ಹಾಸನ : ಜೆಡಿಎಸ್ ನ ಸರ್ವನಾಶ ಮಾಡಲು ಯಾರಿಂದಲೂ ಸಾಧ್ಯವಿಲ್ಲ, ರಾಜ್ಯದ ಅಭಿವೃದ್ದಿಗಾಗಿಯೇ ಜೆಡಿಎಸ್ ದೆಹಲಿ ಮಟ್ಟದ ಬಿಜೆಪಿ ನಾಯಕರೊಂದಿಗೆ ಹೊಂದಾಣಿಗೆ ಪ್ರಕ್ರಿಯೆ ನಡೆದಿದ್ದು ರಾಜ್ಯದ ಪರ ಧ್ವನಿ ಎತ್ತುವ ಸಲುವಾಗಿ ಹೊಸ ಅಧ್ಯಾಯ ಆರಂಬವಾಗಿದೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ತಿಳಿಸಿದರು.
ಹಾಸನದಲ್ಲಿ ಮಾದ್ಯಮದವರೊಂದಿಗೆ ಮಾತನಾಡಿದ ಅವರು, ಇಂದು ವಿಧಾನಸಭಾ ಕಲಾಪ ರಾಜ್ಯಪಾಲರ ಭಾಷಣದ ಬಳಿಕ ಆರಂಭವಾಗಲಿದೆ, ಕೇಂದ್ರದಿಂದ ರಾಜ್ಯಕ್ಕೆ ತೆರಿಗೆ ವಿಷಯದಲ್ಲಿ ಅನ್ಯಾಯವಾಗುತ್ತಿದೆ ಎನ್ನುವ ರಾಜ್ಯ ಮತ್ತು ಕೇಂದ್ರಸರ್ಕಾರಗಳ ನಡುವೆ ನಡೆಯುತ್ತಿದ ಈ ಬಾರಿ ಅಭಿವೃದ್ದಿಗಳ ವಿಚಾರವಾಗಿ ವಾಸ್ತಾವಾಂಶಗಳನ್ನು ಅಂಕಿ ಅಂಶಗಳ ಸಮೇತ ಚರ್ಚೆ ಮಾಡಬೇಕು ಎಂದು ತೀರ್ಮಾನಿಸಿದ್ದೇನೆ,
ಇದನ್ನೂ ಓದಿ: ಪೊಲೀಸ್ ಪೇದೆಯನ್ನು ಮನಸೋ ಇಚ್ಚೆ ಥಳಿಸಿದ ಶಾಸಕಿಯ ಪುತ್ರ!
ಸೀಟ್ ಹಂಚಿಕೆಯಲ್ಲಿ ಯಾವುದೇ ಗೊಂದಲವಿಲ್ಲ, ನಮಗೆ ಬೇಕಾಗಿರುವುದು ಭ್ರಷ್ಟ ಕಾಂಗ್ರೆಸ್ನ ರಾಜ್ಯದಿಂದ ತೆಗೆಯಬೇಕು, 28 ಕ್ಕೆ 28 ಸ್ಥಾನ ತರಬೇಕು, ದೇವಗೌಡ ನೇತೃತ್ವದಲ್ಲಿ ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಂಡಿರುವುದು ಕಳೆದ 75 ವರ್ಷಗಳಲ್ಲಿ ರಾಜ್ಯಕ್ಕಾಗಿರುವ ಅನ್ಯಾಯದ ಧ್ವನಿಯಾವುದೇ ನಮ್ಮ ಪಕ್ಷದ ಒಂದು ಬದ್ದತೆ. ಆದ್ದರಿಂದ ಈ ಬಾರಿ ಸೀಟು ಹಂಚಿಕೆ ವಿಚಾರ ಮುಖ್ಯವಲ್ಲಿ 28ಕ್ಕೆ 28 ಸ್ಥಾನ ಎನ್ ಡಿಎ ಗೆಲ್ಲಬೇಕು ಎಂದು ಅವರು ಹೇಳಿದರು.
2019ರಲ್ಲಿ ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡಿದಾಗಲು ನಿಖಿಲ್ ಕುಮಾರಸ್ವಾಮಿಯವರ ರಾಜಕೀಯ ಬೆಳವಣಿಗೆಯನ್ನು ವ್ಯವಸ್ಥಿತವಾಗಿ ನಾಶಮಾಡಲೇಕು ಅಂತ ಹೇಳಿ, ಏನು ತಪ್ಪು ಮಾಡದೇ ಇರುವಂತ ಯುವಕ, ನಾವು ಯಾರಿಗೇ ಆಗಲೀ ವೈಯಕ್ತಿವಾಗಿ ತೊಂದರೇ ಕೊಟ್ಟು ಸೀಟ್ ಬಡೆಯುವಂತದ್ದಿಲ್ಲ, ರಾಜಕಾರಣವು ನಿಂತ ನೀರಲ್ಲ, ನಮ್ಮ ಉದ್ದೇಶ ರಾಜ್ಯದಲ್ಲಿ 28ಕ್ಕೆ 28 ಸೀಟ್ ಗಳನ್ನು ಗೆಲ್ಲುವುದು ಮಾತ್ರ.
ಹಾಸನದಲ್ಲಿಯೂ ಕೂಡ ಈ ಹೊಂದಾಣಿಕೆಯಲ್ಲಿ ಈ ಬಾರಿ ಜೆಡಿಎಸ್ ಗೆಲ್ಲಬೇಕು, ತಪ್ಪು ಮಾಡುವುದು ಸಹಜ ಆ ತಪ್ಪು ಅವಕಾಶ ಕೊಡಬೇಕು ಎಂದು ಹಾಸನದ ಜನತೆಯಲ್ಲಿ ಮನವಿ ಮಾಡಿಕೊಂಡರು.