Friday, November 22, 2024

ಈಶ್ವರಪ್ಪ ಗುಂಡಿಕ್ಕಿ ಹೇಳಿಕೆಯನ್ನ ಸಮರ್ಥಿಸಿಕೊಂಡ ಪ್ರಮೋದ್ ಮುತಾಲಿಕ್!

ಕಲಬುರಗಿ: ಸಂಸದ ಡಿಕೆ ಸುರೇಶ್​ ಅವರ ದೇಶ ವಿಭಜನೆ ಹೇಳಿಕೆಯನ್ನು ನಾನು ಖಂಡಿಸುತ್ತೇನೆ, ಈ ಕುರಿತು ಬಿಜೆಪಿ ಮುಖಂಡ ಕೆ.ಎಸ್ ಈಶ್ವರಪ್ಪ ಹೇಳಿಕೆಯನ್ನು ಬೆಂಬಲಿಸುತ್ತೇನೆ ಎಂದು ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.

ಕಲಬುರಗಿಯಲ್ಲಿ ಮಾದ್ಯಮವನ್ನುದ್ದೇಶಿಸಿ ಮಾತನಾಡಿದ ಅವರು, ದೇಶ ಸ್ವಾತಂತ್ರ ಸಿಗಬೇಕಾದರೇ 200 ವರ್ಷಗಳ ಪರಿಶ್ರಮವಿದೆ, ತ್ಯಾಗ ಬಲಿದಾನವಿದೆ, ದಕ್ಷಿಣ ಭಾರತವನ್ನು ತುಂಡು ಮಾಡಿ ರಾಷ್ಟ್ರ ಮಾಡ್ತೀವಿ ಎನ್ನುವ ಹೇಳಿಕೆಯನ್ನು ನೀಡುತ್ತಿದ್ದೀರಿ, ಈ ರೀತಿಯ ದೇಶದ್ರೋಹ ಹೇಳಿಕೆ ನೀಡಲು ನಿಮಗ್ಯಾರು ಹಕ್ಕು ಕೊಟ್ಟಿದ್ದಾರೆ ಎಂದು ಪ್ರಶ್ನಿಸಿದರು.

ಇದನ್ನೂ ಓದಿ: ಸಂಚಾರಿ ನಿಯಮ ಉಲ್ಲಂಘನೆ :30 ಸಾವಿರದ ಸ್ಕೂಟರ್​ಗೆ ₹3 ಲಕ್ಷ ಟ್ರಾಫಿಕ್​​​ ದಂಡ!

ಹೀಗೆ ಭಾಷೆ, ರಾಜಕೀಯ, ಆರ್ಥಿಕತೆ ಹೆಸರಿನಲ್ಲಿ, ಜಾತಿ ಹೆಸರಿನಲ್ಲಿ ದೇಶವನ್ನು ತುಂಡು ಮಾಡುವುದಾದರೇ ಅನೇಕ ದೇಶಭಕ್ತರು ಸ್ವಾತಂತ್ರ್ಯ ಹೋರಾಟವನ್ನು ಮಾಡಿದ್ದಾದರು ಯಾಕೆ?  ಸ್ವಾತಂತ್ರ್ಯಕ್ಕಾಗಿ ಕಾಂಗ್ರೆಸ್ ಪಕ್ಷವು ಕೂಡ ಹೋರಾಟ ಮಾಡಿತ್ತು! ಹಾಗಾದರೇ ಯಾತಕ್ಕಾಗಿ ಹೋರಾಟ ಮಾಡಿದ್ರಿ? ಈಗಾಗಲೇ ದೇಶವಿಭಜನೆ ಮಾಡಿ ಕೊಡಬಾರದಾಗಿದ್ದಂತ ಪಾಕಿಸ್ತಾನವನ್ನು ಕೊಟ್ಟಿದ್ದೀರಿ, ಮತ್ತೆ ದಕ್ಷಿಣ ಭಾರತ ರಾಷ್ಟ್ರ ಮಾಡುತ್ತೇವೆ ಎಂದರೇ ಏನ್ ಹೇಳಿಕೆ ನಿಮ್ಮದು? ಈ ಹಿನ್ನೆಲೆಯಲ್ಲಿ ದೇಶಭಕ್ತ ಕೆ,ಎಸ್​ ಈಶ್ವರಪ್ಪ ಅವರು ನೋವು ತಡೆದುಕೊಳ್ಳಲಾಗದೆ ದೇಶ ವಿಭಜನೆ ಹೇಳಿಕೆ ನೀಡುವವರ ವಿರುದ್ದ ಗುಂಡಿಕ್ಕಿ ಕೊಲ್ಲುವ ಕಾನೂನು ತರಬೇಕು ಎನ್ನುವ ಹೇಳಿಕೆಯನ್ನು ನೀಡಿದ್ದಾರೆ. ಈ ವಿಚಾರದಲ್ಲಿ ಈಶ್ವರಪ್ಪನವರ ಹೇಳಿಕೆಯನ್ನು ನಾವು ಬೆಂಬಲಿಸುತ್ತಿದ್ದೇವೆ ಎಂದು ಅವರು ಹೇಳಿದರು.

ರಾಜಕಾರಣಿಗಳಿಗೆ ಇರುವುದು ಒಂದೇ ಅಸ್ತ್ರ ಪೊಲೀಸ್ ಸ್ಟೇಷನ್:

ಈಶ್ವರಪ್ಪ ಅವರ ವಿರುದ್ದ ಎಫ್​ಐಆರ್​ ಹಾಕಿರುವ ಕುರಿತು ಪ್ರತಿಕ್ರಿಯೆ ನೀಡಿದ ಅವರು, ರಾಜಕಾರಣಿಗಳಿಗೆ ಇರುವ ಒಂದೇ ಅಸ್ತ್ರ ಅದು ಪೊಲೀಸ್ ಸ್ಟೇಷನ್​, ಹೆದರಿಸೋದು, ಬೆದರಿಸೋದು ಗೂಂಡಾ ಆ್ಯಕ್ಟ್ ಹಾಕೋದು ಇದೇ ಇವರ ಕೆಲಸ, ಇವರಿಗೆ ನೈತಿಕವಾಗಿ, ಬೌದ್ದಿಕವಾಗಿ ಚರ್ಚೆ ಮಾಡುವ ತಾಕತ್​ ಇಲ್ಲ, ಬದಲಿಗೆ ಪೊಲೀಸರು ಮೂಲಕ ಹತ್ತಿಕ್ಕುವ ಕೆಲಸವನ್ನು ಮಾಡುತ್ತಾರೆ ಇಂತವನ್ನೆಲ್ಲಾ ಈಶ್ವರಪ್ಪನವರು ಎದುರಿಸಿದ್ದಾರೆ, ಕಾನೂನಾತ್ಮಕವಾಗಿ ಎದುರಿಸುತ್ತಾರೆ ಎಂದು ಅವರು ಹೇಳಿದರು.

RELATED ARTICLES

Related Articles

TRENDING ARTICLES