Friday, January 10, 2025

ಕೇಂದ್ರ ವಿತ್ತ ಸಚಿವೆಗೆ ಸಿಎಂ ಕ್ಷಮೆ ಕೇಳಬೇಕು: ಯತ್ನಾಳ್​

ಬೆಂಗಳೂರು: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​​​ಗೆ ಏಕವಚನದಲ್ಲಿ ಸಿಎಂ ಸಿದ್ದರಾಮಯ್ಯ ಮಾತನಾಡಿದ್ದಾರೆ ಎಂದು X ಖಾತೆಯಲ್ಲಿ ಶಾಸಕ ಬಸನಗೌಡ ಯತ್ನಾಳ್ ವಿಡಿಯೋ ಪೋಸ್ಟ್ ಮಾಡಿ ಆಕ್ರೋಶ ಹೊರಹಾಕಿದ್ದಾರೆ.

ಸಿಎಂ ಕ್ಷಮೆ‌ ಕೇಳುವಂತೆ ಆಗ್ರಹಿಸಿ ಶಾಸಕ ಯತ್ನಾಳ್ ತಮ್ಮ ಎಕ್ಸ್​ ಖಾತೆಯಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಬಾಯ್ತಪ್ಪಿನಿಂದ, ಕಣ್ತಪ್ಪಿನಿಂದ, ಆ ಗಳಿಗೆಯಲ್ಲಿ ಹೀಗಾಯ್ತು, ನಾನು ಹಳ್ಳಿಯವ ಹಾಗೆ ಮಾತನಾಡಿದೆ ಎಂದು ಸಬೂಬು ಹೇಳಿ ಮುಚ್ಚಿ ಹಾಕುವ ಪ್ರಯತ್ನ ಮುಖ್ಯಮಂತ್ರಿಗಳು ಮಾಡಬಾರದು.

ಇದನ್ನೂ ಓದಿ: ‘ಬಿಗ್ ಬಾಸ್, ಸಿಸಿಎಲ್ ಬಗ್ಗೆ ವ್ಯಂಗ್ಯ ಸರಿಯಲ್ಲ’!: ಕಿಚ್ಚ ಸುದೀಪ್​

ಈ ಕೂಡಲೇ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಏಕವಚನದಲ್ಲಿ ಮಾತನಾಡಿದ್ದಕ್ಕೆ ಸನ್ಮಾನ್ಯ ಮುಖ್ಯಮಂತ್ರಿಗಳು ಬೇಷರತ್ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ,

RELATED ARTICLES

Related Articles

TRENDING ARTICLES