Monday, December 23, 2024

ದಿನ ಭವಿಷ್ಯ :ಇಂದು ರವಿಯೋಗ, ಈ ರಾಶಿಗೆ ಮಹಾಶಿವನ ಆಶೀರ್ವಾದ ದೊರೆಯಲಿದೆ!

2024 ಫೆಬ್ರವರಿ 12ರ ಸೋಮವಾರವಾದ ಇಂದು, ಚಂದ್ರನು ಕುಂಭ ರಾಶಿಯ ನಂತರ ಮೀನ ರಾಶಿಗೆ ಚಲಿಸಲಿದ್ದಾನೆ. ಈ ದಿನ ರವಿಯೋಗ, ಸಿದ್ಧಯೋಗ, ಪೂರ್ವಾಭಾದ್ರಪದ ನಕ್ಷತ್ರಗಳ ಶುಭ ಸಂಯೋಗವೂ ನಡೆಯುತ್ತಿದೆ. ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು ಎನ್ನುವುದನ್ನು ತಿಳಿದುಕೊಳ್ಳಿ.

ಮೇಷ: ಉತ್ಸಾಹದ ದಿನವಿದು. ಪ್ರಭಾವಿತ ವ್ಯಕ್ತಿಗಳ ಬೆಂಬಲ ಸಿಗಲಿದೆ. ಜೀವನದಲ್ಲಿ ಹೊಸ ತಿರುವು ಪಡೆದುಕೊಳ್ಳುವ ಸಾಧ್ಯತೆಯಿದೆ. ದಿನದ ಮಟ್ಟಿಗೆ ಹಣಕಾಸಿನ ಹೂಡಿಕೆ ವ್ಯವಹಾರದಲ್ಲಿ ತೊಡುಗುವುದು ಬೇಡ. ಕೌಟುಂಬಿಕ ಶುಭ ಫಲ.

ವೃಷಭ: ನಿಮ್ಮ ಆಕರ್ಷಕ ವರ್ತನೆ ಗಮನ ಸೆಳೆಯುತ್ತದೆ. ಆರ್ಥಿಕವಾಗಿ ಇಂದು ನೀವು ಸಾಕಷ್ಟು ಬಲವಾಗಿ ಕಾಣುವಿರಿ. ಸಂಗಾತಿಯೊಂದಿಗೆ ಮಾತಿಗೆ ಇಳಿಯುವುದು ಬೇಡ. ಕೌಟುಂಬಿಕವಾಗಿ ಮಿಶ್ರ ಫಲ.

ಮಿಥುನ: ಜನರ ಸಹಕಾರ ಸಿಗಲಿದೆ. ನಿಮ್ಮ ಕೋಪದಿಂದ ಇತರರ ಮೇಲೆ ಒತ್ತಡ ಹೇರಬೇಡಿ. ಹಣಕಾಸು ವ್ಯವಹಾರದಲ್ಲಿ ಪ್ರಗತಿ ಇರಲಿದೆ. ಕೌಟುಂಬಿಕವಾಗಿ ಶುಭ ಫಲ.

ಕಟಕ: ಪ್ರಭಾವಿ ವ್ಯಕ್ತಿಗಳ ಬೆಂಬಲ ಸಿಗಲಿದೆ. ಆರೋಗ್ಯದ ಬಗೆಗೆ ಕಾಳಜಿ ಇರಲಿ. ಹೊಸ ಯೋಜನೆ, ಯೋಚನೆಗಳು ಫಲ ನೀಡಲಿವೆ. ಹಣಕಾಸು ವ್ಯವಹಾರದಲ್ಲಿ ಸಾಧಾರಣ ಇರಲಿದೆ. ಕೌಟುಂಬಿಕವಾಗಿ ಶುಭ ಫಲ.

ಇದನ್ನೂ ಓದಿ: ಅಪ್ಪ-ಮಗನ ಜೊತೆ ರಾಜಿ ಪ್ರಶ್ನೆಯೇ ಇಲ್ಲ, ವಿಜಯೇಂದ್ರನಿಂದ ನನಗೇನೂ ಆಗಬೇಕಾಗಿಲ್ಲ : ಯತ್ನಾಳ್ ಗುಡುಗು

ಸಿಂಹ: ದಿನದ ಮಟ್ಟಿಗೆ ಆರೋಗ್ಯದಲ್ಲಿ ವ್ಯತ್ಯಾಸ ಆಗುವ ಸಾಧ್ಯತೆ ಇದೆ. ಕಾಳಜಿ ವಹಿಸಿ. ಕುಟುಂಬದ ಬೆಂಬಲ ಸಿಗಲಿದೆ. ಆತುರದ ತೀರ್ಮಾನ ಕೈಗೊಳ್ಳುವುದು ಬೇಡ. ಕೌಟುಂಬಿಕವಾಗಿ ಶುಭ ಫಲ.

ಕನ್ಯಾ: ನಕಾರಾತ್ಮಕ ಆಲೋಚನೆಗಳು ಮಾನಸಿಕ ನೆಮ್ಮದಿ ಹಾಳು ಮಾಡಿಕೊಳ್ಳುವುದು ಬೇಡ. ಪ್ರಯಾಣ ಮಾಡುವ ಸಾಧ್ಯತೆ ಇದೆ. ಆರ್ಥಿಕವಾಗಿ ಪ್ರಗತಿ ಇರಲಿದೆ. ಕೌಟುಂಬಿಕವಾಗಿ ಶುಭ ಫಲ.

ತುಲಾ: ಅತಿಯಾದ ಒತ್ತಡದ ಕಾರ್ಯ ಆಯಾಸವನ್ನುಂಟು ಮಾಡಲಿದೆ. ಆಲಸ್ಯದಿಂದ ಕೆಲಸ ಕಾರ್ಯಗಳನ್ನು ಮುಂದೂಡುವುದು ಬೇಡ. ಅತಿಥಿಗಳ ಆಗಮನ ಸಂತಸ ತಂದೀತು. ಕೌಟುಂಬಿಕವಾಗಿ ಶುಭ ಫಲ.

ವೃಶ್ಚಿಕ: ಆತ್ಮವಿಶ್ವಾಸದಿಂದ ಕಾರ್ಯದಲ್ಲಿ ಯಶಸ್ಸು ಸಿಗುವುದು. ಅನುಮಾನವು ಸಂಬಂಧಗಳನ್ನು ಹಾಳು ಮಾಡುವುದು. ಕುಟುಂಬದಲ್ಲಿ ಮಾತಿಗೆ ಮಾತು ಬೆಳೆಸುವುದು ಬೇಡ. ತಾಳ್ಮೆಯಿಂದ ವರ್ತಿಸಿ. ಕೌಟುಂಬಿಕವಾಗಿ ಮಿಶ್ರ ಫಲ.

ಧನಸ್ಸು: ಕೆಲವು ಅನಿವಾರ್ಯ ಸಂದರ್ಭಗಳು ನಿಮಗೆ ಅಹಿತಕರವೆನಿಸಬಹುದು. ಆತುರದಲ್ಲಿ ಅತಿರೇಕದ ಮಾತುಗಳು ಬೇಡ. ಹೂಡಿಕೆಯಲ್ಲಿ ತೊಡಗಿಸಿದ ಹಣ ಇಮ್ಮಡಿ ಲಾಭ ತರುವುದು. ಕೌಟುಂಬಿಕವಾಗಿ ಶುಭ ಫಲ.

ಮಕರ: ಜೀವನದಲ್ಲಿ ಭರವಸೆ ಸಿಗಲಿದೆ. ಅನಿರೀಕ್ಷಿತವಾಗಿ ಹಣ ಖರ್ಚು ಮಾಡುವಿರಿ. ಸಂಬಂಧಿಗಳಿಂದ ಕುಟುಂಬಕ್ಕೆ ಶುಭ ಸಿಗುವ ಸಾಧ್ಯತೆ ಇದೆ. ಉದ್ಯೋಗದಲ್ಲಿ ಯಶಸ್ಸು ಸಿಗಲಿದೆ. ದಿನದ ಕೊನೆಯ ಗಳಿಗೆಯಲ್ಲಿ ಸ್ವಲ್ಪ ಒತ್ತಡ ಉಂಟಾಗುವ ಸಾಧ್ಯತೆ ಇದೆ. ಕೌಟುಂಬಿಕವಾಗಿ ಮಿಶ್ರ ಫಲ.

ಕುಂಭ: ಅನೇಕ ವಿಷಯಗಳು ನಿಮಗೆ ಸಂತಸ ತರುವುದು. ದೀರ್ಘಕಾಲದ ಕೆಲಸ ಇಂದು ಪೂರ್ಣಗೊಳ್ಳುವ ಸಾಧ್ಯತೆ ಇದೆ. ಆರ್ಥಿಕ ವ್ಯವಹಾರದಲ್ಲಿ ಪ್ರಗತಿ ಇರಲಿದೆ. ಟೀಕಿಸುವವರ ಮಾತುಗಳಿಗೆ ಕಿವಿ ಕೊಡದೆ ಕಾರ್ಯದಲ್ಲಿ ಮುನ್ನುಗ್ಗಿ. ಕೌಟುಂಬಿಕವಾಗಿ ಮಿಶ್ರ ಫಲ.

ಮೀನ: ಅನುಮಾನದಿಂದ ಕಾರ್ಯದಲ್ಲಿ ತೊಡಗುವುದು ಬೇಡ. ಹೊಸ ಅವಕಾಶಗಳು ಒದಗಿ ಬಂದಾವು. ಮಕ್ಕಳ ಆರೋಗ್ಯದ ಕಡೆಗೆ ಗಮನ ಇರಲಿ. ಕುಟುಂಬದಲ್ಲಿ ವ್ಯತಿರಿಕ್ತವಾದ ವಾತಾವರಣ ಸೃಷ್ಟಿಯಾಗುವ ಮುಂಚೆ ಎಚ್ಚರಿಕೆ ವಹಿಸಿ.ಕೌಟುಂಬಿಕವಾಗಿ ಮಿಶ್ರ ಫಲ.

RELATED ARTICLES

Related Articles

TRENDING ARTICLES