Wednesday, January 22, 2025

ಈಶ್ವರಪ್ಪ ಅವರ ಹಿರಿತನಕ್ಕೆ ಬೆಲೆ ಕೊಟ್ಟು ನೀವು ತಾವು ಅಂತ ಮಾತನಾಡುತ್ತಿದ್ದಾನೆ ನೆನಪಿರಲಿ: ಪ್ರಿಯಾಂಕ್​ ಖರ್ಗೆ

ಕಲಬುರ್ಗಿ: ಮಲ್ಲಿಕಾರ್ಜುನ ಖರ್ಗೆ ಅವರ ಹೊಟ್ಟೆಯಲ್ಲಿ ಕೆಟ್ಟ ಹಳ ಹುಟ್ಟಿದೆ ಎನ್ನುವ ಬಿಜೆಪಿ ಮುಖಂಡ ಕೆ,ಎಸ್​ ಈಶ್ವರಪ್ಪ ಅವರ ಮಾತಿಗೆ ಸಚಿವ ಪ್ರಿಯಾಂಕ್​ ಖರ್ಗೆ ಖಾರವಾಗಿ ಪತ್ರಿಕ್ರಯೆ ನೀಡಿದ್ದಾರೆ.

ಮುಖ್ಯಮಂತ್ರಿಗಳ ಹೇಳುವಂತೆ ಈಶ್ವರಪ್ಪನವರ ಮೆದುಳು ಮತ್ತು ನಾಲಿಗೆಗೆ ಸಂಪರ್ಕ ಕಡಿತವಾಗಿದೆ, ನಿಮ್ಮ ಹಿರಿತನಕ್ಕೆ ಗೌರವಕೊಟ್ಟು ನೀವು, ತಾವು ಎಂದು ಸಂಬೋದಿಸುತ್ತಿದ್ದೇನೆ, ಒಂದು ವಿಷಯವನ್ನು ಮರಿಯಬೇಡಿ ನನ್ನ ಮೈನಲ್ಲು ಡಾ.ಬಿ,ಆರ್ ಅಂಬೇಡ್ಕರ್ ಅವರ ರಕ್ತ ಹರಿಯುತ್ತಿದೆ ಎಂದ ಎಚ್ಚರಿಕೆ ನೀಡಿದರು.

ಇದನ್ನೂ ಓದಿ: ಬಾಲ ರಾಮನ ಕಣ್ಣು ಕೆತ್ತಿದ ಬೆಳ್ಳಿ ಸುತ್ತಿಗೆ, ಚಿನ್ನದ ಉಳಿ ಫೋಟೊ ಬಹಿರಂಗ ಪಡಿಸಿದ ಶಿಲ್ಪಿ ಅರುಣ್ ಯೋಗಿ!

ಈಶ್ವರಪ್ಪನವರ ಮಾತಿಗೆ ಬಿಜೆಪಿಯವರೇ  ಬೆಲೆ ಕೊಡುತ್ತಿಲ್ಲ ಎಂದ ಮೇಲೆ ನಾವ್ಯಾಕೆ ಬೆಲೆ ಕೊಡಬೇಕು, ಎಲ್ಲಾದ್ರು ಬಟ್ಟೆ ಹರಿದುಕೊಳ್ಳಲಿ, ಎಲ್ಲಾದ್ರು ಬಾಯಿ ಬಡ್ಕೊಳ್ಳಿ, ಏನಾದ್ರು ಮಾಡ್ಕೊಳ್ಳಲಿ, ನನಗೇನು ಆಗಬೇಕಾಗಿದೆ, ಜನರು ನಮಗೆ ಆಶೀರ್ವಾದ ಮಾಡಿದ್ದಾರೆ ಅವರ ಸೇವೆ ಮಾಡುವುದಷ್ಟೆ ನಮ್ಮ ಕೆಲಸ. 

ನಿಮಗೇ ಮಾತನಾಡಬೇಕು ಅಂತ ಇದ್ರೆ ಇಷ್ಟೆ ರಾಜಾರೋಷವಾಗಿ ಕೇಂದ್ರ ಸರ್ಕಾರದ ಮುಂದೆ ಹೋಗಿ ಕರ್ನಾಟಕ ಮತ್ತು ರಾಜ್ಯದ ಜನತೆಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಮಾತನಾಡಿ, ಅದನ್ನು ಬಿಟ್ಟು ನಾನು ಕಟ್ಟು ಹುಳಾನೋ, ಒಳ್ಳೆ ಹುಳಾನೋ ತಗೊಂಡು ನಿಮಗೇನು ಮಾಡೋದು ಇದೆ, ನಮ್ಮ ತಂದೆ ತಾಯಿ ತಾನೆ ನನ್ನನ್ನ ಸಂಬಾಳಿಸುತ್ತಿರುವುದು, ಚಿತ್ತಾಪುರದ ಜನತೆ ತಾನೆ ನಮಗೆ ಆಶೀರ್ವಾದ ಮಾಡಿರೋದು, ಇವರಿಗ್ಯಾಕೆ ಜನ ಆಶೀರ್ವಾದ ಮಾಡುತ್ತಿಲ್ಲ ಅದನ್ನ ಹೇಳ್ಳಿ ಮೊದಲು ಎಂದು ಗುಡುಗಿದರು.

RELATED ARTICLES

Related Articles

TRENDING ARTICLES