Monday, December 23, 2024

ಸಂಘದ ಸ್ವತ್ತಿನ ವಿಚಾರಕ್ಕೆ ಬಿತ್ತು ಎರಡು ಹೆಣ: ಬೆಚ್ಚಿ ಬಿದ್ದ ಬೆಂಗಳೂರು!

ಬೆಂಗಳೂರು : ಕುಂಬಾರ ಸಂಘಕ್ಕೆ ಸೇರಿದ ಸ್ವತ್ತು ವಿಚಾರವಾಗಿ ಇಬ್ಬರು ವ್ಯಾಪಾರಿಗಳನ್ನು ಚಾಕುವಿನಿಂದ ಇರಿದು ವ್ಯಕ್ತಿಯೊಬ್ಬ ಹತ್ಯೆ ಮಾಡಿರುವ ಘಟನೆ ಹಲಸೂರ್ ಗೇಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಸುರೇಶ್ (55) ಹಾಗೂ ಮಹೇಂದ್ರ (68) ಕೊಲೆಯಾದವರು. ಭದ್ರ ಕೊಲೆ ಆರೋಪಿ. ಕುಂಬಾರ ಪೇಟೆಯ ಹರಿ ಮಾರ್ಕೇಟಿಂಗ್ಸ್‌ ಕಟ್ಟಡದ ಒಳಗೆ ಕೊಲೆ ನಡೆದಿದೆ. ಆರೋಪಿ ಭದ್ರ, ಮೃತರಿಬ್ಬರ ಸಂಬಂಧಿಕ ಎನ್ನಲಾಗಿದೆ.

ಇದನ್ನೂ ಓದಿ: ಕೇಂದ್ರ ವಿತ್ತ ಸಚಿವೆಗೆ ಸಿಎಂ ಕ್ಷಮೆ ಕೇಳಬೇಕು: ಯತ್ನಾಳ್​

ಕುಂಬಾರಪೇಟೆ ಮುಖ್ಯ ರಸ್ತೆಯಲ್ಲಿರುವ ನಾಲ್ಕು ಅಂತಸ್ತಿನ ವಾಣಿಜ್ಯ ಕಟ್ಟಡವನ್ನು ಕುಂಬಾರ ಸಂಘಕ್ಕೆ ಬಿಟ್ಟು ಕೊಡುವ ವಿಚಾರಕ್ಕೆ ವಿವಾದ ಉಂಟಾಗಿದ್ದು, ಕಳೆದ ಕೆಲ ವರ್ಷಗಳಿಂದ ಕೋರ್ಟ್‌ನಲ್ಲಿ ಕೇಸ್ ನಡೆಯುತ್ತಿತ್ತು. ಈ ಬಗ್ಗೆ ಸುರೇಶ್ ಬಳಿ ಮಾತನಾಡಲು ಆರೋಪಿ ಭದ್ರ ತೆರಳಿದ್ದ.

ಸುರೇಶ್‌ನನ್ನು ಹತ್ಯೆ ಮಾಡಲು ಮೊದಲೇ ಪ್ಲ್ಯಾನ್ ಮಾಡಿದ್ದ ಆರೋಪಿ ಸುರೇಶ್‌ ಮೇಲೆ ಹಲ್ಲೆ ನಡೆಸಿ ಚಾಕುವಿನಿಂದ ತಿವಿದಿದ್ದಾನೆ. ಈ ವೇಳೆ ಗಲಾಟೆ ಬಿಡಿಸಲು ಹೋಗಿದ್ದ ಮಹೇಂದ್ರಗೂ ಇರಿಯಲಾಗಿದೆ. ತಪ್ಪಿಸಿಕೊಳ್ಳಲು ಓಡಿದರೂ ಬಿಡದೆ ಇಬ್ಬರನ್ನೂ ಆರೋಪಿ ಭದ್ರ ಕೊಂದು, ನಂತರ ಪೊಲೀಸರಿಗೆ ಶರಣಾಗಿದ್ದಾನೆ. ಸದ್ಯ ಹಲಸೂರ್ ಗೇಟ್ ಪೊಲೀಸರಿಂದ ಆರೋಪಿ ಭದ್ರನ ತೀವ್ರ ವಿಚಾರಣೆ ನಡೆಯುತ್ತಿದೆ.

RELATED ARTICLES

Related Articles

TRENDING ARTICLES