಯನ್ನು ಮುನ್ನಡೆಸಿದ್ದರು.

RELATED ARTICLES

Related Articles

TRENDING ARTICLES