Thursday, December 19, 2024

ಡಿ ಬಾಸ್ ಬರ್ತ್ ಡೇಗೆ ‘ಡೆವಿಲ್’ ದರ್ಶನ.. ಫ್ಯಾನ್ಸ್​ಗೆ ಗಿಫ್ಟ್, D58ಗೆ ಸಕಲ ಸಿದ್ಧತೆ..!

ಬೆಂಗಳೂರು : ಡಿ ಬಾಸ್ ದರ್ಶನ್ ಇತ್ತೀಚೆಗೆ ಪ್ರತೀ ದಿನ ಒಂದಿಲ್ಲೊಂದು ವಿಷಯಕ್ಕಾಗಿ ಸುದ್ದಿಯಲ್ಲಿದ್ದಾರೆ. ಬರ್ತ್ ಡೇ ಸೆಲೆಬ್ರೇಷನ್​ಗೆ ಕೇವಲ 4 ದಿನ ಬಾಕಿಯಿದ್ದು, ನೆಚ್ಚಿನ ಸೆಲೆಬ್ರಿಟೀಸ್​ಗೆ ದಚ್ಚು ಸರ್​​ಪ್ರೈಸ್ ಗಿಫ್ಟ್ ಕೊಡ್ತಿದ್ದಾರೆ.

ಸ್ಯಾಂಡಲ್​ವುಡ್​ನ ಯಜಮಾನ, ಸೆಲೆಬ್ರಿಟೀಸ್ ಪಾಲಿನ ಡಿ ಬಾಸ್, ತನ್ನ ಗತ್ತು ಗಮ್ಮತ್ತಿಗೆ ತಕ್ಕನಾದ ಚಾಲೆಂಜಿಂಗ್ ಪಾತ್ರಗಳನ್ನ ಮಾಡೋ ಚಾಲೆಂಜಿಂಗ್ ಸ್ಟಾರ್ ಬರ್ತ್ ಡೇ ಸೆಲೆಬ್ರೇಷನ್​ಗೆ ಇನ್ನು ನಾಲ್ಕು ದಿನಗಳಷ್ಟೇ ಬಾಕಿಯಿದೆ. ಇದೇ ಫೆಬ್ರವರಿ 16ರಂದು 46 ತುಂಬಿ 47ನೇ ವಸಂತಕ್ಕೆ ಕಾಲಿಡ್ತಿರೋ ದರ್ಶನ್​ಗೆ ಅಭಿಮಾನಿ ಬಳಗ ಹಬ್ಬದ ರೀತಿ ಹುಟ್ಟುಹಬ್ಬವನ್ನು ಸೆಲೆಬ್ರೇಟ್ ಮಾಡಲು ಸಜ್ಜಾಗಿದೆ.

‘ಕಾಟೇರ’ ಸಿನಿಮಾದ ಸಕ್ಸಸ್​ ಗುಂಗಲ್ಲಿರೋ ಡಿಬಾಸ್​ಗೆ ಫ್ಯಾಮಿಲಿ ಜಂಜಾಟಗಳಿಂದಲೂ ಮುಕ್ತಿ ಸಿಕ್ಕಂತಿದೆ. ಸದಾ ಚಿತ್ರರಂಗದ ಒಳಿತಿಗಾಗಿ ಶ್ರಮಿಸೋ ದರ್ಶನ್, ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನ ಮಾಡ್ತಾನೇ ಇದಾರೆ. ತಮ್ಮ 25 ವರ್ಷಗಳ ಸಿನಿಯಾನದಲ್ಲಿ 56 ಸಿನಿಮಾಗಳನ್ನ ಮಾಡಿ ಮುಗಿಸಿರೋ ದಚ್ಚು, ಇದೀಗ ತಮ್ಮ 57ನೇ ಸಿನಿಮಾ ‘ಡೆವಿಲ್​’ನಲ್ಲಿ ಬ್ಯುಸಿಯಾಗಿದ್ದಾರೆ.

ಫೆ.15ರ ರಾತ್ರಿ 11.59ಕ್ಕೆ ಡೆವಿಲ್ ಫಸ್ಟ್​ಲುಕ್

ರೀಸೆಂಟ್ ಆಗಿ ಸೆಟ್ಟೇರಿದ್ದ ಡೆವಿಲ್ ಸಿನಿಮಾ ಶೂಟಿಂಗ್ ಶುರುವಿಟ್ಟಿದ್ದು, ಮಿಲನಾ ಸಿನಿಮಾ ಖ್ಯಾತಿಯ ಪ್ರಕಾಶ್ ವೀರ್ ಌಕ್ಷನ್ ಕಟ್​​ನಲ್ಲಿ ತಯಾರಾಗ್ತಿದೆ. ಈಗಾಗಲೇ ಚಿತ್ರದ ಟೈಟಲ್ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡಿದ್ದು, ಇದೇ ಫೆಬ್ರವರಿ 15ರ ರಾತ್ರಿ 11.59ಕ್ಕೆ ಡೆವಿಲ್ ಚಿತ್ರದ ಫಸ್ಟ್​ಲುಕ್ ಟೀಸರ್ ಲಾಂಚ್ ಆಗಲಿದೆ. ಬರ್ತ್ ಡೇ ದಿನ ನೆಚ್ಚಿನ ನಾಯಕನಟನನ್ನ ಕಣ್ತುಂಬಿಕೊಂಡು, ಶುಭಾಶಯ ಕೋರೋಕೆ ಕಾತರರಾಗಿರೋ ಫ್ಯಾನ್ಸ್​ಗೆ ಡೆವಿಲ್ ಟೀಸರ್ ಬೆಸ್ಟ್ ಗಿಫ್ಟ್ ಆಗಲಿದೆ.

ಮತ್ತೊಮ್ಮೆ ದರ್ಶನ್-ಪ್ರಕಾಶ್ ಕಾಂಬೋ

ಅಂದಹಾಗೆ ಡೆವಿಲ್ ಸಿನಿಮಾ ದರ್ಶನ್-ಪ್ರಕಾಶ್ ವೀರ್ ಕಾಂಬೋನಲ್ಲಿ ಬರ್ತಿರೋ ಚೊಚ್ಚಲ ಸಿನಿಮಾ ಏನಲ್ಲ. ಆರೇಳು ವರ್ಷಗಳ ಹಿಂದೆ ತಾರಕ್ ಅನ್ನೋ ಫ್ಯಾಮಿಲಿ ಎಂಟರ್​ಟೈನರ್​ನ ನೀಡಿತ್ತು ಈ ಜೋಡಿ. ಮಾಸ್ ಜೊತೆ ಫ್ಯಾಮಿಲಿ ಎಮೋಷನ್ಸ್ ಮೇಲೆ ಹಿಡಿತ ಹೊಂದಿರೋ ಪ್ರಕಾಶ್ ವೀರ್​ ಈ ಬಾರಿ ಡೆವಿಲ್ ದಿ ಹೀರೋ ಸಿನಿಮಾನ ಡಿ ಬಾಸ್​​ ಜೊತೆ ನೆಕ್ಸ್ಟ್ ಲೆವೆಲ್ ಮೇಕಿಂಗ್​ನೊಂದಿಗೆ ಮಾಡ್ತಿರೋದು ಇಂಟರೆಸ್ಟಿಂಗ್.

ಡೆವಿಲ್ ಸಿನಿಮಾ ಬಳಿಕ D58 ಶುರು

ಡೆವಿಲ್ ಸಿನಿಮಾ ಮುಗೀತಾ ಇದ್ದಂತೆ D58 ಶುರುವಾಗಲಿದೆ. ಅದನ್ನ ಕೆವಿನ್ ಪ್ರೊಡಕ್ಷನ್ಸ್ ಬ್ಯಾನರ್​ನಡಿ ಜೋಗಿ ಪ್ರೇಮ್ ಡೈರೆಕ್ಟ್ ಮಾಡಲಿದ್ದು, ಇಡೀ ಚಿತ್ರರಂಗ ಕಾತರವಾಗಿದೆ. ಇನ್ನು ರೀಸೆಂಟ್ ಆಗಿ ಝೀ5 ಓಟಿಟಿಗೆ ಲಗ್ಗೆ ಇಟ್ಟಿರೋ ‘ಕಾಟೇರ’, ಥಿಯೇಟರ್​​ನಂತೆ ಓಟಿಟಿಯಲ್ಲೂ ಧೂಳೆಬ್ಬಿಸ್ತಿದೆ. ಎಲ್ಲೆಡೆ ಡಿ ಬಾಸ್ ಫ್ಯಾನ್ಸ್ ಕಟೌಟ್ಸ್ ಹಾಕಿಸಿ, ಹಾಲಿನ ಅಭಿಷೇಕ ಮಾಡಿ, ಓಟಿಟಿಗೆ ವೆಲ್ಕಮ್ ಹೇಳಿದ್ದಾರೆ.

  • ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES