Sunday, December 22, 2024

Eiffel Tower: ಫ್ರಾನ್ಸ್‌ನ ಐಫೆಲ್ ಟವರ್‌ನಲ್ಲಿ UPI ಸೌಲಭ್ಯ!

ಮುಂಬೈ : ಇನ್ಮುಂದೆ ಫ್ರಾನ್ಸ್‌ನ ಪ್ರಸಿದ್ಧ ಪ್ರವಾಸಿ ತಾಣ ಐಫೆಲ್ ಟವರ್‌ನಲ್ಲಿ ಯುಪಿಐ ಸೌಲಭ್ಯ ದೊರೆಯಲಿದೆ.

ಹೌದು, ಭಾರತದ ಡಿಜಿಟಲ್ ಪಾವತಿ ವ್ಯವಸ್ಥೆ ವಿಶ್ವಮಾನ್ಯವಾಗಲಾರಂಭಿಸಿದ್ದು, ದೇಶಗಳು ಭಾರತೀಯರಿಗೆ ಈ ಸೌಲಭ್ಯ ಒದಗಿಸಲಾರಂಭಿಸುತ್ತದೆ.

ಫ್ರಾನ್ಸ್ ದೇಶಕ್ಕೆ ನೀಡುವ ಭಾರತೀಯ ಪ್ರವಾಸಿಗರು ಮುಂದೆ ದೇಶದಲ್ಲಿಯೂ ರೂಪದಲ್ಲಿ ಹಣವನ್ನು ಪಾವತಿಸಬಹುದು. ಭಾರತದಲ್ಲಿ ಜನಪ್ರಿಯವಾಗಿರುವ ಯುನಿ ಪೇಮೆಂಟ್ಸ್ ಇಂಟರ್‌ಫೇಸ್ (ಯುಪಿಐ )ಗೆ ಫ್ರಾನ್ಸ್‌ನಲ್ಲಿಯೂ ಚಾಲನೆ ನೀಡಲಾಗುತ್ತದೆ.ಇದರಿಂದ ಭಾರತೀಯರಿಗೆ ಫ್ರಾನ್ಸ್‌ನಲ್ಲಿ ” ಭಾರತದ ಕರೆನ್ಸಿಯ ಮೂಲಕವೇ ವ್ಯವಹಾರ ನಡೆಸಲು ಅನುಕೂಲವಾಗಿದೆ.

ಮುಂಗಡ ಕಾಯ್ದಿರಿಸುವ ಸೌಲಭ್ಯವೂ ಲಭ್ಯ ಫ್ರಾನ್ಸ್‌ನ ಪ್ರಸಿದ್ಧ ಪ್ರವಾಸಿ ತಾಣ ಐಫೆಲ್ ಟವರ್‌ನಲ್ಲಿ ಯುಪಿಐ ಸೇವೆಗೆ ಇತ್ತೀಚೆಗೆ ಚಾಲನೆ ನೀಡಲಾಗಿದೆ. ಇದು ಭಾರತೀಯ ಪ್ರವಾಸಿಗರಿಗೆ ಅತ್ಯಂತ ಸಹಾಯಕಾರಿಯಾಗಿದ್ದು, ಇನ್ನುಮುಂದೆ ಫ್ರಾನ್ಸ್‌ನಲ್ಲಿಯೂ ಭಾರತೀಯ ಕರೆನ್ಸಿಯಾದ ರೂಪಾಯಿಯಲ್ಲಿ ಹಣವನ್ನು ಪಾವತಿಸಬಹುದು. ಅಲ್ಲದೇ ಐಫೆಲ್ ಟವರ್‌ಗೆ ಭೇಟಿ ನೀಡ ಬಯಸುವ ಭಾರತೀಯರು ಯುಪಿಐ ಮೂಲಕ ಮುಂಗಡ ಕಾಯ್ದಿರಿಸುವ ಸೇವೆಯನ್ನು ಪಡೆಯಬಹುದು.

ಇದನ್ನೂ ಓದಿ: ಒಂದು ತಿಂಗಳೊಳಗೆ ಜನ ಸ್ಪಂದನೆ ಅಹವಾಲುಗಳನ್ನು ಬಗೆಹರಿಸಿ: ಸಿಎಂ ಖಡಕ್​ ಸೂಚನೆ

2ನೇ ಸ್ಥಾನದಲ್ಲಿ ಭಾರತೀಯ ಪ್ರವಾಸಿಗರು ಫ್ರಾನ್ಸ್‌ನ ಐಫೆಲ್ ಟವರ್‌ಗೆ ಭೇಟಿ ನೀಡುವ ಅಂತಾರಾಷ್ಟ್ರೀಯ ಪ್ರವಾಸಿಗರ ಪೈಕಿ ಭಾರತೀಯರು ಎರಡನೇ ಸ್ಥಾನದಲ್ಲಿದ್ದು, ಅತೀ ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿಗೆ ಭೇಟಿ ನೀಡುತ್ತಾರೆ. ಈ ಹಿಂದೆ ಕ್ರೆಡಿಟ್ ಕಾರ್ಡ್ ಅಥವಾ ಡೆಬಿಟ್ ಕಾರ್ಡ್‌ಗಳ ಮೂಲಕ ಹಣವನ್ನು ಪಾವತಿಸಬೇಕಿತ್ತು. ಇಲ್ಲವೇ ವಿದೇಶಿ ಕರೆನ್ಸಿಯನ್ನು ಕೊಂಡೊಯ್ಯಬೇಕಿತ್ತು. ಈಗ ಯುಪಿಐ ಬಳಕೆಗೆ ಅವಕಾಶ ಕಲ್ಪಿಸಿರುವುದರಿಂದ ಭಾರತೀಯರು ಈ ಎಲ್ಲ ಚಿಂತೆಗಳಿಂದ ಮುಕ್ತರಾಗಿದ್ದು, ಸುಲಭವಾಗಿ ಪಾವತಿಗಳನ್ನು ಮಾಡಬಹುದಾಗಿದೆ.

RELATED ARTICLES

Related Articles

TRENDING ARTICLES