Wednesday, January 22, 2025

ಖರ್ಗೆ ಕಪ್ಪು ಬಟ್ಟೆ ಧರಿಸಿ ಬಂದಿದ್ದು, ನಮಗೆ ಲಾಭವೇ ಆಗಿದೆ : ಮೋದಿ ವ್ಯಂಗ್ಯ

ನವದೆಹಲಿ : ಸಂಸತ್ ಕಲಾಪಕ್ಕೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಕಪ್ಪು ಬಟ್ಟೆ ಧರಿಸಿ ಬಂದಿದ್ದರು. ಇದು ಒಂದು ರೀತಿಯಲ್ಲಿ ನಮಗೆ ಲಾಭವೇ ಆಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಲೇವಡಿ ಮಾಡಿದರು.

ರಾಜ್ಯಸಭಾ ಸದಸ್ಯರಿಗೆ ಬೀಳ್ಕೊಡಿಗೆ ಹಿನ್ನೆಲೆ ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ನಮ್ಮ ಪರಂಪರೆಯಲ್ಲಿ ದೃಷ್ಟಿ ಬೀಳಬಾರದು ಎಂದು ದೃಷ್ಟಿ ಬೊಟ್ಟು ಇಡುವ ಪದ್ಧತಿ ಇದೆ ಎಂದು ಮಲ್ಲಿಕಾರ್ಜುನ ಖರ್ಗೆ ಕಾಲೆಳೆದರು.

ಭಾರತ ಕಳೆದ ಹತ್ತು ವರ್ಷಗಳಲ್ಲಿ ಸಮೃದ್ಧತೆಯ ಹೊಸ ಶಿಖರಗಳನ್ನು ಏರುತ್ತಿದೆ. ಒಂದು ರೀತಿಯ ಭವ್ಯವಾದ ದಿವ್ಯವಾದ ವಾತಾವರಣ ಸೃಷ್ಟಿಯಾಗಿದೆ. ಇದಕ್ಕೆ ದೃಷ್ಟಿ ಬೀಳದೆ ಇರಲಿ ಎಂದು ಮಲ್ಲಿಕಾರ್ಜುನ ಖರ್ಗೆ ಅವರಂಥವರು ಕಪ್ಪು ಬಟ್ಟೆ ಧರಿಸಿ ಬಂದಿದ್ದರು. ಇದಕ್ಕಾಗಿ ನಾನು ಅವರಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದು ಕುಟುಕಿದರು.

ದೇಶ ಉತ್ತರ-ದಕ್ಷಿಣ ಎಂದು ವಿಭಜನೆ

ಭಾರತ ಕೇವಲ ಒಂದು ಭೂಮಿಯ ತುಂಡು ಅಲ್ಲ. ದೇಶ ಎನ್ನುವುದೊಂದು ದೇಹ ಇದ್ದಂತೆ, ದೇಹದ ಯಾವುದೇ ಅಂಗ ಊನವಾದರೆ ಇಡೀ ದೇಹಕ್ಕೆ ನೋವಾಗುತ್ತದೆ. ಕಾಂಗ್ರೆಸ್ಸಿಗರು ದೇಶವನ್ನು ಉತ್ತರ-ದಕ್ಷಿಣ ಎಂದು ವಿಭಜಿಸಲು ಪ್ರಯತ್ನಿಸುತ್ತಿದ್ದಾರೆ. ರಾಜಕೀಯ ಸ್ವಾರ್ಥಕ್ಕಾಗಿ ದೇಶ ಒಡೆಯುವ ಪ್ರಯತ್ನ ಮಾಡಬೇಡಿ ಎಂದು ಪ್ರಧಾನಿ ಮೋದಿ ಛೇಡಿಸಿದರು.

RELATED ARTICLES

Related Articles

TRENDING ARTICLES