ಮ್ಯಾಕ್ಸ್ ಸಿನಿಮಾ ಕುರಿತಂತೆ ಅಪ್ ಡೇಟ್ ಕೊಡಿ ಅಂತ ಕಿಚ್ಚನ ಅಭಿಮಾನಿಗಳು ಪದೇ ಪದೇ ಸೋಷಿಯಲ್ ಮೀಡಿಯಾದಲ್ಲಿ ಪ್ರಶ್ನೆಗಳನ್ನು ಕೇಳುತ್ತಿದ್ದರು. ದಿನವೂ ನೂರಾರು ಕಾಮೆಂಟ್ ಗಳು ಈ ಸಿನಿಮಾದ ಮೇಲೆಯೇ ಇರುತ್ತಿತ್ತು. ಹಾಗಾಗಿ ಕಿಚ್ಚ ಸುದೀಪ್ ಇಂದು ಅಭಿಮಾನಿಗಳಿಗೆ ಪತ್ರವನ್ನೇ ಬರೆದಿದ್ದಾರೆ.
ಅಭಿಮಾನಿಗಳ ಪ್ರಶ್ನೆಗಳಿಗೆ ಸ್ಪಂದಿಸಿದ ಕಿಚ್ಚ ಸುದೀಪ್ ತಮ್ಮ ಎಕ್ಸ್ ಖಾತೆಯಲ್ಲಿ ಪತ್ರವೊಂದನ್ನು ಹಂಚಿಕೊಂಡಿದ್ದಾರೆ, ಈ ಪತ್ರದಲ್ಲಿ ಮ್ಯಾಕ್ಸ್ ಸಿನಿಮಾ ಮತ್ತು ಬಿಗ್ ಬಾಸ್ ಕುರಿತು ವ್ಯಂಗ್ಯ ಸರಿಯಲ್ಲ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಮೊದಲ ಜನಸ್ಪಂದನದಲ್ಲಿ ಶೇ. 98 ರಷ್ಟು ಅರ್ಜಿ ವಿಲೇವಾರಿ: ಸಿಎಂ ಸಿದ್ದರಾಮಯ್ಯ
ಮ್ಯಾಕ್ಸ್ ಅಪ್ ಡೇಟ್ ಕೇಳುವ ನೆಪದಲ್ಲಿ ಸಿಸಿಎಲ್ ಮತ್ತು ಬಿಗ್ ಬಾಸ್ ಅನ್ನು ವ್ಯಂಗ್ಯ ಮಾಡಬೇಡಿ ಎಂದು ಅವರು ಕೇಳಿಕೊಂಡಿದ್ದಾರೆ. ಸಿಸಿಎಲ್ ಮತ್ತು ಬಿಗ್ ಬಾಸ್ನಲ್ಲಿ ಕಿಚ್ಚ ಕಳೆದು ಹೋಗಿದ್ದಾರೆ. ಹಾಗಾಗಿಯೇ ಸಿನಿಮಾ ಬೇಗ ಬೇಗ ಆಗುತ್ತಿಲ್ಲ ಎನ್ನುವ ಮಾತನ್ನೂ ಅಭಿಮಾನಿಗಳು ಆಡಿದ್ದರು. ಮ್ಯಾಕ್ಸ್ ಸಿನಿಮಾ ಎಲ್ಲಿಗೆ ಬಂತು? ಯಾವಾಗ ರಿಲೀಸ್ ಎಂದೆಲ್ಲ ಪ್ರಶ್ನೆ ಕೇಳಿದ್ದರು. ಎಲ್ಲದಕ್ಕೂ ಕಿಚ್ಚ ಪ್ರತಿಕ್ರಿಯೆ ನೀಡಿದ್ದಾರೆ. ಯಾರದೋ ಸಿನಿಮಾ ರಿಲೀಸ್ ಆಯಿತು ಅಂತ ಪೈಪೋಟಿಗಾಗಿ ಹಾಗೆಲ್ಲ ಅಪ್ ಡೇಟ್ ಕೊಡೋಕೆ ಆಗಲ್ಲವೆಂದು ಅವರು ಎಕ್ಸ್ ನಲ್ಲಿ ಬರೆದುಕೊಂಡಿದ್ದಾರೆ.
Mornnn wishes to alll you friends with a biggg hug 🤗♥️#MaxTheMovie pic.twitter.com/SfU11hbW9X
— Kichcha Sudeepa (@KicchaSudeep) February 8, 2024