Tuesday, January 21, 2025

ಪಾಕಿಸ್ತಾನವನ್ನು ದ್ವೇಷಿಸುವುದು ನನ್ನ ರಕ್ತದಲ್ಲೇ ಇದೆ, ‘ಜೈ ಶ್ರೀರಾಮ್’ ಎಂದರೆ ತಪ್ಪೇನು? : ಮೊಹಮ್ಮದ್ ಶಮಿ

ಬೆಂಗಳೂರು : ಪಾಕಿಸ್ತಾನವನ್ನು ದ್ವೇಷಿಸುವುದು ನನ್ನ ರಕ್ತದಲ್ಲೇ ಇದೆ ಎಂದು ಭಾರತದ ಸ್ಟಾರ್ ಬೌಲರ್ ಮೊಹಮ್ಮದ್ ಶಮಿ ಹೇಳಿದ್ದಾರೆ.

ಸಂದರ್ಶನದಲ್ಲಿ ಅಯೋಧ್ಯೆ ರಾಮಮಂದಿರದ ಕುರಿತು ಮೊಹಮ್ಮದ್ ಶಮಿ ಆಶ್ಚರ್ಯ ಮತ್ತು ಕುತೂಹಲಕಾರಿ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಶ್ರೀಲಂಕಾ ವಿರುದ್ಧದ ಏಕದಿನ ವಿಶ್ವಕಪ್ ಪಂದ್ಯದ ವೇಳೆ ಬೌಂಡರಿ ಗೆರೆಯತ್ತ ನಿಂತಿದ್ದ ನನ್ನನ್ನು ನೋಡಿ ಅಭಿಮಾನಿಗಳು ಜೈ ಶ್ರೀ ರಾಮ್ ಎಂದು ಘೋಷಣೆ ಕೂಗಲು ಶುರು ಮಾಡಿದರು. ಆದರೆ, ಅಭಿಮಾನಿಗಳು ಆ ರೀತಿ ಕೂಗಿದ್ದರಲ್ಲಿ ಏನು ತಪ್ಪಿಲ್ಲ ಎಂದು ಹೇಳಿದ್ದಾರೆ.

ಸಾವಿರ ಸಲ ಜೈ ಶ್ರೀರಾಮ್ ಹೇಳಲಿ

ಪ್ರತಿಯೊಂದು ಧರ್ಮದಲ್ಲಿಯೂ ಇತರ ಧರ್ಮವನ್ನು ಇಷ್ಟ ಪಡದ ಐದಾರು ಜನರು ಇರುತ್ತಾರೆ. ಅದಕ್ಕೆ ನನ್ನ ಯಾವುದೇ ಅಭ್ಯಂತರವಿಲ್ಲ. ಅಯೋಧ್ಯೆಯಲ್ಲಿ ರಾಮಮಂದಿರವನ್ನು ಕಟ್ಟಿರುವಾಗ ಜೈ ಶ್ರೀ ರಾಮ್ ಹೇಳುವುದರಲ್ಲಿ ಏನು ತೊಂದರೆ? ಸಾವಿರ ಸಲ ಜೈ ಶ್ರೀರಾಮ್ ಹೇಳಲಿ ಬಿಡಿ ಎಂದು ತಿಳಿಸಿದ್ದಾರೆ.

ನನ್ನ ದೇಶವೇ ನನ್ನ ಮೊದಲ ಆದ್ಯತೆ

ಒಂದು ವೇಳೆ ನಾನು ಅಲ್ಲಾಹು ಅಕ್ಬರ್ ಎಂದು ಹೇಳಲು ಬಯಸಿದರೆ, ನಾನು ಒಬ್ಬ ಮುಸ್ಲಿಂ, ಅದರಲ್ಲೂ ಒಬ್ಬ ಭಾರತೀಯನಾಗಿರುವುದಕ್ಕೆ ನಾನು ತುಂಬಾ ಹೆಮ್ಮೆ ಪಡುತ್ತೇನೆ. ಕೆಲವರು ನನ್ನ ದೇಶದ ಬಗ್ಗೆ, ಇನ್ನು ಕೆಲವರು ನನ್ನ ಧರ್ಮದ ಬಗ್ಗೆ ಮಾತನಾಡಿದರು. ಆದರೆ ,ಅಲ್ಲಿ ನನ್ನ ಬೌಲಿಂಗ್ ಅನ್ನು ಹೊಗಳುವ ಬದಲು ಈ ವಿವಾದವನ್ನೇ ಹೈಲೈಟ್ ಮಾಡಿದ್ದಾರೆ. ನಾನು ಕೂಡ ಭಾರತೀಯ. ನನ್ನ ದೇಶವೇ ನನ್ನ ಮೊದಲ ಆದ್ಯತೆ ಎಂದು ಮೊಹಮ್ಮದ್ ಶಮಿ ಹೇಳಿದ್ದಾರೆ.

RELATED ARTICLES

Related Articles

TRENDING ARTICLES