ಬೆಂಗಳೂರು : ಹೆಲ್ಮೆಟ್ ಧರಿಸದ ಬೈಕ್ ಚಾಲಕನ ಫೋಟೋ ತೆಗೆದಿದಕ್ಕೆ ಕುಪಿತನಾದ ಸವಾರ ಟ್ರಾಫಿಕ್ ಪೊಲೀಸ್ ಕೈ ಕಚ್ಚಿದ್ದಾನೆ.
ಬೆಂಗಳೂರಿನ ವಿಲ್ಸನ್ ಗಾರ್ಡನ್ ಸಂಚಾರ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಫೋಟೋ ಅಪ್ಲೋಡ್ ಮಾಡಿದರೆ ಫೋನ್ ಒಡೆದು ಹಾಕುವುದಾಗಿ ಪೊಲೀಸರಿಗೆ ಅವಾಜ್ ಹಾಕಿದ್ದಾನೆ. ಅಲ್ಲದೆ, ಟ್ರಾಫಿಕ್ ಪೇದೆಯನ್ನು ಎಳೆದಾಡಿ ಕೈ ಕಚ್ಚಿದ್ದಾನೆ.
ವಿಲ್ಸನ್ ಗಾರ್ಡನ್ ಸಂಚಾರ ಠಾಣಾ ವ್ಯಾಪ್ತಿಯಲ್ಲಿ ಮಧ್ಯಾಹ್ನ 12 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಎಫ್‌ಟಿವಿಆರ್ (ಟ್ರಾಫಿಕ್ ಕಾನ್ಸ್ಟೇಬಲ್ ಬಳಸುವ ಮೊಬೈಲ್ ಫೋನ್) ಬಳಸಿ ಹೆಲ್ಮೆಟ್ ಉಲ್ಲಂಘನೆಗಾಗಿ ಫೋಟೋ ತೆಗೆದಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಬೈಕ್ ಸವಾರನ ಬಂಧನ, ಪ್ರಕರಣ ದಾಖಲು
ಈ ವೇಳೆ ಸಂಚಾರ ಉಲ್ಲಂಘನೆ ಮಾಡಿದ ವ್ಯಕ್ತಿ ಮೊಬೈಲ್ ಫೋನ್ ಕಸಿದುಕೊಂಡಿದ್ದಾನೆ. ಆಗ ಬೈಕ್ಸವಾರನನ್ನು ನಿಲ್ಲಿಸಿದಾಗ ಟ್ರಾಫಿಕ್ ಕಾನ್ಸ್ಟೇಬಲ್ ಗಳೊಬ್ಬರ ಮೇಲೆ ಹಲ್ಲೆ ನಡೆಸಿ ಕೈ ಕಚ್ಚಿದ್ದಾನೆ. ಸದ್ಯ ಈ ವ್ಯಕ್ತಿಯ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿಲ್ಸನ್ ಗಾರ್ಡನ್ ಸಂಚಾರ ಠಾಣಾ ವ್ಯಾಪ್ತಿಯಲ್ಲಿ ಇಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು. ಎಫ್‌ಟಿವಿಆರ್ (ಟ್ರಾಫಿಕ್ ಕಾನ್ಸ್ಟೆಬಲ್ ಬಳಸುವ ಮೊಬೈಲ್ ಫೋನ್) ಬಳಸಿ ಹೆಲ್ಮೆಟ್ ಉಲ್ಲಂಘನೆಗಾಗಿ, ಸಂಪರ್ಕ ರಹಿತ ಉಲ್ಲಂಘನೆ ಜಾರಿ ಮಾಡುತ್ತಿರುವಾಗ.ಸಂಚಾರ ಉಲ್ಲಂಘನೆ ಮಾಡಿದ ವ್ಯಕ್ತಿ ಮೊಬೈಲ್ ಫೋನ್ ಕಸಿದುಕೊಂಡಿದ್ದುಆತನನ್ನು…
— ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice (@blrcitytraffic) February 12, 2024