Friday, September 20, 2024

ವಿಶ್ವಕಪ್ ಫೈನಲ್ : ಭಾರತಕ್ಕೆ 254 ರನ್​ಗಳ ಗುರಿ ನೀಡಿದ ಆಸ್ಟ್ರೇಲಿಯಾ

ಬೆಂಗಳೂರು : ಐಸಿಸಿ ಅಂಡರ್-19 ವಿಶ್ವಕಪ್​ನ ಫೈನಲ್​ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಭಾರತಕ್ಕೆ 245 ರನ್​ಗಳ ಟಾರ್ಗೆಟ್ ನೀಡಿದೆ.

ದಕ್ಷಿಣ ಆಫ್ರಿಕಾದ ಬೆನೋನಿಯ ವಿಲ್ಲಮೂರ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ  ಆಸ್ಟ್ರೇಲಿಯಾ ಮೊದಲು ಬ್ಯಾಟಿಂಗ್ ನಡೆಸಿತು.

ನಿಗದಿತ 50 ಓವರ್​ಗಳಲ್ಲಿ ಆಸ್ಟ್ರೇಲಿಯಾ 7 ವಿಕೆಟ್ ಕಳೆದುಕೊಂಡು 253 ರನ್​ಗಳ ಸವಾಲಿನ ಮೊತ್ತ ದಾಖಲಿಸಿತು. ಆಸಿಸ್ ಪರ ಹರ್ಜಾಸಿಂಗ್ 55, ಹಗ್​ ವೈಬ್ಜೆನ್ 48, ಹ್ಯಾರಿ ದಿಕ್ಸೋನ್​ 42, ಆಲಿವರ್ ಪೀಕ್ ಅಜೇಯ 46 ರನ್​ ಗಳಿಸಿದರು.

ಭಾರತದ ಬೌಲಿಂಗ್ ದಾಳಿಗೆ ಆಸಿಸ್​ನ ಉಳಿದ ಬ್ಯಾಟರ್​ಗಳು ಉತ್ತಮ ಪ್ರದರ್ಶನ್ ನೀಡುವಲ್ಲಿ ವಿಫಲರಾದರು. ಭಾರತದ ಪರ ರಾಜ್ ಲಿಂಬಾನಿ 3, ನಮನ್ ತಿವಾರಿ 2, ಸೌಮಿ ಪಾಂಡೆ ಹಾಗೂ ಮುಶೀರ್ ಖಾನ್ ತಲಾ ಒಂದು ವಿಕೆಟ್ ಪಟಡೆದು ಮಿಂಚಿದರು.

ಭಾರತ ತಂಡ

ಆದರ್ಶ್​ ಸಿಂಗ್, ಅರ್ಶಿನ್ ಕುಲಕರ್ನಿ, ಪ್ರಿಯಾಂಶು ಮೊಲಿಯಾ, ಉದಯ್ ಸಹರಾನ್(ನಾಯಕ), ಸಚಿನ್ ದಾಸ್, ಮುಶೀರ್ ಖಾನ್, ಅರವೆಲ್ಲಿ ಅವನೀಶ್, ಮುರುಗನ್ ಅಭಿಷೇಕ್, ರಾಜ್​ ಲಿಂಬಾನಿ, ನಮನ್ ತಿವಾರಿ, ಸೌಮಿ ಪಾಂಡೆ

RELATED ARTICLES

Related Articles

TRENDING ARTICLES