Wednesday, January 22, 2025

ವೃದ್ದನ ಮೇಲೆ ಬೀದಿ ನಾಯಿಗಳು ದಾಳಿ!

ಬೆಂಗಳೂರು: ವೃದ್ದನ ಮೇಲೆ ಬೀದಿ ನಾಯಿಗಳು ಏಕಾಏಕಿ ದಾಳಿ ಮಾಡಿರುವ ಘಟನೆ ಬೆಂಗಳೂರಿನ ಮಹದೇವಪುರ ಬಳಿ ನಡೆದಿರೋ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಇದನ್ನೂ ಓದಿ: ಪೊಲೀಸ್ ಪೇದೆಯನ್ನು ಮನಸೋ ಇಚ್ಚೆ ಥಳಿಸಿದ ಶಾಸಕಿಯ ಪುತ್ರ!

ರಸ್ತೆ ಮೇಲೆ ವೃದ್ಧ ತನ್ನ ಪಾಡಿಗೆ ತಾನು ನಡೆದುಕೊಂಡು ಹೋಗುತ್ತಿದ್ದ. ಈ ವೇಳೆ ಏಕಾಏಕಿ ಎರಡು ನಾಯಿಗಳು ದಾಳಿ ಮಾಡಿವೆ. ಈ ವೇಳೆ ವೃದ್ಧನ ಕಾಲು ಪರಚಿವೆ. ಮತ್ತೋರ್ವ ವ್ಯಕ್ತಿ ಬಂದು ಓಡಿಸೋವರೆಗೂ ವೃದ್ಧನ ಮೇಲೆ ನಾಯಿ ದಾಳಿ ಮಾಡಿದೆ.

ಈ ಬಗ್ಗೆ ಪೊಲೀಸರಿಗೆ ಸ್ಥಳೀಯರು ಸೋಷಿಯಲ್ ಮೀಡಿಯಾದಲ್ಲಿ ಟ್ಯಾಗ್ ಮಾಡಿ ಮನವಿ ಮಾಡಿದ್ದಾರೆ. ನಗರದಲ್ಲಿ ಬೀದಿ ನಾಯಿಗಳ ಕಾಟ ಜಾಸ್ತಿಯಾಗಿದೆ. ವೃದ್ಧರು ಭಯದಲ್ಲೇ ನಡೆದಾಡುವಂತಾಗಿದೆ
ಹೀಗಾಗಿ ಬೀದಿ ನಾಯಿಗಳ ಬಗ್ಗೆ ಕ್ರಮಕೈಗೊಳ್ಳಿ ಅಂತಾ ಮನವಿ ಮಾಡಿದ್ದಾರೆ.

RELATED ARTICLES

Related Articles

TRENDING ARTICLES